ನರುಳ್ಳಿ ಸಮಸ್ಯೆ ಇದ್ದೋರು ನೋಡಿ ಒಳ್ಳೆ ಪರಿಹಾರ ನೀಡುವ ಮನೆಮದ್ದು

ನರುಳ್ಳಿ ತುಂಬಾ ಜನರನ್ನು ಕಾಡುತ್ತಿದೆ ಹಾಗೆಯೇ ತುಂಬಾ ಜನರಿಗೆ ನರುಳ್ಳಿ ಮುಖದ ಮೇಲೆ ಕಂಡು ಬಂದು ಮುಖದ ಸೌಂದರ್ಯವನ್ನು ಹಾಳು ಮಾಡುತ್ತಿದೆ ಅನೇಕ ಜನರು ಲೇಸರ್ ಟ್ರೀಟ್ಮೆಂಟ್ ಹಾಗೂ ಸರ್ಜರಿಗಳನ್ನು ಮಾಡಿಸುತ್ತಾರೆ ನರುಳ್ಳಿ ಒಂದು ಚರ್ಮ ವ್ಯಾಧಿ ಆಗಿದೆ ಬಿಸಿಲಿನಲ್ಲಿ ಹೆಚ್ಚು ಹೋಗುವುದರಿಂದಲೂ ನರುಳ್ಳಿ ಆಗುತ್ತದೆ ಸ್ಕಿನ್ ಅನ್ನು ಡ್ರೈ ಆಗಿಟ್ಟುಕೊಳ್ಳಬೇಕು ಹೆಚ್ಚು ಬೇವರುವುದರಿಂದ ನರುಳ್ಳಿ ಆಗುತ್ತದೆ ನರುಳ್ಳಿ ಯಿಂದ ಮುಕ್ತಿ ಹೊಂದಲು ಕೆಲವು ಮನೆಯಲ್ಲಿ ಇರುವ ಪದಾರ್ಥಗಳ ಮೂಲಕ ನಿವಾರಣೆ ಹೊಂದಬಹುದು

ತುಂಬಾ ಜನರಿಗೆ ನರುಳ್ಳಿ ಯಿಂದ ಮುಕ್ತಿ ಹೊಂದುವ ಮನೆಮದ್ದುಗಳ ಬಗ್ಗೆ ತಿಳಿದು ಇರುವುದು ಇಲ್ಲ ತುಂಬಾ ಜನರು ಲೇಸರ್ ಟ್ರೀಟ್ಮೆಂಟ್ ಹಾಗೂ ಸರ್ಜರಿಗಳನ್ನು ಮಾಡಿಸಿ ತುಂಬಾ ನೋವನ್ನು ಅನುಭವಿಸುತ್ತಾರೆ ಮತ್ತು ಹಣವೂ ಖರ್ಚಾಗುತ್ತದೆ ಮನೆಯಲ್ಲಿ ಮನೆ ಮದ್ದುಗಳನ್ನು ಮಾಡಿಕೊಂಡು ನರುಳ್ಳಿ ಇರುವ ಜಾಗಕ್ಕೆ ಲೇಪನ ಮಾಡುವ ಮೂಲಕ ಸಹ ಕ್ರಮೇಣವಾಗಿ ಕಡಿಮೆ ಮಾಡಬಹುದು ನಾವು ಈ ಲೇಖನದ ಮೂಲಕ ನರುಳ್ಳಿಯಿಂದ ನಿವಾರಣೆ ಹೊಂದುವ ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ.

ನರುಳ್ಳಿ ಮುಖದ ಮೇಲೆ ಕುತ್ತಿಗೆಯ ಭಾಗದಲ್ಲಿ ಮತ್ತು ಎದೆಯ ಭಾಗದಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ ಮುಖದ ಮೇಲೆ ನರುಳ್ಳಿ ಇದ್ದರೆ ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ ತುಂಬಾ ಜನರು ನರುಳ್ಳಿಯನ್ನು ಹೋಗಲಾಡಿಸಲು ಲೇಸರ್ ಟ್ರೀಟ್ಮೆಂಟ್ ಹಾಗೂ ಸರ್ಜರಿ ಮಾಡಿಸುತ್ತಾರೆ ಇದರಿಂದ ಅವರಿಗೆ ತುಂಬಾ ನೋವನ್ನು ಸಹಿಸಿಕೊಳ್ಳಬೇಕಾಗುತ್ತದೆ ಲೇಸರ್ ಟ್ರೀಟ್ಮೆಂಟ್ ಹಾಗೂ ಸರ್ಜರಿಯನ್ನು ಮಾಡಿಸಿಕೊಳ್ಳದೆ ಮನೆ ಮದ್ದಿನಲ್ಲಿ ಸಮಸ್ಯೆಯಿಂದ ನಿವಾರಣೆ ಹೊಂದಬಹುದು .

ಬಾಳೆ ಹಣ್ಣಿನ ಸಿಪ್ಪೆ ತುಂಬಾ ಉಪಯೋಗವನ್ನು ಹೊಂದಿದೆ ನರುಳ್ಳಿ ಇರುವ ಜಾಗದಲ್ಲಿ ಬಾಳೆಹಣ್ಣಿನ ಸಿಪ್ಪೆಯನ್ನು ಇಪ್ಪತ್ತನಾಲ್ಕು ಗಂಟೆ ಗಳ ಕಾಲ ಇಡಬೇಕು ಹೀಗೆ ಒಂದು ವಾರಗಳ ವರೆಗೆ ಮಾಡಿದರೆ ನರುಳ್ಳಿ ಸಮಸ್ಯೆಯಿಂದ ನಿವಾರಣೆ ಹೊಂದಬಹುದು ಹಾಗೆಯೇ ಸೇಬು ಹಣ್ಣಿನ ವಿನಿಗರ್ ಅಲ್ಲಿ ನರುಳ್ಳಿ ಜೀವಾಣುಗಳನ್ನು ಹೊಡೆ ಹೊಡೆದೊಡಿಸುವ ಶಕ್ತಿ ಇರುತ್ತದೆ ಹತ್ತಿಯಿಂದ ನರುಳ್ಳಿ ಇರುವ ಜಾಗಕ್ಕೆ ಪ್ರತಿದಿನ ಸೇಬು ಹಣ್ಣಿನ ವಿನಿಗರ್ ಹಚ್ಚಬೇಕು ಇದರಿಂದ ನರುಳ್ಳಿಯ ಗಾತ್ರ ಕಡಿಮೆ ಆಗುತ್ತದೆ.

ನರುಳ್ಳಿಯನ್ನು ಹೋಗಲಾಡಿಸಲು ಜೇನುತುಪ್ಪ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ನರುಳ್ಳಿ ಇರುವ ಜಾಗಕ್ಕೆ ಜೇನುತುಪ್ಪವನ್ನು ಹಚ್ಚಿ ಬ್ಯಾಂಡೆಡ್ ಮಾಡಬೇಕು ಹೀಗೆ ಹದಿನೈದು ದಿನದವರೆಗೆ ಮಾಡಬೇಕು ಹೀಗೆ ಮಾಡುವ ಮೂಲಕ ನರುಳ್ಳಿ ಸಮಸ್ಯೆಯಿಂದ ಮುಕ್ತಿ ಹೊಂದಬಹುದು ನರುಳ್ಳಿ ಸಮಸ್ಯೆಯಿಂದ ನಿವಾರಣೆ ಹೊಂದಲು ಈರುಳ್ಳಿ ರಾಮಬಾಣವಾಗಿದೆ ಈರುಳ್ಳಿಯನ್ನು ಜಜ್ಜಿ ನರುಳ್ಳಿ ಇರುವ ಜಾಗದಲ್ಲಿ ಈರುಳ್ಳಿಯ ರಸವನ್ನು ಲೇಪನ ಮಾಡಬೇಕು ಇದರಿಂದ ನರುಳ್ಳಿ ಆದಷ್ಟು ಬೇಗ ಕರಗುತ್ತದೆ.

ಹಾಗೆಯೇ ಇಂಗುವ ಸುಣ್ಣ ಹಾಗೂ ತುಪ್ಪವನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ದಿನಕ್ಕೆ ನಾಲ್ಕರಿಂದ ಐದು ಬಾರಿ ನರುಳ್ಳಿ ಇರುವ ಜಾಗಕ್ಕೆ ಹಚ್ಚಬೇಕು ಹೀಗೆ ಒಂದು ವಾರಗಳ ವರೆಗೆ ಮಾಡಬೇಕು ಇದರಿಂದ ನರುಳ್ಳಿ ನಿವಾರಣೆ ಆಗುತ್ತದೆ ಹೀಗೆ ಸರ್ಜರಿ ಹಾಗೂ ಲೇಸರ್ ಟ್ರೀಟ್ಮೆಂಟ್ ಗಳ ಬಳಿ ಹೋಗಿ ನೋವು ಅನುಭವಿಸುವುದಕ್ಕಿಂತ ಮನೆಯಲ್ಲಿ ಇರುವ ಪದಾರ್ಥಗಳನ್ನು ಬಳಸಿ ನರುಳ್ಳಿ ಸಮಸ್ಯೆಯಿಂದ ನಿವಾರಣೆ ಹೊಂದಬಹುದು .

Leave a Comment

error: Content is protected !!