ಕಾಲುಗಳಲ್ಲಿ ಈ ನೋವು ಇದ್ರೆ ರಾತ್ರಿವೇಳೆ ಈ ಚಿಕ್ಕ ಕೆಲಸ ಮಾಡಿ ಸಾಕು


ಕಾಲುಗಳಲ್ಲಿ ಸೆಳೆತ ಮತ್ತು ಜುಮ್ಮೆನ್ನಿಸುವ ಅನುಭವವು ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದು ಸಲವಾದರೂ ಆಗುವುದು ಇದೆ. ಅದರಲ್ಲೂ ಇದು ರಾತ್ರಿ ಸಂದರ್ಭದಲ್ಲಿ ಹೆಚ್ಚಾಗಿ ಕಾಡುವುದು. ಇಂತಹ ಸಮಸ್ಯೆಯು ತೀವ್ರ ರೀತಿಯಲ್ಲಿ ನೋವು ಕೊಡುವುದು. ಈ ವೇಳೆ ಕಾಲುಗಳನ್ನು ಅಲ್ಲುಗಾಡಿಸಲು ಆಗದೆ ಇರುವ ರೀತಿಯ ನೋವು ಕಾಣಿಸುವುದು. ಕಾಲುಗಳಲ್ಲಿನ ಸ್ನಾಯುಗಳಲ್ಲಿ ಮೊದಲಿಗೆ ಸಂಕೋಚನ ಉಂಟಾಗುವುದು. ಇದು ಸೆಳೆತ ಮತ್ತು ಝಮ್ಮೆನ್ನಿಸುವ ಸೂಚನೆಯಾಗಿದ್ದು, ಇದರ ಬಳಿಕ ಸ್ನಾಯುಗಳಲ್ಲಿನ ಸೆಳೆತದೊಂದಿಗೆ ತೀವ್ರ ನೋವು ಮತ್ತು ಊತವು ಕಂಡುಬರುವುದು.

ಓಡುವುದು, ಕ್ರೀಡೆ ಅಥವಾ ತೂಕ ಎತ್ತುವ ವ್ಯಾಯಾಮದಲ್ಲಿ ಅತಿಯಾಗಿ ತೊಡಗಿಸಿಕೊಂಡಿದ್ದರೆ, ಆಗ ಸ್ನಾಯುಗಳಲ್ಲಿ ಸೆಳೆತ ಕಂಡುಬರುವುದು ಹೆಚ್ಚು. ಪೋಷಕಾಂಶಗಳ ಕೊರತೆ, ಸಿರೋಸಿಸ್, ಸ್ನಾಯುಗಳಲ್ಲಿ ನಿಶ್ಯಕ್ತಿ, ಅಡಿಸನ್ ಕಾಯಿಲೆ, ನಿರ್ಜಲೀಕರಣ, ಆಲ್ಕೋಹಾಲ್ ಸೇವನೆ, ಕಿಡ್ನಿ ವೈಫಲ್ಯ, ಥೈರಾಯ್ಡ್ ಸಮಸ್ಯೆ, ಟೈಪ್ 2 ಮಧುಮೇಹ, ನರಗಳಲ್ಲಿನ ಕಾಯಿಲೆ, ಬೊಜ್ಜು, ಎಲೆಕ್ಟ್ರೋಲೈಟ್ಸ್ ಗಳ ಅಸಮತೋಲನ, ಹಾರ್ಮೋನ್ ಅಸಮತೋಲನ, ನರ ಸಮಸ್ಯೆ ಇತ್ಯಾದಿಗಳು ಇದಕ್ಕೆ ಪ್ರಮುಖ ಕಾರಣಗಳು.

ಸ್ನಾಯುಗಳಲ್ಲಿ ಕಂಡುಬರುವಂತಹ ಈ ಸಮಸ್ಯೆಯನ್ನು ನಿವಾರಣೆ ಮಾಡುವುದು ಅತೀ ಅಗತ್ಯ. ಇದನ್ನು ಕಡಿಮೆ ಮಾಡಲು ಕೆಲವೊಂದು ಮನೆಮದ್ದುಗಳನ್ನು ಮನೆಯಲ್ಲೇ ತಯಾರಿಸಬಹುದು. ​ಶುಂಠಿ ಟೀ ಶುಂಠಿಯಲ್ಲಿ ಇರುವಂತಹ ಮೆಗ್ನಿಶಿಯಂ ಅಂಶವು ಕಾಲುಗಳಲ್ಲಿನ ಸೆಳೆತವನ್ನು ಪರಿಣಾಮಕಾರಿ ಆಗಿ ನಿವಾರಿಸುವುದು. ಇದು ರಕ್ತ ಸಂಚಾರವನ್ನು ಸುಧಾರಿಸುವುದು. ಪ್ರತಿನಿತ್ಯವೂ ಒಂದು ಕಪ್ ಶುಂಠಿ ಟೀ ಕುಡಿಯಿರಿ.

ಇದರ ಹಬೆಯನ್ನು ತೆಗೆದುಕೊಳ್ಳಬಹುದು ಮತ್ತು ಸ್ನಾನದ ವೇಳೆ ಕೂಡ ಇದನ್ನು ಬಳಸಬಹುದು. ಇದು ಬಿಸಿಯಾದ ಪರಿಣಾಮ ಉಂಟು ಮಾಡಿ ಸ್ನಾಯುಗಳಿಗೆ ಶಮನ ನೀಡುವುದು. ಸರಳ ಶುಂಠಿ ಚಾ ಬಳಸಿಕೊಂಡರೆ ಆಗ ಇದು ಇತರ ಕೆಲವು ಸಮಸ್ಯೆಗಳಾಗಿರುವಂತಹ ಹೊಟ್ಟೆ ನೋವು, ಜ್ವರ, ಶೀತ, ಕೆಮ್ಮು ಇತ್ಯಾದಿಗಳನ್ನು ನಿವಾರಿಸುವುದು. ಆಪಲ್ ಸೀಡರ್ ವಿನೇಗರ್ ನಲ್ಲಿ ಇರುವಂತಹ ಆರೋಗ್ಯ ಲಾಭಗಳು ಅಪಾರ. ಇದರಲ್ಲಿ ಇರುವ ಅಧಿಕ ಪೊಟಾಶಿಯಂ ಅಂಶವು ಕಾಲಿನಲ್ಲಿನ ಸ್ನಾಯು ಸೆಳೆತ ದೂರ ಮಾಡಲು ಒಳ್ಳೆಯ ಮನೆಮದ್ದು.

ಸ್ನಾಯುಗಳಲ್ಲಿ ಸೆಳೆತ ಕಂಡುಬರಲು ಪೊಟಾಶಿಯಂ ಕೊರತೆಯು ಒಂದು ಕಾರಣ. ಇದು ನಿರ್ಜಲೀಕರಣವನ್ನು ನಿವಾರಣೆ ಮಾಡುವ ಜತೆಗೆ ಇದರಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳು ದೇಹದಲ್ಲಿನ ದ್ರವಾಂಶವನ್ನು ಸಮತೋಲನದಲ್ಲಿ ಇಡುವುದು.ಸ್ನಾಯುಗಳಲ್ಲಿನ ಸೆಳೆತಕ್ಕೆ ತಂಪು ಶಾಖ ನೀಡಬಹುದು.

ತಂಪು ಶಾಖದಿಂದ ನೋವು ತಗ್ಗುವುದು ಮತ್ತು ಸ್ನಾಯುಗಳಲ್ಲಿ ಉರಿಯೂತ ಕಡಿಮೆ ಆಗಿ ಆರಾಮ ಸಿಗುವುದು. ಟವೆಲ್ ನಲ್ಲಿ ಐಸ್ ತುಂಡುಗಳನ್ನು ಕಟ್ಟಿಕೊಳ್ಳಿ. ಇದನ್ನು ಸ್ನಾಯುಗಳ ಮೇಲೆ ಇಡಿ ಮತ್ತು 15 ನಿಮಿಷ ಕಾಲ ಹಾಗೆ ಬಿಡಿ. ಇದನ್ನು ಎರಡು ಗಂಟೆಗೊಮ್ಮೆ ಪುನರಾವರ್ತನೆ ಮಾಡಿ. ಸ್ನಾಯುಗಳಿಗೆ ಆರಾಮ ಸಿಗಲು ತಣ್ಣೀರಿನ ಸ್ನಾನ ಮಾಡಬಹುದು. ಆಗಾಗ ಕಾಲಿನ ಸೆಳೆತ ಉಂಟಾಗುತ್ತಿದ್ದರೆ ಈ ಟಿಪ್ಸ್ ಅನುಸರಿಸಿ.


Leave A Reply

Your email address will not be published.