ನಾವು ದೇಹದ ಕೆಲವು ವಿಷಯಗಳ ಬಗ್ಗೆ ಮಾತ್ರ ಗಮನ ಕೊಡುತ್ತೇವೆ ಆದರೆ ಯೂರಿಕ್ ಆಸಿಡ್ ಬಗ್ಗೆ ಸಾಮಾನ್ಯವಾಗಿ ತಿಳಿದುಕೊಳ್ಳುವುದಿಲ್ಲ. ಯೂರಿಕ್ ಆಸಿಡ್ ಎಂದರೇನು ಅದರಿಂದ ಆಗುವ ಸಮಸ್ಯೆಗಳು ಯಾವುವು ಹಾಗೂ ಯೂರಿಕ್ ಆಸಿಡ್ ದೇಹದಲ್ಲಿ ಸಂಗ್ರಹವಾಗದಂತೆ ನೋಡಿಕೊಳ್ಳುವುದು ಹೇಗೆ ಎಂಬೆಲ್ಲಾ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಪ್ಯೂರಿನ್ ಅಂಶ ಹೆಚ್ಚಾಗಿರುವ ಆಹಾರವನ್ನು ಸೇವಿಸುವುದರಿಂದ ದೇಹದಲ್ಲಿ ಪ್ಯೂರಿನ್ ಅಂಶ ಯೂರಿಕ್ ಆಸಿಡ್ ಆಗಿ ಕನ್ವರ್ಟ್ ಆಗುತ್ತದೆ. ಪ್ರೊಟೀನ್ ಆಹಾರಗಳಲ್ಲಿ ಪ್ಯೂರಿನ್ ಅಂಶ ಹೆಚ್ಚಾಗಿರುತ್ತದೆ. ಯೂರಿಕ್ ಆಸಿಡ್ ನ್ನು ಫಿಲ್ಟರ್ ಮಾಡಿ ಹೊರ ಹಾಕುವ ಕೆಲಸವನ್ನು ಕಿಡ್ನಿ ಮಾಡುತ್ತದೆ. ಕಿಡ್ನಿ ಸರಿಯಾಗಿ ಕೆಲಸ ಮಾಡದೆ ಇದ್ದರೆ ಯೂರಿಕ್ ಆಸಿಡ್ ನಮ್ಮ ದೇಹದಲ್ಲಿ ಹೆಚ್ಚಾಗುತ್ತದೆ. ಇದು ಕಾಲಿನ ಹೆಬ್ಬೆರಳು, ಹಿಮ್ಮಡಿ, ಗಂಟುಗಳಲ್ಲಿ ಸಂಗ್ರಹವಾಗುತ್ತದೆ. ಇದರಿಂದ ಜಾಯಿಂಟ್ ಪೇನ್, ಕಿಡ್ನಿಯಲ್ಲಿ ಕಲ್ಲಾಗುವುದು, ಗಂಟುಗಳಲ್ಲಿ ನೋವು ಆಗುತ್ತದೆ. ಆದ್ದರಿಂದ ಕಿಡ್ನಿ ಸರಿಯಾಗಿ ಕೆಲಸ ಮಾಡಲು ನೀರನ್ನು ಚೆನ್ನಾಗಿ ಕುಡಿಯಬೇಕು. ಯೂರಿಕ್ ಆಸಿಡ್ ದೇಹದ ಹೊರಗೆ ಹೋಗಿಲ್ಲದಿದ್ದರೆ ರಕ್ತದಲ್ಲಿ ಸೇರಿಕೊಂಡು ಅನಾರೋಗ್ಯಕರ ಸಮಸ್ಯೆಗೆ ಕಾರಣವಾಗುತ್ತದೆ ಯೂರಿಕ್ ಆಸಿಡ್ ಕಡಿಮೆ ಮಾಡಲು ಹಾಲು ಮತ್ತು ಹಾಲಿನ ಉತ್ಪನ್ನ, ಮಾಂಸಹಾರ ಮೀನು, ಮಟನ್, ಕೆಲವು ಸೊಪ್ಪು ಪಾಲಕ್, ಹೂಕೋಸು, ಹಸಿರು ಬಟಾಣಿ ಮತ್ತು ಕೆಲವು ತರಕಾರಿಗಳು, ರಾಜ್ಮಾ, ಬೇಳೆ ಕಾಳುಗಳು, ಉಪ್ಪಿನಕಾಯಿ, ಬಿಳಿ ಅಕ್ಕಿ, ಸಕ್ಕರೆ, ಮೈದಾ, ಬೇಕರಿ ತಿನಿಸುಗಳನ್ನು ಕಡಿಮೆ ಸೇವಿಸಬೇಕು ಇವುಗಳಲ್ಲಿ ಪ್ಯೂರಿನ್ ಅಂಶ ಹೆಚ್ಚಿರುತ್ತದೆ. ಸಿಗರೇಟ್, ಆಲ್ಕೋಹಾಲ್ ಸೇವನೆಯನ್ನು ಮಾಡಬಾರದು. ಯೂರಿಕ್ ಆಸಿಡ್ ಕಡಿಮೆ ಮಾಡಲು ಸರಿಯಾಗಿ ನೀರು ಕುಡಿಯಬೇಕು ಪ್ರತಿದಿನ 3 ಲೀಟರ್ ನೀರನ್ನು ಕುಡಿಯಬೇಕು. ಸಿಟ್ರಿಕ್ ಆಸಿಡ್ ಇರುವ ಆಹಾರ ನಿಂಬೆ, ಕಿತ್ತಳೆ, ದಾಳಿಂಬೆ, ಪೈನಾಪಲ್ ಇವುಗಳನ್ನು ಹೆಚ್ಚು ಸೇವಿಸಿದಾಗ ಯೂರಿಕ್ ಆಸಿಡ್ ಕಡಿಮೆಯಾಗುತ್ತದೆ. ಲಿಂಬೂ ಪಾನಕವನ್ನು ಕುಡಿಯುವುದರಿಂದ ಯೂರಿಕ್ ಆಸಿಡ್ ಕಡಿಮೆಯಾಗುತ್ತದೆ.

ಆಪಲ್ ವಿನಿಗರ್ ಅನ್ನು ಕುಡಿಯಬೇಕು ಆಗ ಯೂರಿಕ್ ಆಸಿಡ್ ಕಡಿಮೆ ಆಗುತ್ತದೆ ಹಾಗೂ ವಿಟಮಿನ್ ಸಿ ಇರುವ ಆಹಾರವನ್ನು ಸೇವಿಸಬೇಕು. ಸೇಬು, ಕಿತ್ತಳೆ, ಕರಬೂಜ, ಬೆಟ್ಟದ ನೆಲ್ಲಿಕಾಯಿ, ಸ್ಟ್ರಾಬೆರಿ ಈ ಹಣ್ಣುಗಳನ್ನು ‌ಹೆಚ್ಚು ಸೇವಿಸಬೇಕು.‌ ವಾರದಲ್ಲಿ 3-4 ಸಲ ಎಳನೀರು ಕುಡಿಯಬೇಕು. ತರಕಾರಿಯಲ್ಲಿ ಮೂಲಂಗಿ, ಬಿಟರೂಟ್ ನಾರಿನ ಅಂಶ ಹೆಚ್ಚಾಗಿರುವ ಆಹಾರವನ್ನು ತಿನ್ನಬೇಕು. ಆಲಿವ್ ಆಯಿಲ್ ನಲ್ಲಿ ಅಡುಗೆ ಮಾಡಿ ಸೇವಿಸಬೇಕು. ಆಲೀವ್ ಆಯಿಲ್ ನಿಂದ ಯೂರಿಕ್ ಆಸಿಡ್ ಕಡಿಮೆಯಾಗುತ್ತದೆ. ಒಟ್ಟಿನಲ್ಲಿ ಪ್ರೊಟೀನ್ ಅಂಶ ಹೆಚ್ಚಿರುವ ಆಹಾರ ತಿನ್ನಬಾರದು ಎಂತಲ್ಲ ಅದಕ್ಕೆ ತಕ್ಕಂತೆ ನೀರನ್ನು ಕುಡಿಯಬೇಕು. ಯೂರಿಕ್ ಆಸಿಡ್ ಕಡಿಮೆಯಾಗಲು ಮೇಲೆ ಹೇಳಿದ ಆಹಾರವನ್ನು ಅನುಸರಿಸಿ ಯೂರಿಕ್ ಆಸಿಡ್ ನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ.

By admin

Leave a Reply

Your email address will not be published.