ಇದನ್ನು 7 ದಿನ ಹಚ್ಚಿದ್ರೆ ಸಾಕು ತಲೆಕೂದಲು ಸೊಂಪಾಗಿ ಬೆಳೆಯುತ್ತೆ

ಕೂದಲು ಉದುರುವಿಕೆ ಸಮಸ್ಯೆಯು ತುಂಬಾ ಸಮಸ್ಯೆಯನ್ನು ಉಂಟು ಮಾಡುವುದು. ಮಾಲಿನ್ಯ, ಒತ್ತಡ ಮತ್ತು ಕೆಟ್ಟ ಗುಣಮಟ್ಟದ ನೀರು ಇದು ಕೂದಲು ಉದುರುವಿಕೆಗೆ ಪ್ರಮುಖ ಕಾರಣಗಳು. ಜಡ ಜೀವನಶೈಲಿ, ಪೋಷಕಾಂಶಗಳ ಕೊರತೆ, ಅಲರ್ಜಿ, ಹಾರ್ಮೋನ್ ಅಸಮತೋಲನ, ಕೂದಲಿನ ಕೆಟ್ಟ ಆರೈಕೆ ಮತ್ತು ಅನುವಂಶೀಯವಾಗಿಯೂ ಇದು ಬರಬಹುದು. ತಜ್ಞರ ಪ್ರಕಾರ ಕೂದಲು ತೆಳ್ಳಗಾಗುವುದು ಮತ್ತು ಕೂದಲು ಉದುರುವಿಕೆ ಸಮಸ್ಯೆಯು ಇಂದಿನ ದಿನಗಳಲ್ಲಿ ಅತಿಯಾಗಿದೆ. ಕೂದಲು ಉದುರುವ ಸಮಸ್ಯೆ ಕಂಡು ಬಂದರೆ ಹೆಚ್ಚಿನವರು ಯಾವ ಎಣ್ಣೆ ಹಚ್ಚಬೇಕು, ಯಾವ ಶ್ಯಾಂಪೂ ಹಚ್ಚಬೇಕು ಎಂದು ತಲೆಕೆಡಿಸಿಕೊಳ್ಳುತ್ತಾರೆ. ಆದರೆ ಇವೆಲ್ಲಕ್ಕಿಂತ ಮುಖ್ಯವಾಗಿ ಕೂದಲು ಯಾವ ಕಾರಣಕ್ಕೆ ಉದುರುತ್ತದೆ ಎಂದು ತಿಳಿದುಕೊಂಡರೆ ಕೂದಲು ಉದುರುವುದನ್ನು ತಡೆಗಟ್ಟಬಹುದು. ಈ ಲೇಖನದ ಮೂಲಕ ನಾವು ಕೂದಲು ಬೆಳೆಯಲು ಮನೆ ಮದ್ದನ್ನು ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಕೂದಲು ಉದುರುವ ಸಮಸ್ಯೆ ಬಂದಾಗ ಮಾರ್ಕೆಟ್ ನಲ್ಲಿ ಸಿಗುವ ಶಾಂಪೂಗಳನ್ನೂ ಬಳಕೆ ಮಾಡಿರುತ್ತೀರ. ಆದರೆ ಯಾವುದೂ ಕೂಡಾ ಸರಿಯಾದ ಪರಿಣಾಮ ನೀಡಿರುವುದಿಲ್ಲ. ಆದರೆ ಈರುಳ್ಳಿ ಕೂದಲು ಉದುರುವ ಸಮಸ್ಯೆಗೆ ರಾಮಬಾಣ ಎನ್ನಬಹುದು. ಈರುಳ್ಳಿ ಬಳಕೆ ಮಾಡುವುದರಿಂದ ತಲೆಯಲ್ಲಿ ಹೊಟ್ಟು ಆಗುವುದಿಲ್ಲ ಕೂದಲು ಉದುರುವುದಿಲ್ಲ. ಒಂದು ವೇಳೆ ಒಂದೇ ಜಾಗದಲ್ಲಿ ಕೂದಲು ಉದುರುತ್ತಿದ್ದರೆ ಅಲ್ಲಿ ಮತ್ತೆ ಕೂದಲು ಹುಟ್ಟುತ್ತದೆ ಮತ್ತು ವಾರದಲ್ಲಿ ಉದ್ದವಾಗಿ ಮತ್ತು ದಪ್ಪವಾಗಿ ಬೆಳೆಯುತ್ತದೆ. ಅಷ್ಟೇ ಅಲ್ಲದೆ ಕೂದಲು ಹೊಳಪನ್ನು ಕೂಡ ಪಡೆದುಕೊಳ್ಳುತ್ತದೆ. ಈ ಮೂಲಕ ಕೂದಲು ಉದುರುವ ಎಲ್ಲಾ ಸಮಸ್ಯೆಗೆ ಈರುಳ್ಳಿ ಉತ್ತಮ ಪರಿಹಾರ ಎಂದು ಹೇಳಬಹುದು. ಇಲ್ಲಿರುವ ಸಲ್ಫರ್ ಅಂದರೆ ಗಂಧಕದ ಅಂಶ ಇದು ನಮ್ಮ ಕೂದಲಿನಲ್ಲಿ ಕಲೇಜಿನ ಎಂಬ ಅಂಶವನ್ನು ಬಿಡುಗಡೆ ಮಾಡುವುದರಿಂದ ನಮ್ಮ ಕೂದಲಿನ ಬುಡಕ್ಕೆ ರಕ್ತ ಸಂಚಾರ ಹೆಚ್ಚಾಗಿಸುತ್ತದೆ. ಇದು ಕೂದಲು ಉದುರದಂತೆ ತಡೆದು ಗಟ್ಟಿಯಾದ ಮತ್ತು ದಪ್ಪದಾದ ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಹಾಗಿದ್ದರೆ ನಾವು ಯಾವ ರೀತಿ ಉಪಯೋಗಿಸಿದರೆ ಪ್ರಯೋಜನವನ್ನು ಪಡೆದುಕೊಳ್ಳಬಹುದು? ಎಂದು ನೋಡುವುದಾದರೆ ಒಂದು ಮಧ್ಯಮ ಗಾತ್ರದ ಕೆಂಪು ಈರುಳ್ಳಿಯನ್ನು ತೆಗೆದುಕೊಂಡು ಅದನ್ನು ಕಟ್ ಮಾಡಿ ಇರುವೆ ಸಿಪ್ಪೆಯನ್ನು ಚೆನ್ನಾಗಿ ತೆಗೆದು ನೀರಿನಲ್ಲಿ ಇದನ್ನು ಒಮ್ಮೆ ತೊಳೆದುಕೊಳ್ಳಬೇಕು. ನೀರಿನಲ್ಲಿ ತೊಳೆಯುವುದರಿಂದ ಈರುಳ್ಳಿಯಲ್ಲಿ ಇರುವಂತಹ ಖಾರದ ಅಂಶವನ್ನು ತೆಗೆದಂತೆ ಆಗುತ್ತದೆ ಹಾಗಾಗಿ ನೀರಿನಲ್ಲಿ ತೊಳೆದುಕೊಳ್ಳಬೇಕು. ನಂತರ ಒಂದು ಕಾಟನ್ ಬಟ್ಟೆಯಿಂದ ಈರುಳ್ಳಿಯನ್ನು ಒರೆಸಿಕೊಳ್ಳಬೇಕು. ನಂತರ ಈರುಳ್ಳಿಯನ್ನು ಮತ್ತು ಚಿಕ್ಕದಾಗಿ ಕಟ್ ಮಾಡಿಕೊಂಡು ಮಿಕ್ಸಿ ಜಾರಿಗೆ ಹಾಕಿ ಇದರ ಜೊತೆಗೆ ಎರಡು ಟೇಬಲ್ ಸ್ಪೂನ್ ನಷ್ಟು ತೆಂಗಿನ ಎಣ್ಣೆಯನ್ನು ಹಾಕಿ ನೀರು ಸೇರಿಸದೆ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಸ್ಟೋವ್ ಮೇಲೆ ಒಂದು ಪಾತ್ರೆಯನ್ನು ಇಟ್ಟು ಅದಕ್ಕೆ ನಿಮಗೆ ಬೇಕಾದಷ್ಟು ಪ್ರಮಾಣದಲ್ಲಿ ತೆಂಗಿನ ಎಣ್ಣೆಯನ್ನು ಹಾಕಿ ಹಾಗೂ ಮೊದಲೇ ಮಾಡಿಕೊಂಡಂತಹ ಈರುಳ್ಳಿ ಪೇಸ್ಟ್ ಹಾಕಿ ತಳ ಹಿಡಿಯದ ಹಾಗೇ ಕೈಯಾಡಿಸುತ್ತಿರಬೇಕು. ಈ ರೀತಿ ಈರುಳ್ಳಿ ಎಣ್ಣೆ ಮಾಡಿಟ್ಟುಕೊಂಡು ಎಷ್ಟು ದಿನ ಬೇಕಿದ್ದರೂ ಬಳಸಬಹುದು.

ಇನ್ನು ಈ ಎಣ್ಣೆಯನ್ನು ಎರಡು ವರ್ಷ ಮೇಲ್ಪಟ್ಟ ಮಕ್ಕಳಿಗೂ ಕೂಡಾ ಬಳಕೆ ಮಾಡಬಹುದು ಹಾಗೇ ಹೆಣ್ಣುಮಕ್ಕಳು ಗಂಡುಮಕ್ಕಳು ಕೂಡಾ ಬಳಸಬಹುದು. ಈರುಳ್ಳಿ ಪೇಸ್ಟ್ ಸ್ವಲ್ಪ ಕಂದು ಬಣ್ಣ ಬರುವವರೆಗೆ ಸಣ್ಣ ಉರಿಯಲ್ಲಿ ಫ್ರೈ ಮಾಡಿಕೊಂಡು ಸ್ವಲ್ಪ ತಣ್ಣಗಾದ ನಂತರ ಸೋಸಿ ಡಬ್ಬದಲ್ಲಿ ಹಾಕಿ ಇಟ್ಟುಕೊಳ್ಳಬಹುದು. ನಂತರ ಈ ಈರುಳ್ಳಿ ಎಣ್ಣೆಯನ್ನು ಒಂದು ದಿನ ಬಿಟ್ಟು ಒಂದು ದಿನ ಕೂದಲಿನ ಬುಡಕ್ಕೆ ಹಚ್ಚಬೇಕು. ಅಂದರೆ ಒಂದು ದಿನ ತಲೆಗೆ ಎಣ್ಣೆ ಹಚ್ಚಿ ಮಾರನೇ ದಿನ ಹರ್ಬಲ್ ಶಾಂಪೂ ಬಳಸಿ ತಲೆಗೆ ಸ್ನಾನ ಮಾಡಬೇಕು ಅದರ ಮಾರನೇ ದಿನ ಮತ್ತೆ ಈರುಳ್ಳಿ ಎಣ್ಣೆ ಹಚ್ಚಬೇಕು. ಈ ರೀತಿಯಾಗಿ ಏಳು ದಿನಗಳ ಕಾಲ ಮಾಡಿದರೆ ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಕೂದಲು ಉದ್ದ ಮತ್ತು ದಪ್ಪವಾಗಿ ಬೆಳೆಯುವುದು ಮಾತ್ರವಲ್ಲದೆ ಹೊಟ್ಟಿನ ಸಮಸ್ಯೆ ಇದ್ದರೂ ಸಹ ನಿವಾರಣೆ ಆಗುವುದು.

Leave a Comment

error: Content is protected !!