ಸಿಹಿ ತಿನಿಸುಗಳು ಯಾರಿಗೆ ಇಷ್ಟವಾಗುವುದಿಲ್ಲ. ಅದರಲ್ಲೂ ಹೋಳಿಗೆಯನ್ನು ಎಲ್ಲರೂ ಇಷ್ಟಪಡುತ್ತಾರೆ.ಆದರೆ ಎಲ್ಲರಿಗೂ ಸರಿಯಾಗಿ ಹೋಳಿಗೆ ಮಾಡಲು ಬರುವುದಿಲ್ಲ. ಏಕೆಂದರೆ ಇದಕ್ಕೆ ಸರಿಯಾದ ಹದ ಬೇಕಾಗುತ್ತದೆ. ನಾವು ಇಲ್ಲಿ ಹೋಳಿಗೆ ಮಾಡುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಹೋಳಿಗೆ ಮಾಡಲು ಹಲವಾರು ಸಾಮಗ್ರಿಗಳು ಬೇಕು.ಅದಕ್ಕೆ ಅರ್ಧkg ಮೈದಾ ಹಿಟ್ಟು, ಕಾಲುkg ಚಿರೋಟಿ ರವೆ,ಒಂದು ಕಪ್ ಹಾಲು, 1 ಚಮಚ ಅರಿಶಿನ ಪುಡಿ,ರುಚಿಗೆ ತಕ್ಕಂತೆ ಉಪ್ಪು ಮತ್ತು ಒಂದು ಬೌಲ್ ಎಣ್ಣೆಯನ್ನು ತೆಗೆದುಕೊಳ್ಳಬೇಕು.ಎಣ್ಣೆ ಅಡುಗೆಗೆ ಬಳಸುವುದನ್ನು ತೆಗೆದುಕೊಳ್ಳಬೇಕು.ಮೈದಾಹಿಟ್ಟನ್ನು ಚೆನ್ನಾಗಿ ಜರಡಿ ಹಿಡಿದು ಸಾಣಿಸಿಕೊಳ್ಳಬೇಕು.

ಈಗ ಒಂದು ದೊಡ್ಡ ಪಾತ್ರೆಗೆ ಮೈದಾಹಿಟ್ಟನ್ನು ಹಾಕಬೇಕು.ಅದಕ್ಕೆ ಕಾಲುkg ಚಿರೋಟಿ ರವೆಯನ್ನು ಹಾಕಬೇಕು.ಎರಡನ್ನು ಚೆನ್ನಾಗಿ ಕಲಸಿಕೊಳ್ಳಬೇಕು.ಇದಕ್ಕೆ ನೀರು ಹಾಕಿ ಚೆನ್ನಾಗಿ ಕಲಸಬೇಕು.ಏಕೆಂದರೆ ಮೊದಲು ಹಿಟ್ಟು ಚೆನ್ನಾಗಿ ನೆನೆಯಬೇಕು.ಅದಕ್ಕೆ ಅರಿಶಿನ ಪುಡಿ ಮತ್ತು ಉಪ್ಪನ್ನು ಹಾಕಬೇಕು.ನಂತರ ಅದಕ್ಕೆ ಹಾಲನ್ನು ಸಹ ಹಾಕಿ ಚೆನ್ನಾಗಿ ಕಲಸಬೇಕು.ನಂತರ 5 ರಿಂದ 6 ಚಮಚ ಎಣ್ಣೆ ಹಾಕಿ ಚೆನ್ನಾಗಿ ಕಲಸಬೇಕು.ನಂತರ ಒಂದು ಪ್ಲೇಟ್ ಮುಚ್ಚಿ ಇಡಬೇಕು.2 ರಿಂದ 3ಗಂಟೆಯ ತನಕ ನೆನೆಯಲು ಬಿಡಬೇಕು.

2 ಗಂಟೆಯ ನಂತರ ಮತ್ತೆ ಚೆನ್ನಾಗಿ ಎಣ್ಣೆ ಹಾಕಿ ಕಲಸಬೇಕು.ಪದೇ ಪದೇ ಎಣ್ಣೆಯನ್ನು ಹಾಕಿ ಚೆನ್ನಾಗಿ ಕಲಸಬೇಕು.ನಂತರ ಹದವಾದ ಉಂಡೆ ಉಂಡೆಗಳನ್ನು ಮಾಡಬೇಕು. ಅದಕ್ಕೆ ಹೂರಣವನ್ನು ತುಂಬಬೇಕು. ನಂತರ ಹೋಳಿಗೆ ಮಣೆಯಲ್ಲಿ ವರೆದು ಚೆನ್ನಾಗಿ ಕಾದ ಬಂಡಿಯಲ್ಲಿ ಸುಡಬೇಕು. ಸ್ವಲ್ಪ ಹೊಂಬಣ್ಣ ಎರಡೂ ಕಡೆ ಬಂದ ನಂತರ ತೆಗೆಯಬೇಕು.ಈಗ ಬಿಸಿ ಬಿಸಿಯಾದ ಹೋಳಿಗೆ ಸವಿಯಲು ಸಿದ್ದ.

By admin

Leave a Reply

Your email address will not be published.