ನಿಮ್ಮ ತಲೆಕೂದಲು ವೇಗವಾಗಿ ಉದ್ದವಾಗಿ ಬೆಳೆಯಬೇಕಾ? ಒಂದೇ ಒಂದು ಎಲೆ ಸಾಕು
ಹುಡುಗಿಯರಿಗೂ ಆಸೆ ಇರುತ್ತದೆ. ಮೊದಲು ಹೆಚ್ಚಾಗಿ ಎಲ್ಲರಿಗೂ ಉದ್ದವಾದ ಮತ್ತು ದಪ್ಪವಾದ ಕೂದಲು ಇರುತ್ತಿತ್ತು. ಆಗ ಯಾವುದೇ ರೀತಿಯ ಶಾಂಪೂಗಳು ಇರಲಿಲ್ಲ. ಕೇವಲ ಶೀಗೇಕಾಯಿಪುಡಿಯನ್ನು ಹಾಕಿ ಸ್ನಾನ ಮಾಡುತ್ತಿದ್ದರು. ಆದರೆ ಈಗ ಹಾಗಲ್ಲ. ನಾನಾ ರೀತಿಯ ಶಾಂಪೂಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ನಾವು ಇಲ್ಲಿ ಕೂದಲು ಉದ್ದವಾಗಿ ಮತ್ತು ದಪ್ಪವಾಗಿ ಬೆಳೆಯಲು ಒಂದು ಪರಿಹಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಚಿಕ್ಕವಯಸ್ಸಿನಿಂದ ತಲೆಕೂದಲು ಚೆನ್ನಾಗಿ ಬೆಳೆದಿರುತ್ತದೆ. ಆದರೆ ವಯಸ್ಸಾಗುತ್ತ ಹೋದಂತೆ ತಲೆಕೂದಲಿನ ತೊಂದರೆ ಶುರುವಾಗುತ್ತದೆ. ಈಗಿನ ದಿನಗಳಲ್ಲಿ ಹೆಚ್ಚಾಗಿ ಎಲ್ಲರ ಕೂದಲು ಉದುರುತ್ತದೆ. ಇದಕ್ಕೆ ಕಾರಣ ಈಗಿನ ಆಹಾರಪದ್ಧತಿ ಎಂದು ಹೇಳಬಹುದು. ಹಾಗೆಯೇ ತಲೆಕೂದಲು ಉದುರುವುದನ್ನು ನಿಲ್ಲಿಸಲು ಅನೇಕ ಪರಿಹಾರಗಳು ಇವೆ. ಕೆಲವರು ಇದಕ್ಕಾಗಿ ವೈದ್ಯರ ಸಲಹೆ ಪಡೆಯುತ್ತಾರೆ. ಆದರೆ ಎಲ್ಲರಿಗೂ ಇದು ಪರಿಣಾಮ ಹೊಂದುವುದಿಲ್ಲ. ಹಾಗೆಯೇ ಮಾರುಕಟ್ಟೆಯಲ್ಲಿ ಹಲವಾರು ರೀತಿಯ ತೈಲಗಳು ಸಿಗುತ್ತವೆ. ಅವು ಸಹ ಅಡ್ಡ ಪರಿಣಾಮಗಳನ್ನು ಬೀರುತ್ತವೆ.
ತಲೆಕೂದಲು ಉದುರುವುದನ್ನು ನಿಲ್ಲಿಸಲು ಮನೆಯಲ್ಲಿ ಒಂದು ಸುಲಭದ ಪರಿಹಾರ ಇದೆ. ಅದೇನೆಂದರೆ ಹೆಚ್ಚಾಗಿ ಎಲ್ಲರ ಮನೆಯಲ್ಲೂ ಕೂಡ ಪೇರಲೆಹಣ್ಣಿನ ಮರ ಇರುತ್ತದೆ. ಹಳ್ಳಿಗಳಲ್ಲಿ ಹೆಚ್ಚಾಗಿ ಎಲ್ಲರ ಮನೆಯಲ್ಲೂ ಇರುತ್ತದೆ. ಅದೇ ಪೇಟೆಗಳಲ್ಲಿ ಸ್ವಲ್ಪ ಕಡಿಮೆ ಕಂಡು ಬರುತ್ತದೆ. ಮೊದಲು 15 ರಿಂದ 20 ಪೇರಲೆಯ ಎಲೆಗಳನ್ನು ಕೊಯ್ದು ಸ್ವಚ್ಛ ಮಾಡಿ ತೊಳೆದುಕೊಳ್ಳಬೇಕು. ಒಂದು ಪಾತ್ರೆಗೆ ಅದನ್ನು ಹಾಕಿ ಅರ್ಧ ಪಾತ್ರೆಯಷ್ಟು ನೀರನ್ನು ಹಾಕಬೇಕು.
ನಂತರ ಅದನ್ನು ಚೆನ್ನಾಗಿ ಕುದಿಸಬೇಕು. ಸುಮಾರು 15 ರಿಂದ 20 ನಿಮಿಷಗಳ ಕಾಲ ಇದನ್ನು ಕುದಿಸಬೇಕು. ನೀರು ಸ್ವಲ್ಪ ಕಾಫಿ ಬಣ್ಣಕ್ಕೆ ಬರಬೇಕು. ನಂತರ ಗ್ಯಾಸ್ ಆಫ್ ಮಾಡಿ ತಣ್ಣಗಾದ ನಂತರ ತಲೆಗೆ ಹಚ್ಚಿಕೊಳ್ಳಬೇಕು. ಇದನ್ನು ವಾರಕ್ಕೆ ಎರಡು ಬಾರಿ ಮಾಡಿದರೆ ತಲೆಯಕೂದಲು ತುಂಬಾ ಚೆನ್ನಾಗಿ ಬೆಳೆಯುತ್ತದೆ. ಕೂದಲು ಉದುರುವುದು ಸಹ ನಿಯಂತ್ರಣಕ್ಕೆ ಬರುತ್ತದೆ. ತಲೆಕೂದಲು ದಟ್ಟವಾಗಿ ಮತ್ತು ಉದ್ದವಾಗಿ ಬೆಳೆಯುತ್ತದೆ. ಹಾಗೆಯೇ ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಇಲ್ಲ.