ಒಂದೇ ವಾರದಲ್ಲಿ ಮುಖದ ಮೇಲಿನ ಕಪ್ಪು ಕಲೆ ನಿವಾರಿಸುತ್ತೆ

ಇತ್ತೀಚಿನ ದಿನದಲ್ಲಿ ಧೂಳಿನಿಂದ ತುಂಬಿರೋ ರಸ್ತೆಗಳಲ್ಲಿ ವಾಹನ ಓಡಿಸಿ ಚರ್ಮದ ಅಂದವನ್ನು ಹಾಳು ಮಾಡುತ್ತಿದ್ದೆವೆ. ಅಷ್ಟೆಅಲ್ಲ ಈ ಸ್ಕೀನ್ ಪ್ರಾಬ್ಲೆಮ್ ನಿಂದ ಕಪ್ಪು ಕಲೆಗಳು ಮುಖದ ತುಂಬಾ ಆವರಿಸುತ್ತೆ. ಆ ಕಪ್ಪು ಕಲೆ ನಿವಾರಣೆ ಮಾಡಲು ನಾವಂತೂ ಸರ್ಕಸ್ ಮಾಡುತ್ತಾ ಇರುತ್ತೇವೆ. ಕಲೆಗಳನ್ನು ಮುಚ್ಚುವ ಕ್ರೀಮ್ ಗಳನ್ನು ಆವಾಗವಗ ಬಳಸಿ ಮುಖದ ಅಂದವನ್ನು ಮತ್ತಷ್ಟು ಕುರೂಪಗೊಳಿಸ್ತೆವೆ. ಆದರೆ ಇನ್ನು ಮುಂದೆ ಯೋಚನೆ ಮಾಡಬೇಕಿಲ್ಲ. ಕಪ್ಪು ಕಲೆಗಳನ್ನು ಬೇಗನೆ ತೊಲಗಿಸಿ ನಿಮ್ಮ ಚರ್ಮವನ್ನು ಮತ್ತೆ ಆರೋಗ್ಯಕರವಾಗಿಸಲು ಈ ಕೆಲವು ಮನೆ ಮದ್ದುಗಳನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಎಲ್ಲರ ಮುಖದ ಮೇಲೆ ಕೂಡಾ ಮೊಡವೆಗಳು ಇದ್ದೆ ಇರುತ್ತದೆ ಹಾಗೆ ಮೊಡವೆಗಳು ಇದ್ದ ಮೇಲೆ ಕಪ್ಪು ಕಲೆಗಳು ಕೂಡಾ ಇರುತ್ತವೆ. ಈ ಕಪ್ಪು ಕಲೆಗಳು ಆಗೋದಕ್ಕೆ ಹಲವಾರು ಕಾರಣಗಳು ಇವೆ ಅವುಗಳಲ್ಲಿ ಮುಖ್ಯವಾಗಿ ಹೈಪರ್ ಪಿಗ್ಮಂಟೇಶನ್ , ಹಾರ್ಮೋನುಗಳ ವ್ಯತ್ಯಾಸದಿಂದ ಮೊಡವೆಗಳು ಹಾಗೂ ಕಪ್ಪು ಕಲೆಗಳು ಉಂಟಾಗುತ್ತವೆ. ಇದರಿಂದ ಮುಖದ ಸೌಂದರ್ಯ ಹಾಳಾಗುತ್ತದೆ ಮುಖ ಹೊಳಪಾಗಿ ಕಾಣುವುದಿಲ್ಲ. ಆದರೆ ಇದಕ್ಕೆ ಚಿಂತೆ ಮಾಡದೇ ನಾವು ತಿಳಿಸುವ ಈ ಕೆಲವು ಮನೆಮದ್ದುಗಳನ್ನು ಮಾಡಿನೋಡಿ ನಿಮ್ಮ ಮುಖದ ಮೇಲೆ ಇರುವ ಮೊಡವೆಗಳು ಕಪ್ಪು ಕಲೆಗಳು ಯಾವುದೇ ಅಡ್ಡ ಪರಿಣಾಮಗಳನ್ನೂ ಬೀರದೆ ನಿವಾರಣೆ ಆಗುವುದು. ರಾಸಾಯನಿಕಗಳನ್ನು ಬಳಸಿ ಚರ್ಮವನ್ನು ಸುಂದರವಾಗಿಸಲು ಪ್ರಯತ್ನಿಸುವುದಕ್ಕಿಂತ ಹಲವು ಮನೆ ಮದ್ದುಗಳನ್ನು ಬಳಸಿದರೆ ಹಣ ಪೋಲಾಗದಂತೆ ಮಾಡಬಹುದು ಹಾಗೂ ರಾಸಾಯನಿಕಗಳಿಂದ ಉಂಟಾಗುವ ಅಡ್ಡ ಪರಿಣಾಮಗಳಿಂದಲೂ ಸಹ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು. ಚರ್ಮದ ಆರೈಕೆ ಮಾಡುವುದು ಬಹಳ ಮುಖ್ಯ. ಈ ಕೆಳಗೆ ನೀಡಿರುವ ಕೆಲವು ಮನೆ ಮದ್ದುಗಳಿಂದ ನಿಮ್ಮ ಚರ್ಮವನ್ನು ಕಪ್ಪು ಕಲೆ, ಮೊಡವೆ, ಕಚ್ಚು ಹಾಗೂ ಬೊಕ್ಕೆಗಳಿಂದ ಮುಕ್ತವಾಗಿಸಬಹುದು. ಹಾಗಿದ್ರೆ ಯಾವೆಲ್ಲ ವಿಧಾನಗಳನ್ನು ಅನುಸರಿಸಿದ ಕಪ್ಪು ಕಲೆ ಹೋಗಲಾಡಿಸಬಹುದು ಅನ್ನೋದನ್ನ ನೋಡೊಣ..

ಮೊದಲಿಗೆ ಅಲೋವೆರಾ. ಇದು ಒಂದು ಫೇಸ್ ಮಾಸ್ಕ್ ತರ ಬಳಕೆ ಮಾಡಬೇಕು. ಒಂದು ಬೌಲ್ ಗೆ ಅಲೋವೆರಾ ಅದರ ಜೆಲ್ ತೆಗೆದುಕೊಂಡು ಅದಕ್ಕೆ ವಿಟಮಿನ್ ಇ ಕ್ಯಾಪ್ಸೂಲ್ ಹಾಗೂ ನಿಂಬೆ ಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ಮುಖಕ್ಕೆ ಹಚ್ಚಬೇಕು. ಇದನ್ನು ಹಚ್ಚಿ ಹತ್ತು ಇಪ್ಪತ್ತು ನಿಮಿಷಗಳ ನಂತರ ಒಣಗಿದ ಮೇಲೆ ತಣ್ಣೀರಿನಿಂದ ಮುಖ ತೊಳೆಯಬೇಕು. ಒಂದು ಚಿಟಿಕೆ ಅರಿಶಿನವನ್ನು ತೆಗೆದುಕೊಂಡು ಅದಕ್ಕೆ ನಿಂಬೆ ಹಣ್ಣಿನ ರಸವನ್ನು ಬೆರೆಸಿ ನಂತರ ಈ ಮಿಶ್ರಣವನ್ನು ಕಲೆಗಳಿರುವ ಕಡೆಗೆ ಹಚ್ಚಿರಿ. ಈ ಮಿಶ್ರಣ ನಿಮ್ಮ ಕಲೆಗಳನ್ನು ಬಹಳ ಸಮರ್ಥವಾಗಿ ನಿವಾರಿಸುತ್ತದೆ. ಈ ಮಿಶ್ರಣವನ್ನು ದಿನವೂ ಬಳಸುವುದರಿಂದ ಒಂದು ವಾರದಲ್ಲೇ ಫಲಿತಾಂಶವನ್ನು ಕಾಣಬಹುದು.

ಒಂದು ಮಧ್ಯಮ ಗಾತ್ರದ ಟೊಮ್ಯಾಟೋವನ್ನು ತೆಗೆದುಕೊಂಡು ಅದರ ರಸವನ್ನು ಹಿಂಡಿಕೊಳ್ಳಿ. ನಂತರ ಆ ರಸಕ್ಕೆ ಒಂದು ಚಮಚ ನಿಂಬೆಹಣ್ಣಿನ ರಸವನ್ನು ಬೆರೆಸಿ ಚೆನ್ನಾಗಿ ಕಲಸಿ. ಅದನ್ನು ಮುಖಕ್ಕೆ ಹಚ್ಚಿಕೊಂಡು ಇಪ್ಪತ್ತು ನಿಮಿಷಗಳ ನಂತರ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಿರಿ.

ಎರಡು ಚಮಚ ಶ್ರೀಗಂಧದ ಪುಡಿಗೆ ಸ್ವಲ್ಪ ಪನ್ನೀರನ್ನು (Rose Water) ಬೆರೆಸಿ ಕಲೆಗಳಿರುವ ಜಾಗಕ್ಕೆ ಅಥವಾ ಇಡೀ ಮುಖಕ್ಕೆ ಹಚ್ಚಿಕೊಳ್ಳಿ. ಈ ಮಿಶ್ರಣವನ್ನು ತಿಳಿಯಾಗಿ ಮಾಡಿಕೊಳ್ಳುವುದರಿಂದ ಅದು ಒಣಗಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ ಹಾಗಾಗಿ ಹೆಚ್ಚು ಲಾಭವನ್ನು ಪಡೆಯಬಹುದು. ಮುಖಕ್ಕೆ ಹಚ್ಚಿದ ಮಿಶ್ರಣ ಒಣಗಿದ ನಂತರ ನೀರಿನಿಂದ ತೊಳೆಯಿರಿ.

ಸೌತೆಕಾಯಿಯನ್ನು ರುಬ್ಬಿ ಅದಕ್ಕೆ ಹಾಲನ್ನು ಹಾಗೂ ಸ್ವಲ್ಪ ನಿಂಬೆ ರಸವನ್ನು ಬೆರೆಸಿ ಮಿಶ್ರಣವನ್ನು ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ಕಲೆಗಳಿರುವ ಜಾಗಕ್ಕೆ ಹಚ್ಚಿಕೊಳ್ಳಿ. ಈ ಮಿಶ್ರಣ ಚೇತೋಹಾರಿಯಾಗಿದ್ದು ಇಡೀ ಮುಖಕ್ಕೂ ಬಳಸಬಹುದಾಗಿದೆ. ಇದನ್ನು ಹಚ್ಚಿದ ಹತ್ತು ನಿಮಿಷಗಳ ನಂತರ ನೀರಿನಿಂದ ತೊಳೆದುಕೊಳ್ಳಬೇಕು.

ಈ ಜೀವಸತ್ವದ ಎಣ್ಣೆ ಒಂದು ನೈಸರ್ಗಿಕ ಉತ್ಕರ್ಷಣ ವಿರೋಧಿಯಾಗುವುದರಿಂದ ಗಾಯಗಳನ್ನು ಗುಣಪದಿಸುವುದರಲ್ಲಿ ಬಹಳ ಸಹಾಯಕಾರಿ. ಆದ್ದರಿಂದ ಈ ಜೀವಸ್ತ್ವದ ಎಣ್ಣೆಯನ್ನು ಹರಳೆಣ್ಣೆಯೊಂದಿಗೆ ಬೆರೆಸಿ ಕಲೆಗಳಿರುವೆಡೆಗೆ ಹಚ್ಚಿ ಸ್ವಲ್ಪ ಕಾಲ ಬಿಟ್ಟುಬಿಡಿ. ಇಪತ್ತು ನಿಮಿಷಗಳ ನಂತರ ಹತ್ತಿಯ ಸಹಾಯದಿಂದ ಎಣ್ಣೆಯನ್ನು ತೆಗೆದು ನಂತರ ನೀರಿನಿಂದ ತೊಳೆಯಿರಿ.

ಸಾಕಷ್ಟು ನೀರನ್ನು ಕುಡಿಯುವುದರಿಂದ ಮುಖದ ಮೇಲಿನ ಕಪ್ಪು ಕಲೆಗಳನ್ನು ನಿವಾರಿಸಬಹುದು. ದಿನಕ್ಕೆ ಕಡಿಮೆ ಎಂದರೆ ಆರರಿಂದ ಎಂಟು ಲೋಟ ನೀರನ್ನು ಕುಡಿಯಿರಿ. ಇದು ದೇಹದಲ್ಲಿನ ಕಲ್ಮಶಗಳನ್ನು ತೊಲಗಿಸುವುದಲ್ಲದೆ ಚರ್ಮವು ನೈಸರ್ಗಿಕವಾಗಿ ಪುನರುಜ್ಜೀವನಗೊಳ್ಳಲು ಸಹಾಯ ಮಾಡುತ್ತದೆ ಹಾಗೂ ಕಪ್ಪು ಕಲೆಗಳು ಶೀಘ್ರವಾಗಿ ವಾಸಿಯಾಗಲು ಸಹಾಯಮಾಡುತ್ತದೆ. ಕೇಸರಿಯ ಕೆಲವು ಎಸಳುಗಳನ್ನು ಎರಡು ಚಮಚೆ ಹಸಿ ಹಾಲಿನಲ್ಲಿ ನೆನೆಸಿಡಿ. ಹಾಲು ಹಾಳಾಗದೆ ಇರುವುದಕ್ಕಾಗಿ ಫ್ರಿಡ್ಜ್ ನಲ್ಲಿರಿಸಿ. ಬೆಳ್ಳಿಗೆ ಕೇಸರಿಯನ್ನು ಹಾಲಿನಲಿ ನುರಿದು ಆ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ, ಕಲೆ ಹಾಗೂ ಮೊಡವೆಗಳಿರುವಲ್ಲಿ ಸ್ವಲ್ಪ ಹೆಚ್ಚಾಗಿಯೇ ಹಚ್ಚಿ. ಅದು ಪೂರ್ತಿ ಒಣಗಿದ ಮೇಲೆ ನೀರಿನಿಂದ ತೊಳೆಯಿರಿ. ಇದನ್ನು ನಿತ್ಯ ಮಾಡುವುದರಿಂದ ಒಂದು ವಾರದಲ್ಲಿ ಫಲಿತಾಂಶವನ್ನು ಕಾಣಬಹುದು.

ಈ ಮೇಲೆ ತಿಳಿಸಿದ ಎಲ್ಲಾ ಮನೆಮದ್ದುಗಳು ಯಾವುದೇ ಅಡ್ಡಪರಿಣಾಮಗಳನ್ನು ಬೀರುವುದಿಲ್ಲ ಇದನ್ನು ವಾರದಲ್ಲಿ ತಪ್ಪದೆ ಎರಡರಿಂದ ಮೂರು ಬಾರಿ ಮಾಡಬೇಕು ಹಾಗೂ ನಿಮಗೆ ಯಾವುದು ಅನುಕೂಲವೋ ಆ ಮನೆಮದ್ದನ್ನು ಮಾಡಿಕೊಳ್ಳಬಹುದು.

Leave a Comment

error: Content is protected !!