ಜೀರಿಗೆ ಸೇವನೆ ಅತಿಯಾದರೆ ಗತಿಯೇನು ನೋಡಿ

ಮನುಷ್ಯನಿಗೆ ಅಜೀರ್ಣತೆ ಅನ್ನೋದು ಆರೋಗ್ಯದ ವಿಚಾರದಲ್ಲಿ ದೊಡ್ಡ ಶತ್ರು ಆರೋಗ್ಯವಾಗಿ ಇರಬೇಕಾದ ಮನುಷ್ಯ ತನ್ನ ಜೀವನ ಶೈಲಿಯ ಪ್ರಭಾವದಿಂದ ಯಾವುದೇ ಸಂಧರ್ಭದಲ್ಲಿ ಅಜೀರ್ಣತೆಯನ್ನು ತನ್ನದಾಗಿಸಿಕೊಳ್ಳಬಹವುದು ಇಂತಹ ಸಂಧರ್ಭದಲ್ಲಿ ವಾಕರಿಕೆ ವಾಂತಿ ಹೊಟ್ಟೆ ಉಬ್ಬರ ಎಲ್ಲವು ಸಹಜ ಡಾಕ್ಟರ್ ನೀಡುವ ಮಾತ್ರೆಗಳನ್ನು ಎಲ್ಲ ಸಮಯದಲ್ಲಿ ತೆಗೆದುಕೊಳ್ಳಲು ಸಾಧ್ಯವಿಲ್ಲ

ಈ ಸಮಯದಲ್ಲಿ ನಮಗೆ ನೆನಪಾಗೋದು ನಮ್ಮ ಅಡುಗೆ ಮನೆಯಲ್ಲಿರುವ ಜೀರಿಗೆ ಹೇಗಾದರೂ ಮಾಡಿ ಗ್ಯಾಸ್ಟ್ರಿಕ್ ಸಮಸ್ಯೆ ಹೋದರೆ ಸಾಕೆಂದು ಅತಿಯಾಗಿ ಜೀರಿಗೆ ಸೇವನೆ ಮಾಡಲು ಮುಂದಾದರೆ ಇನ್ನೊಂದು ಸಮಸ್ಯೆಮುಂದಾಗುತ್ತದೆ ಅಂತಹ ಸಮಸ್ಯೆಗಳು ಯಾವುವು ಅಂದರೆ

  1. ಎದೆ ಉರಿ ಹೊಟ್ಟೆಯಲ್ಲಿನ ಆಮ್ಲಿಯತೆಯನ್ನು ಕಡಿಮೆ ಮಾಡುವ ಒಳ್ಳೆಯ ಗುಣ ಜೀರಿಗೆಯಲ್ಲಿದೆ ಹಾಗಂತ ಅತಿಯಾಗಿ ಸೇವನೆ ಮಾಡಿದರೆ ಇದರ ಹಿಂದೆಯೇ ಎದೆ ಉರಿ ಶುರು ಆಗುತ್ತೆ ಜೀರಿಗೆ ನಿಮ್ಮ ಜಠರನಾಳದಲ್ಲಿ ಎದೆ ಉರಿ ಶುರು ಮಾಡಬಹುದು
  2. ಲಿವರ್ ಡ್ಯಾಮೇಜ್ ಜೀರಿಗೆಯಲ್ಲಿದೆ ಕಂಡುಬರುವ ಸ್ವಲ್ಪ ಪ್ರಮಾಣದ ಎಣ್ಣೆಯ ಅಂಶ ಒರತೆಯ ಗುಣವನ್ನು ಹೊಂದಿದ್ದು ನಿಮ್ಮ ಲಿವರ್ ಗೆ ಹಾನಿ ಉಂಟುಮಾಡಬಹುದು ಡಾಕ್ಟರ್ ಸಲಹೆಯಂತೆ ಜೀರಿಗೆಯನ್ನು ಸೇವನೆ ಮಾಡಬೇಕು ಯಾಕೆಂದರೆ ಯಾವುದೇ ಪದಾರ್ಥವನ್ನು ಮಿತವಾಗಿ ಸೇವನೆ ಮಾಡಿದರೆ ತೊಂದರೆಯನ್ನು ತಪ್ಪಿಸಬಹುದು
  3. ಹೊಟ್ಟೆ ಉಬ್ಬರ ಅತಿಯಾದ ಜೀರಿಗೆ ಸೇವನೆ ಇಂದ ಆಮ್ಲ ಉತ್ಪತ್ತಿ ಆಗುವ ಜೊತೆಗೆ ಹೆಚ್ಚು ಗ್ಯಾಸ್ ತುಂಬಿಕೊಂಡು ಜಠರದಲ್ಲಿ ಉರಿ ಶುರು ಆಗಿ ಹೊಟ್ಟೆ ಉಬ್ಬುತ್ತದೆ ಅದಕ್ಕಾಗಿ ಮಿತವಾಗಿ ಜೀರಿಗೆ ಸೇವಿಸಬೇಕು ಇಲ್ಲವಾದಲ್ಲಿ ಹೊಟ್ಟೆ ಉಬ್ಬರವಾಗುವುದು ಖಂಡಿತ
  4. ನಾರ್ಕೋಟಿಕ್ ಸ್ವಭಾವ ಜೀರಿಗೆಯಲ್ಲಿ ನಾರ್ಕೋಟಿಕ್ ಗುಣ ಇದೆ ಎಂದು ಹೇಳುತ್ತಾರೆ ಅದಕ್ಕೆ ಸೇವನೆ ಮಾಡುವಾಗ ಸ್ವಲ್ಪ ಎಚ್ಚರಿಕೆ ವಹಿಸಬೇಕು ಕೆಲವರಿಗೆ ಜೀರಿಗೆ ಅತಿಯಾಗಿ ಸೇವಿಸಿದರೆ ಬುದ್ಧಿಶಕ್ತಿ ಕಡಿಮೆ ಆಗಬಹುದು ವಾಕರಿಕೆ ವಾಂತಿ ತಲೆಸುತ್ತು ಕಂಡುಬರಬಹುದು ನಮ್ಮ ನೆನಪಿನ ಶಕ್ತಿಯನ್ನು ನಿಧಾನವಾಗಿ ಕುಗ್ಗಿಸಿತ್ತದೆ
  5. ರಕ್ತದಲ್ಲಿ ಸಕ್ಕರೆ ಪ್ರಮಾಣ ಇದ್ದಕ್ಕಿದ್ದಂತೆ ಕಡಿಮೆ ಆಗುವುದು ಅತಿಯಾಗಿ ಜೀರಿಗೆ ಸೇವಿಸುವುದರಿಂದ ಸಕ್ಕರೆ ಪ್ರಮಾಣ ಕುಸಿಯುತ್ತದೆ ನೀವೇನಾದರೂ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ಸರಿಯಾಗಿ ನಿರ್ವಹಣೆ ಮಾಡಬೇಕೆಂದು ಡಾಕ್ಟರ್ ತಿಳಿಸಿರುತ್ತಾರೆ ಅದಕ್ಕೆ ಜೀರಿಗೆಯ ಅತಿಸೇವನೆ ಮಾಡುವ ಮುನ್ನ ಈ ಎಲ್ಲ ವಿಷಯವನ್ನು ಗಮನದಲ್ಲಿಟ್ಟುಕೊಳ್ಳಿ

6.ಗರ್ಭಪಾತಕ್ಕೆ ಕಾರಣವಾಗಬಹುದು ಜೀರಿಗೆಕಾಳು ಮಹಿಳೆಯರ ಗರ್ಭವಾಸ್ಥೆಯಲ್ಲಿ ಅಸಹಜ ಪರಿಣಾಮ ಉಂಟುಮಾಡಬಹುದು ಅತಿಯಾದ ಜೀರಿಗೆ ಸೇವನೆಯಿಂದ ಗರ್ಭಪಾತ ಆಗಬಹುದು ಇಲ್ಲ ಅವಧಿಗೂ ಮುನ್ನ ಹೆರಿಗೆಗೆ ಪ್ರೇರೇಪಿಸಬಹುದು ಹೀಗಾಗಿ ಜೀರಿಗೆಯನ್ನು ಮಿತವಾಗಿ ಬಳಸುವುದು ಒಳ್ಳೆಯದು

Leave a Comment

error: Content is protected !!