ಶರೀರಕ್ಕೆ ಹಾಗೂ ಸೌಂದರ್ಯ ವೃದ್ಧಿಗೆ ದಾಸವಾಳ ಮನೆಮದ್ದು

ದಾಸವಾಳದ ಗಿಡಗಳು ಎಲ್ಲರ ಮನೆಯ ಅಂಗಳದಲ್ಲೂ ಇರುತ್ತವೆ.ಅದರಲ್ಲಿ ವಿಭಿನ್ನ ವಿಭಿನ್ನ ರೀತಿಯ ಜಾತಿಗಳಿವೆ.ಅಂದರೆ ವಿಧ ವಿಧವಾದ ಬಣ್ಣಗಳು ದಾಸವಾಳದಲ್ಲಿ ಇದೆ.ಹಾಗೆಯೇ ಇದು ಔಷಧೀಯ ಗುಣಗಳನ್ನು ಹೊಂದಿದೆ. ನಾವು ಇಲ್ಲಿ ದಾಸವಾಳದ ಔಷಧೀಯ ಪ್ರಯೋಜನಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ದಾಸವಾಳವು ಮನುಷ್ಯನ ದೇಹಕ್ಕೆ ಬಹಳ ತಂಪು.ಇದರ ಎಲೆಗಳ ಜ್ಯೂಸ್ ನ್ನು ಮಾಡಿ ಕುಡಿಯುವುದರಿಂದ ದೇಹವನ್ನು ತಂಪಾಗಿರಿಸಿಕೊಳ್ಳಬಹುದು.ಈಗ ಕೊರೊನ ಕಷಾಯಗಳನ್ನು ಕುಡಿದು ದೇಹವು ಬಹಳ ಉಷ್ಣವಾಗಿರುತ್ತದೆ.ಇದು ದೇಹಕ್ಕೆ ತಂಪು ಅನುಭವ ನೀಡುತ್ತದೆ.ದಾಸವಾಳದ ಹೂವುಗಳನ್ನು ಚಹಾದ ತರ ಮಾಡಿ ಕುಡಿಯುವುದರಿಂದ ದೇಹದ ಅಂದವನ್ನು ಹೆಚ್ಚಿಸಬಹುದು.ಇದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.

ದಾಸವಾಳದ ಎಲೆಗಳನ್ನು ಕೊಯ್ದು ಅದನ್ನು ಜಜ್ಜಿದಾಗ ಒಂದು ರೀತಿಯ ಜೆಲ್ ತರಹ ಬರುತ್ತದೆ.ಇದನ್ನು ತಲೆಗೆ ಹಾಕಿ ಸ್ನಾನ ಮಾಡಿದರೆ ತಂಪಾಗುತ್ತದೆ.ಮುಖದ ಅಂದವನ್ನು ಹೆಚ್ಚಿಸಲು ಒಂದು ರೀತಿಯ ದಾಸವಾಳದ ಹೂವುಗಳ ಪ್ಯಾಕ್ ಮಾಡಬಹುದು.ಮೊದಲು 10 ರಿಂದ 15ದಾಸವಾಳದ ಹೂವುಗಳನ್ನು ಕೊಯ್ದು ಈ ಹೂವುಗಳನ್ನು ಕುಡಿಯುವ ನೀರಿನಲ್ಲಿ ರಾತ್ರಿ ನೆನೆಸಿಡಬೇಕು.ಬೆಳಿಗ್ಗೆ ಅದಕ್ಕೆ 2 ಚಮಚ ಟೀ ಟ್ರೀಯ ಆಯಿಲ್ ಹಾಕಬೇಕು.ಇದು ಮಾರುಕಟ್ಟೆಯಲ್ಲಿ ಸಿಗುತ್ತದೆ. ಅದಕ್ಕೆ ಓಟ್ಸ್ ಹಾಕಬೇಕು.ನಂತರ ಎಲ್ಲವನ್ನೂ ಸಣ್ಣ ಮಿಕ್ಸಿಯಲ್ಲಿ ತಿರುಗಿಸಿ ಆ ಪೇಸ್ಟ್ ನ್ನು ಮುಖಕ್ಕೆ ಹಚ್ಚಬೇಕು.20ನಿಮಿಷಗಳ ಕಾಲ ಬಿಟ್ಟು ಮುಖವನ್ನು ಚೆನ್ನಾಗಿ ತೊಳೆಯಬೇಕು.

ಡ್ರೈ ಹೇರ್ ಇರುವವರು 10 ರಿಂದ 15ದಾಸವಾಳದ ಹೂವುಗಳನ್ನು ತೆಗೆದುಕೊಂಡು ಅದಕ್ಕೆ ಜೇನುತುಪ್ಪ, ಮೊಸರು ಮತ್ತು ಅಲೋವೆರಾ ಜೆಲ್ ನ್ನು ಸೇರಿಸಿ ಪೇಸ್ಟ್ ಮಾಡಿ ಪ್ಯಾಕ್ ಮಾಡಿ ತಲೆಗೆ ಹಚ್ಚಿಕೊಳ್ಳಬೇಕು.ಇದರನ್ನು ವಾರದಲ್ಲಿ ಎರಡು ಬಾರಿ ಮಾಡುವುದರಿಂದ ಡ್ರೈ ಹೇರ್ ನಿಂದ ಮುಕ್ತಿಯನ್ನು ಪಡೆಯಬಹುದು.ಕೂದಲು ಉದುರುವ ಸಮಸ್ಯೆ ಇರುವವರು ತೆಂಗಿನಕಾಯಿ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಕುದಿಯಲು ಬಿಟ್ಟು ಅದಕ್ಕೆ 15 ರಿಂದ 20 ದಾಸವಾಳದ ಹೂವುಗಳ ಪೇಸ್ಟ್ ಹಾಕಬೇಕು.ನೀರಿನ ಪ್ರಮಾಣ ಹೋಗುವವರೆಗೂ ಕುದಿಸಿ ನಂತರ ಅದನ್ನು ಶೇಖರಿಸಿಟ್ಟುಕೊಳ್ಳಬೇಕು.ಅದನ್ನು ವಾರದಲ್ಲಿ ಎರಡು ಬಾರಿ ಬಳಸಬೇಕು.

ದಾಸವಾಳದ ಹೂವುಗಳು ಮತ್ತು ಎಗ್ ವೈಟ್ ನ್ನು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ ಅದನ್ನು ಕಂಡೀಶನರ್ ತರಹ ಬಳಸುವುದರಿಂದ ಕೂದಲನ್ನು ನಮ್ಮ ಇಷ್ಟದಂತೆ ಬಾಚಿಕೊಳ್ಳಬಹುದು.ಇವೆಲ್ಲಾ ದಾಸವಾಳದ ಪ್ರಯೋಜನಗಳು. ಇವುಗಳ ಬಳಕೆ ಮಾಡಿ ನೀವೂ ಸಹ ಪ್ರಯೋಜನ ಪಡೆದುಕೊಳ್ಳಿ.

Leave a Comment

error: Content is protected !!