Heart Care: ಹೃದಯಾಘಾತಕ್ಕೆ ನಿಜವಾದ ಕಾರಣ ಇವುಗಳೇ. ತಜ್ಞರೇ ಬಿಚ್ಚಿಟ್ಟಿರುವ ರಹಸ್ಯ ಇದು.

Heart Care ಇಂದಿನ ದಿನಗಳಲ್ಲಿ ಕೇವಲ ವಹಿಸ್ಕರಿಗೆ ಮಾತ್ರವಲ್ಲದೆ ಚಿಕ್ಕ ಚಿಕ್ಕ ಮಕ್ಕಳಿಗೂ ಕೂಡ ಹೃದಯದ ಸಮಸ್ಯೆಗಳಿಂದಾಗಿ(Heart Problem) ಮರಣಗಳು ಹೆಚ್ಚಾಗಿ ಸಂಭವಿಸುತ್ತಿವೆ. ಹಾಗಿದ್ದರೆ ಹೃದಯ’ಘಾತದ ಹಿಂದಿನ ನಿಜವಾದ ಕಾರಣಗಳೇನು ಎಂಬುದನ್ನು ತಿಳಿಯೋಣ ಬನ್ನಿ. ಧೂಮಪಾನ ಮಾಡುವ ಅಭ್ಯಾಸ ಇದ್ದರೆ ಖಂಡಿತವಾಗಿ ಹೃದಯದ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಇದರ ರಾಸಾಯನಿಕ ಅಂಶಗಳು ರಕ್ತನಾಳಗಳನ್ನು ಬ್ಲಾಕ್ ಮಾಡಿ ರಕ್ತ ಪರಿಚಲನೆ ಆಗದಂತೆ ನೋಡಿಕೊಳ್ಳುತ್ತವೆ. ಇದರಿಂದಾಗಿ ಹೆಚ್ಚಿನ ಮರಣಗಳು ಸಂಭವಿಸುವ ಸಾಧ್ಯತೆ ಇದೆ.

ಇನ್ನು ಅಧಿಕ ರಕ್ತದೊತ್ತಡದ ಕಾರಣದಿಂದಾಗಿ ಪರದೆಯಕ್ಕೆ ಆಮ್ಲಜನಕದ ಪೂರೈಕೆ ಸರಿಯಾಗಿ ಆಗುವುದಿಲ್ಲ. ಇದರಿಂದಲೂ ಕೂಡ ಅಪಾಯ ಸಂಭವಿಸುತ್ತದೆ. ಇನ್ನು ಪ್ರಮುಖವಾಗಿ ನೀವು ಬೀದಿ ಬದಿಯ ಆಹಾರಗಳನ್ನು ತಿನ್ನುವುದರಿಂದಾಗಿ ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್(Cholesterol) ಹೆಚ್ಚುತ್ತದೆ. ರಕ್ತನಾಳಗಳ ಒಳಗೆ ಇದು ಶೇಖರಣೆಯಾಗಿ ಅಂಗಾಂಗಗಳಿಗೆ ಸರಿಯಾದ ಪ್ರಮಾಣದಲ್ಲಿ ರಕ್ತ ಸರಬರಾಜು ಆಗುವುದಿಲ್ಲ ಇದರಿಂದ ಕೂಡ ಸಂಭವಿಸುತ್ತದೆ.

ಒಂದು ವೇಳೆ ನಿಮ್ಮ ದೇಹದಲ್ಲಿ ಶುಗರ್ ಲೆವೆಲ್(Sugar Level) ಅಗತ್ಯಕ್ಕಿಂತ ಅಧಿಕವಾಗಿದ್ದರೆ ಕೂಡ ಅದು ಹೃದಯದ ಮಾತನ್ನು ಕೇಳಲು ಹೋಗುವುದಿಲ್ಲ. ಇದರಿಂದಾಗಿ ಪೌಷ್ಟಿಕಾಂಶ ತುಂಬಿರುವಂತಹ ರಕ್ತದ ಪ್ರಮಾಣದ ಹರಿವು ಸಾಧ್ಯವಾಗುವುದಿಲ್ಲ. ದೇಹದಲ್ಲಿರುವಂತಹ ಅತಿಯಾದ ಬೊಜ್ಜು ರಕ್ತ ಪರಿಚಲನೆ ಬ್ಲಾಕ್ ಮಾಡಿ ಈ ಘಟನೆಗೆ ಕಾರಣವಾಗುತ್ತದೆ. ಜಡ ಜೀವನ ಶೈಲಿ ಕೂಡ ಇದಕ್ಕೆ ಕಾರಣವಾಗಿರುತ್ತದೆ. ಹೀಗಾಗಿ ಪ್ರತಿದಿನ ವ್ಯಾಯಾಮ ಮಾಡಲೇಬೇಕು.

ಹೀಗಾಗಿ ಪ್ರತಿಯೊಬ್ಬರು ಕೂಡ ಆಹಾರ ಕ್ರಮದಲ್ಲಿ ಶಿಸ್ತನ್ನು ವಹಿಸಬೇಕು ಹಾಗೂ ದೈನಂದಿನ ಜೀವನದಲ್ಲಿ ಯೋಗ ಹಾಗೂ ವ್ಯಾಯಾಮ ಮಾಡಬೇಕು. ಆಗಾಗ ದೇಹದ ಪರೀಕ್ಷೆಯನ್ನು ವೈದ್ಯರಿಂದ ಮಾಡಿಸಲೇಬೇಕು. ಯಾಕೆಂದರೆ ಇತ್ತೀಚೆಗೆ ಸಾಕಷ್ಟು ಪ್ರಕರಣಗಳು ಇದರ ಬಗ್ಗೆ ದಾಖಲಾಗುತ್ತಿದ್ದು ಇದರ ಬಗ್ಗೆ ಅಗತ್ಯಕ್ಕಿಂತ ಹೆಚ್ಚಾದ ಜಾಗೃತೆಯನ್ನು ವಹಿಸುವುದು ಉತ್ತಮವಾಗಿದೆ ಎಂಬುದು ಪ್ರತಿಯೊಬ್ಬರು ಕೂಡ ತಿಳಿದುಕೊಳ್ಳಬೇಕಾಗಿರುವಂತಹ ವಿಚಾರ.

Leave a Comment

error: Content is protected !!