ಈ ಹಣ್ಣಿನ ಜ್ಯೂಸ್ ಶರೀರಕ್ಕೆ ಎಷ್ಟೊಂದು ಒಳ್ಳೇದು ಗೊತ್ತೇ ನೋಡಿ

ಬೇಸಿಗೆ ಕಾಲದಲ್ಲಿ ಜ್ಯೂಸ್ ಕುಡಿಯುವುದು ಸರ್ವೆ ಸಾಮಾನ್ಯ. ಎಲ್ಲ ಹಣ್ಣಿನ ಜ್ಯೂಸ್ ಆರೋಗ್ಯಕ್ಕೆ ಒಳ್ಳೆಯದು. ಅದರಂತೆ ಬೂದುಗುಂಬಳ ಕಾಯಿಯ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ಬಹಳಷ್ಟು ಒಳ್ಳೆಯದು ಆದ್ದರಿಂದ ಈ ಜ್ಯೂಸ್ ಗೆ ಜ್ಯೂಸ್ ಗಳ ರಾಜ ಎಂದು ಕರೆಯುತ್ತಾರೆ. ಬೂದುಗುಂಬಳ ಕಾಯಿಯ ಜ್ಯೂಸ್ ಮಾಡುವ ವಿಧಾನ ಹಾಗೂ ಅದರಿಂದ ಆಗುವ ಆರೋಗ್ಯಕರ ಪ್ರಯೋಜನಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಪ್ರತಿಯೊಂದು ಹಣ್ಣಿನ ಜ್ಯೂಸ್ ಆರೋಗ್ಯಕ್ಕೆ ಉತ್ತಮ. ಬೂದುಗುಂಬಳಕಾಯಿಯ ಜ್ಯೂಸನ್ನು ಜ್ಯೂಸ್ ಗಳ ರಾಜ ಎಂದು ಕರೆಯುತ್ತಾರೆ. ಬೂದುಗುಂಬಳಕಾಯಿಯನ್ನು ದೃಷ್ಟಿ ತೆಗೆಯಲು, ಮನೆಯೆದುರು ನೇತು ಹಾಕಲು ಬಳಸುತ್ತಾರೆ ಆದರೆ ಇದು ಆರೋಗ್ಯಕ್ಕೆ ಬಹಳ ಉತ್ತಮ. ಬೂದುಗುಂಬಳಕಾಯಿಯಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ ಸಿಕ್ಸ್ ಹೆಚ್ಚಾಗಿರುತ್ತದೆ ಅಲ್ಲದೆ ಕ್ಯಾಲ್ಷಿಯಂ, ಪ್ರೋಟೀನ್, ಮೆಗ್ನೀಷಿಯಂ, ಜಿಂಕ್, ಐರನ್ ಮುಂತಾದ ಆರೋಗ್ಯಕರ ಅಂಶಗಳು ಹಾಗೂ ನಾರಿನ ಅಂಶ, ನೀರಿನ ಅಂಶ ಹೆಚ್ಚಾಗಿರುತ್ತದೆ. ವಿಶೇಷವಾದ ಬೂದುಗುಂಬಳಕಾಯಿಯ ಜ್ಯೂಸ್ ತಯಾರಿಸುವುದು ಹೇಗೆಂದರೆ ಬೂದುಗುಂಬಳಕಾಯಿಯು ಗಾತ್ರದಲ್ಲಿ ದೊಡ್ಡದಾಗಿದ್ದು ಬೇಕಾದಷ್ಟು ಮಾತ್ರ ಬಳಸಬಹುದು ಉಳಿದಿರುವುದನ್ನು ಫ್ರಿಜ್ ನಲ್ಲಿ ಇಡಬಹುದು. ಬೂದುಗುಂಬಳಕಾಯಿಯ ಸಿಪ್ಪೆಯನ್ನು ಮತ್ತು ಬೀಜವನ್ನು ತೆಗೆದು ಸಣ್ಣದಾಗಿ ಕಟ್ ಮಾಡಿಕೊಳ್ಳಬೇಕು ನಂತರ ಅದನ್ನು ಮಿಕ್ಸಿಗೆ ಹಾಕಿ ನೀರು ಹಾಕದೆ ಗ್ರೈಂಡ್ ಮಾಡಿಕೊಳ್ಳಬೇಕು. ನಂತರ ಫಿಲ್ಟರ್ ಮಾಡಿ ಬೇಕಾದರೆ ಅದಕ್ಕೆ ಪೆಪ್ಪರ್ ಪೌಡರ್ ಸೇರಿಸಿ ಕುಡಿಯಬಹುದು. ಮಕ್ಕಳಿಗೆ 100ml ನಷ್ಟು ದೊಡ್ಡವರಿಗೆ 200ml ಕುಡಿಯಬಹುದು. ಇದರ ವಿಶೇಷವೆಂದರೆ ಇದು ಜೀರೊ ಕೊಲೆಸ್ಟ್ರಾಲ್ ತರಕಾರಿಯಾಗಿದೆ. ಪ್ರತಿದಿನ ಬೆಳಗ್ಗೆ ಬೂದುಗುಂಬಳಕಾಯಿಯ ಜ್ಯೂಸನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಕರುಳನ್ನು ಕ್ಲೀನ್ ಮಾಡುತ್ತದೆ ಮತ್ತು ದೇಹದಲ್ಲಿ ಸೇರಿಕೊಂಡಿರುವ ವಿಷಕಾರಕ ಅಂಶಗಳು ಹೋಗುತ್ತದೆ, ಈ ಜ್ಯೂಸ್ ಕುಡಿಯುವುದರಿಂದ ತೂಕ ಕಡಿಮೆಯಾಗುತ್ತದೆ. 1 ವರ್ಷದ ಮಕ್ಕಳಿಗೆ ಈ ಜ್ಯೂಸನ್ನು ಕೊಡುವುದರಿಂದ ಅವರ ಬುದ್ಧಿಮಟ್ಟ ಬೆಳವಣಿಗೆಯಾಗುತ್ತದೆ. ಬೂದುಗುಂಬಳಕಾಯಿಯಲ್ಲಿ ಕ್ಯಾನ್ಸರ್ ನಾಶಪಡಿಸುವ ಗುಣಗಳಿರುವುದರಿಂದ ಪ್ರತಿಯೊಬ್ಬರು ಈ ಜ್ಯೂಸನ್ನು ಕುಡಿಯುವುದರಿಂದ ಕ್ಯಾನ್ಸರ್ ಬರದಂತೆ ತಡೆಯಬಹುದಾಗಿದೆ. ಅಸ್ತಮಾ, ಉಸಿರಾಟದ ಸಮಸ್ಯೆಯನ್ನು ಎದುರಿಸುವವರು ಈ ಜ್ಯೂಸನ್ನು ಕುಡಿಯುವುದರಿಂದ ನಿವಾರಣೆಯಾಗುತ್ತದೆ.

ಪದೆ ಪದೆ ಶೀತ, ನೆಗಡಿ ಆಗುತ್ತಿದ್ದರೆ ಬೂದುಗುಂಬಳಕಾಯಿಯ ಜ್ಯೂಸ್ ಗೆ ಪೆಪ್ಪರ್ ಪೌಡರ್ ಅನ್ನು ಸೇರಿಸಿ ಕುಡಿಯುವುದರಿಂದ ನಿವಾರಣೆಯಾಗುತ್ತದೆ. ಕೆಲವರ ದೇಹದ ಉಷ್ಣತೆ ಹೆಚ್ಚಾಗಿರುತ್ತದೆ ಅಂತವರು ಈ ಜ್ಯೂಸನ್ನು ಕುಡಿಯುವುದರಿಂದ ದೇಹಕ್ಕೆ ತಂಪನ್ನು ನೀಡುತ್ತದೆ. ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಇದ್ದವರು ಈ ಜ್ಯೂಸನ್ನು ಕುಡಿಯಬೇಕು. ಬೂದುಗುಂಬಳಕಾಯಿಯ ಜ್ಯೂಸ್ ಕುಡಿಯುವುದರಿಂದ ವಾತ, ಪಿತ್ತ ನಿವಾರಣೆಯಾಗುತ್ತದೆ ಅಲ್ಲದೆ ಜೀರ್ಣಕ್ರಿಯೆ ಸಮಸ್ಯೆಯನ್ನು ನಿವಾರಿಸುತ್ತದೆ, ಕಿಡ್ನಿ ಸಮಸ್ಯೆ, ಋತು ಚಕ್ರದ ಸಮಸ್ಯೆಯನ್ನು, ಚರ್ಮದ ಸಮಸ್ಯೆಯನ್ನು, ಕೂದಲಿನ ಸಮಸ್ಯೆಯನ್ನು, ಬೆನ್ನು ನೋವು, ಕತ್ತು ನೋವು, ಸೊಂಟ ನೋವು ಈ ಎಲ್ಲ ಸಮಸ್ಯೆಯನ್ನು, ನಿದ್ರಾ ಸಮಸ್ಯೆಯನ್ನು, ಹೊಟ್ಟೆಯ ಅಲ್ಸರ್ ಈ ಎಲ್ಲಾ ಸಮಸ್ಯೆಯನ್ನು ನಿವಾರಿಸುತ್ತದೆ. ಕೆಲವರಿಗೆ ವಸಡಿನಲ್ಲಿ, ಮೂಗಿನಲ್ಲಿ ರಕ್ತ ಬರುತ್ತಿರುತ್ತದೆ ಅಂತವರು ಈ ಜ್ಯೂಸ್ ಪ್ರತಿದಿನ ಕುಡಿಯಬೇಕು ಅಲ್ಲದೆ ಟೈಪ್2 ಡಯಾಬಿಟೀಸ್ ಅನ್ನು ಕಡಿಮೆ ಮಾಡುತ್ತದೆ. ಬೂದುಗುಂಬಳಕಾಯಿಯ ಜ್ಯೂಸ್ ಕುಡಿಯುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಖಿನ್ನತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಬೂದುಗುಂಬಳಕಾಯಿಯ ಜ್ಯೂಸ್ ಕುಡಿಯುವುದರೊಂದಿಗೆ ಅದರಿಂದ ತಯಾರಿಸಿದ ಆಹಾರವನ್ನು ತೆಗೆದುಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದು. ಈ ಜ್ಯೂಸ್ ಕುಡಿಯುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಆಗುವುದಿಲ್ಲ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಬೂದುಗುಂಬಳಕಾಯಿಯನ್ನು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿರಿ.

Leave a Comment

error: Content is protected !!