ಶರೀರದಲ್ಲಿ ಎಂತದ್ದೆ ಉಷ್ಣವಿರಲಿ ದಿನಕ್ಕೊಂದು ಗ್ಲಾಸ್ ಈ ಜ್ಯುಸ್ ಕುಡಿದ್ರೆ ಸಾಕು 2 ನಿಮಿಷದಲ್ಲಿ ತಂಪಾಗುತ್ತೆ

ಮನುಷ್ಯ ಆರೋಗ್ಯವಾಗಿ ಇರಬೇಕು ಅಂದರೆ ದೇಹದ ಉಷ್ಣತೆ ಒಂದು ಸಮತೋಲನದಲ್ಲಿ ಇರಬೇಕು. ಇಲ್ಲವಾದಲ್ಲಿ ಒಂದೊಂದು ರೀತಿಯ ಪರಿಣಾಮಗಳು ಕಾಣಿಸಿಕೊಳ್ಳುತ್ತದೆ. ಇನ್ನೂ ಕೆಲವರಿಗೆ ದೇಹದ ಉಷ್ಣತೆ ಬಹಳ ಕಡಿಮೆ ಇರುತ್ತದೆ. ಇದರಿಂದ ನೆಗಡಿ ಮುಂತಾದ ಸಣ್ಣಪುಟ್ಟ ತೊಂದರೆಯನ್ನು ಅನುಭವಿಸುತ್ತಿರುತ್ತಾರೆ. ಹಾಗೆ ಅತಿಯಾದ ಉಷ್ಣತೆ ಯಾದವರು ಕೂಡ ಸಣ್ಣಪುಟ್ಟ ತೊಂದರೆಗಳನ್ನು ಅನುಭವಿಸುತ್ತಾರೆ. ಆದ್ದರಿಂದ ದೇಹವನ್ನು ಸರಿಯಾದ ಉಷ್ಣತೆಯಲ್ಲಿ ಇಟ್ಟುಕೊಳ್ಳಬೇಕು ಎಂದರೆ ಏನು ಮಾಡಬೇಕೆಂಬುದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಕೆಲವೊಬ್ಬರಿಗೆ ದೇಹ ಬಹಳ ಉಷ್ಣತೆಯಿಂದ ಕೂಡಿರಲು ಕಾರಣ ಅವರ ದೇಹಪ್ರಕೃತಿ ಕೂಡ ಇರಬಹುದು. ನಿದ್ದೆಯನ್ನು ಸರಿಯಾಗಿ ಮಾಡಬೇಕು ಇಲ್ಲವಾದಲ್ಲಿ ದೇಹದ ಉಷ್ಣತೆ ಸಮತೋಲನವನ್ನು ಕಳೆದುಕೊಳ್ಳುತ್ತದೆ. ಅತಿಯಾಗಿ ಬಿಸಿಲಿನಲ್ಲಿ ಕೆಲಸವನ್ನು ಮಾಡುವುದರಿಂದ ಕೂಡ ದೇಹದಲ್ಲಿ ಉಷ್ಣತೆ ಉಂಟಾಗುತ್ತದೆ. ಹಾಗೆಯೇ ದಿನನಿತ್ಯ ಸೇವಿಸುವ ಆಹಾರ ಪದಾರ್ಥಗಳ ಮೇಲೆ ಮನುಷ್ಯನ ಆರೋಗ್ಯ ಅವಲಂಬಿತವಾಗಿರುತ್ತದೆ. ಅತಿಯಾಗಿ ಉಪ್ಪು, ಹುಳಿ ಮತ್ತು ಖಾರಾ ಸೇವನೆ ಮಾಡುವುದರಿಂದ ಕೂಡ ಉಂಟಾಗುತ್ತದೆ.

ಆದ್ದರಿಂದ ಅತಿಯಾದ ಉಷ್ಣತೆಯಿಂದ ಕೂಡಿರುವ ಆಹಾರ ಪದಾರ್ಥಗಳ ಸೇವನೆ ಒಳ್ಳೆಯದಲ್ಲ. ಕೆಲವೊಮ್ಮೆ ಔಷಧಿಗಳನ್ನು ಸೇವನೆ ಮಾಡುವಾಗ ವೈದ್ಯರನ್ನು ಕೇಳಿ ಮಾಡಬೇಕು. ಏಕೆಂದರೆ ಮಾಡಿದ ಔಷಧಿ ಅಡ್ಡ ಪರಿಣಾಮಗಳನ್ನು ಉಂಟು ಮಾಡಬಹುದು. ದೇಹವು ಸರಿಯಾದ ಉಷ್ಣಾಂಶ ಹೊಂದಿರಬೇಕು ಎಂದಾದರೆ ಆಕಳಿನ ತುಪ್ಪ, ಹಾಲು ಮತ್ತು ಮಜ್ಜಿಗೆಯನ್ನು ಸೇವನೆ ಮಾಡಬೇಕು. ದೇಹಕ್ಕೆ ತಂಪನ್ನು ಉಂಟುಮಾಡುವ ಸೊಪ್ಪನ್ನು ಸೇವನೆ ಮಾಡಬೇಕು.

ಹಾಗೆಯೇ ದೇಹಕ್ಕೆ ತಂಪನ್ನು ಉಂಟುಮಾಡುವ ತರಕಾರಿಗಳನ್ನು ಸೇವನೆ ಮಾಡಬೇಕು. ಬೂದುಕುಂಬಳಕಾಯಿ ರಸವನ್ನು ಬೆಳಿಗ್ಗೆ ಎದ್ದ ತಕ್ಷಣ ಸೇವನೆ ಮಾಡಬೇಕು. ಇದರಿಂದ ದೇಹವು ತಂಪಾಗಿರುತ್ತದೆ. ದಿನಕ್ಕೊಂದು ಅರ್ಧ ಚಮಚದಷ್ಟು ಶ್ರೀಗಂಧವನ್ನು ಸೇವನೆ ಮಾಡಬೇಕು. ಇದನ್ನು ದೇವರಿಗೆ ಹಚ್ಚುತ್ತಾರೆ. ಹಾಗೆಯೇ ಎಳೆಯ ನೀರನ್ನು ವಾರಕ್ಕೊಮ್ಮೆ ಆದರೂ ಸೇವನೆ ಮಾಡಬೇಕು. ಇದರಿಂದಾಗಿ ದೇಹ ತಂಪಾಗಿರುತ್ತದೆ. ಹುಳಿ ಇಲ್ಲದೆ ಇರುವ ಎಲ್ಲಾ ಹಣ್ಣುಗಳನ್ನು ಸೇವನೆ ಮಾಡಬೇಕು.

Leave a Comment

error: Content is protected !!