ಬಾಳೆಹಣ್ಣು ಅಷ್ಟೇ ಅಲ್ಲ ಇದರ ಸಿಪ್ಪೆಯಲ್ಲೂ ಅಡಗಿದೆ ಅರೋಗ್ಯ

ಬಾಳೆಹಣ್ಣು ಆರೋಗ್ಯಕ್ಕೆ ಹೆಚ್ಚು ಪ್ರಯೋಜನ ನೀಡುತ್ತದೆ ಎಂದು ಎಲ್ಲರಿಗೂ ಗೊತ್ತಿದೆ. ಬಾಳೆಹಣ್ಣು ಆರೋಗ್ಯಕ್ಕೆ ಒಳ್ಳೆಯದು ಎಂದು ಅದನ್ನು ಸೇವಿಸಿ ಎಲ್ಲರೂ ಕೂಡ ಸಿಪ್ಪೆಯನ್ನು ಎಸೆದುಬಿಡುತ್ತಾರೆ. ಆದರೆ ಅದರ ಸಿಪ್ಪೆಯಿಂದ ಎಷ್ಟೊಂದು ಪ್ರಯೋಜನಗಳಿವೆ ಎಂದು ಯಾರಿಗೂ ತಿಳಿದಿಲ್ಲ. ನಾವು ಇಲ್ಲಿ ಬಾಳೆಹಣ್ಣಿನ ಸಿಪ್ಪೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಬಾಳೆಹಣ್ಣಿನ ಸಿಪ್ಪೆಯಲ್ಲಿ ಆರೋಗ್ಯಕರವಾದ ಅಂಶಗಳಿವೆ. ಈ ಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಬಿ6 ಅಧಿಕವಾಗಿ ಇದೆ. ಹಾಗೆಯೇ ನಾರಿನಾಂಶ, ಮೆಗ್ನೀಷಿಯಂ, ಪೊಟ್ಯಾಶಿಯಂ ಕೂಡ ಇದೆ. ಇದು ಹಲ್ಲುಗಳನ್ನು ಬಿಳಿಯಾಗಿಸಲು ಸಹಾಯಕಾರಿ. ಕೆಲವು ಮಂದಿಗೆ ಹಲ್ಲು ಹಳದಿಯಾಗಿ ಕಾಣುವುದೇ ದೊಡ್ಡ ಸಮಸ್ಯೆ ಆಗಿರುತ್ತದೆ. ಅವರು ಎರಡು ವಾರಗಳ ಕಾಲ ಇದರ ಸಿಪ್ಪೆಯಿಂದ ಹಲ್ಲನ್ನು ಚೆನ್ನಾಗಿ ಉಜ್ಜುವುದರಿಂದ ಶೀಘ್ರದಲ್ಲೇ ಬೆಳ್ಳಗೆ ಹೊಳೆಯುವ ಹಲ್ಲನ್ನು ಪಡೆಯಬಹುದು. ನರಹುಲಿ ಸಮಸ್ಯೆಗೆ ಇದು ಪರಿಹಾರವನ್ನು ನೀಡುತ್ತದೆ. ನರಹುಲಿ ಎನ್ನುವುದು ಕೆಲವರಲ್ಲಿ ಇರುತ್ತದೆ. ಈ ಸಿಪ್ಪೆಯನ್ನು ಇಟ್ಟು ನರಹುಲಿಗಳ ಮೇಲೆ ಉಜ್ಜಿದಾಗ ಇದರಿಂದ ಮುಕ್ತಿ ಪಡೆಯಬಹುದು.

ಬಾಳೆಹಣ್ಣಿನ ಸಿಪ್ಪೆಯಲ್ಲಿರುವ ಔಷಧಿಗಳು ಮೊಡವೆಗಳನ್ನು ಹೋಗಲಾಡಿಸಲು ಸಹಕಾರಿ. ಮೊಡವೆ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿ ದಿನ ರಾತ್ರಿ ಮೊಡವೆ ಮೇಲೆ ಸಿಪ್ಪೆಯಿಂದ ನಿಧಾನವಾಗಿ ಮಸಾಜ್ ಮಾಡಿ ನಂತರ ಒಂದು ಗಂಟೆಯ ಕಾಲ ಹಾಗೆಯೇ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದರೆ ಬೇಗನೆ ಪರಿಹಾರ ದೊರೆಯುತ್ತದೆ. ಮೊಡವೆ ಕಲೆಗಳನ್ನು ಸಹ ನಿವಾರಿಸುತ್ತದೆ. ಚರ್ಮದ ಸೋರಿಯಾಸಿಸ್ ಇರುವವರು ಇದನ್ನು ಆ ಜಾಗಕ್ಕೆ ಹಚ್ಚಿ ತಿಕ್ಕುವುದರಿಂದ ಬೇಗನೆ ಫಲಿತಾಂಶ ದೊರೆಯುತ್ತದೆ. ಬಾಳೆಹಣ್ಣಿನಸಿಪ್ಪೆ ತೇವಾಂಶದ ಗುಣ ಹೊಂದಿದೆ.

ಇದರಿಂದ ಮುಖದ ಸುಕ್ಕು ನಿವಾರಣೆ ಆಗುತ್ತದೆ. ಸೂರ್ಯನಿಂದ ಆಗುವ ಹಾನಿಯಿಂದ ನಮ್ಮ ತ್ವಚೆಯನ್ನು ಕಾಪಾಡುತ್ತದೆ. ಬಾಳೆಹಣ್ಣಿನ ಸಿಪ್ಪೆಯಿಂದ ಇಷ್ಟೊಂದು ಪ್ರಯೋಜನಗಳಿವೆ. ಹಾಗಾಗಿ ನೀವೂ ಕೂಡ ಇನ್ನು ಮುಂದೆ ಬಾಳೆಹಣ್ಣಿನ ಸಿಪ್ಪೆಯನ್ನು ಎಸೆಯಬೇಡಿ. ಅದರ ಪ್ರಯೋಜನ ಪಡೆದುಕೊಳ್ಳಿ.

Leave a Comment

error: Content is protected !!