Acidity Tips ಆಸಿಡಿಟಿ ಸಮಸ್ಯೆಯಿಂದ ಮುಕ್ತರಾಗಲು ಇಲ್ಲಿದೇ ನೋಡಿ 2 ನಿಮಿಷದ ಪರಿಹಾರ.

Daily Health Tips ಪ್ರತಿಯೊಬ್ಬರೂ ಕೂಡ ಇಂದಿನ ಈ ಬ್ಯುಸಿ ದುನಿಯಾದಲ್ಲಿ ಕೇವಲ ಕೆಲಸ ದುಡ್ಡು ಮಾಡಬೇಕು ಎನ್ನುವ ನಿಟ್ಟಿನಲ್ಲಿ ಜಗತ್ತನ್ನೇ ಮರೆತು ಕೆಲಸ ಮಾಡುತ್ತಿರುತ್ತಾರೆ. ಆದರೆ ಈ ಸಂದರ್ಭದಲ್ಲಿ ಅವರು ಹಲವಾರು ಆರೋಗ್ಯ ಸಮಸ್ಯೆಗಳನ್ನು(Health Problems) ತಂದುಕೊಳ್ಳುತ್ತಾರೆ. ಅದರಲ್ಲೂ ವಿಶೇಷವಾಗಿ ಇಂದಿನ ದಿನಗಳಲ್ಲಿ ಎಲ್ಲರಲ್ಲೂ ಆಸಿಡಿಟಿ ಜಾಸ್ತಿಯಾಗಿ ಕಂಡುಬರುತ್ತದೆ. ಸರಿಯಾದ ಹೊತ್ತಿನಲ್ಲಿ ಊಟ ಮಾಡದೇ ಇರುವುದು ಹಾಗೂ ಆರೋಗ್ಯಕರ ಅಲ್ಲದ ಆಹಾರವನ್ನು ಸೇವಿಸುವುದರಿಂದ ಆಸಿಡಿಟಿ ಪ್ರಮುಖವಾಗಿ ಕಂಡುಬರುತ್ತದೆ.

ಈ ಸಮಯದಲ್ಲಿ ನಿಮಗೆ ಹೊಟ್ಟೆ ಎದೆ ಹಾಗೂ ಗಂಟಲಿನ ಭಾಗದಲ್ಲಿ ಹುಳಿತೇಗು ಹಾಗೂ ಕೆಲವೊಮ್ಮೆ ನೋ’ವು ಕೂಡ ಉಂಟಾಗುತ್ತದೆ. ಕೆಲವೊಮ್ಮೆ ಅಜೀರ್ಣ ಉಂಟಾಗಿ ಇಂತಹ ಗುಣಲಕ್ಷಣಗಳು ಕಂಡುಬರುತ್ತವೆ. ಉರಿ ಕೂಡ ಕಂಡುಬರುತ್ತದೆ. ಹಸಿವು ಕೂಡ ನಿಮ್ಮಲ್ಲಿ ಗಣನೀಯವಾಗಿ ಕಡಿಮೆ ಆಗಲಿದೆ. ಹಾಗಿದ್ದರೆ ಬನ್ನಿ ಇದರಿಂದ ಮುಕ್ತಿ ಪಡೆಯುವಂತಹ ಸುಲಭ ಮಾರ್ಗ(Easy Way) ಏನೆಂಬುದನ್ನು ತಿಳಿಯೋಣ ಬನ್ನಿ.

ಮೊದಲಿಗೆ ಒಂದು ಟೀ ಸ್ಪೂನ್(Tea Spoon) ಶುಂಠಿ ರಸದಲ್ಲಿ ಸ್ವಲ್ಪ ತುಳಸಿ ರಸವನ್ನು ಸೇರಿಸಬೇಕು. ಪ್ರತಿದಿನ ಬೆಳಿಗ್ಗೆ ಬರೀ ಹೊಟ್ಟೆಗೆ ಇದನ್ನು ಸೇವಿಸಿದರೆ ಆಸಿಡಿಟಿಯಿಂದ ನೀವು ಸಂಪೂರ್ಣವಾಗಿ ಮುಕ್ತಿಯನ್ನು ಪಡೆಯಬಹುದಾಗಿದೆ. ಹಲವಾರು ಜನರಿಗೆ ಆಹಾರ ಅಜೀರ್ಣ ವಾಗಿ. ಹೊಟ್ಟೆಯಲ್ಲೇ ಉಳಿದುಕೊಂಡಾಗ ಭಾದೆ ಪಡುತ್ತಾರೆ. ಈ ಸಂದರ್ಭದಲ್ಲಿ ವಾಂತಿ ಬರುವ ಲಕ್ಷಣಗಳು ಮೂಡುತ್ತವೆ ಹೀಗಾಗಿ ಆಗ ನೀವು 4 ಲವಂಗದ ಕಾಳುಗಳನ್ನು ಜಗಿದು ತಿನ್ನಬೇಕು. ಪ್ರತಿದಿನ ತುಳಸಿ ಪುದಿನ ಅಥವಾ ನೆಲ್ಲಿಕಾಯಿಗಳ ಸೇವನೆಯಿಂದ ನಿಮ್ಮ ಆಸಿಡಿಟಿ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು.

ಒಂದು ಗ್ಲಾಸ್ ನೀರಿನಲ್ಲಿ ಒಂದು ಚಮಚ ನೆಲ್ಲಿಕಾಯಿ ಪುಡಿಯನ್ನು ಬೆರೆಸಿ ಸೇವಿಸಿದರೆ ಉದರ ಸಂಬಂಧಿಸಿದಂತೆ ಎಲ್ಲಾ ಸಮಸ್ಯೆಗಳಿಂದಲೂ ಶೀಘ್ರ ಹಾಗೂ ಸಂಪೂರ್ಣ ಶಮನವನ್ನು ಪಡೆಯುತ್ತೀರಿ. ಒಂದು ಚಮಚ ದಾಲ್ಚಿನ್ನಿ ಪುಡಿಯನ್ನು ಬಿಸಿ ನೀರಿನಲ್ಲಿ ಸರಿಯಾಗಿ ಕುದಿಸಿ ಆರಿಸಿದ ನಂತರ ಕುಡಿಯಬೇಕು. ಆಹಾರವನ್ನು ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಆಗಿದ್ದು ತಿನ್ನುವುದರಿಂದ ಅಸಿಡಿಟಿಯಿಂದ ನೀವು ದೂರ ಇರಬಹುದಾಗಿದೆ. ಈಗನಾದರೂ ಈ ಸೂಚನೆಗಳನ್ನು ನಿಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮುಖಾಂತರ ಸ್ವಾಸ್ಥ್ಯ ಭರಿತ ಜೀವನಕ್ಕೆ ನೀವೇ ನಾಂದಿ ಹಾಡಬಹುದಾಗಿದೆ.

Leave a Comment

error: Content is protected !!