ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆ ಕ್ಯಾನ್ಸರ್ ಹಾಗು ಇನ್ನು ಹಲವು ರೋಗಗಳಿಗೆ ರಾಮಬಾಣ ಈ ಮೊಳಕೆ ಬಂದ ಹೆಸರು ಕಾಳು..!

ಮೊಳಕೆ ಬಂದ ಹೆಸರು ಕಾಳು ಸೇವನೆ ಮಾಡುವುದರಿಂದ ಹಲವುರು ರೀತಿಯಲ್ಲಿ ಲಾಭಗಳಿವೆ ಅನ್ನೋದು ಎಲ್ಲರ ಮತ್ತು ತಜ್ಞರು ಸಹ ಮೊಳಕೆ ಬಂದು ಕಾಳು ಸೇವನೆ ಮಾಡಿ ಅಂತ ಹೇಳುತ್ತಾರೆ, ಈ ಮೊಳಕೆ ಬಂದ ಕಾಳು ತಿನ್ನುವುದರಿಂದ ಸಾಕಷ್ಟು ರೀತಿಯಲ್ಲಿ ಪ್ರೊಟೀನ್ ಅಂಶ ಇರುತ್ತದೆ ಈ ಮೊಳಕೆ ಒಡೆದ ಕಾಳುಗಳನ್ನು ಬೇಯಿಸಿ ತಿನ್ನುವುದಕ್ಕಿಂದ ಹಸಿಯಾಗಿಯೇ ಸೇವಿಸುವುದು ಉತ್ತಮ. ಯಾಕೆಂದರೆ ಮೊಳಕೆ ಕಾಳುಗಳನ್ನು ಬೇಯಿಸಿದಾಗ ಅದರ ಪೌಷ್ಟಿಕತೆ ದೇಹಕ್ಕೆ ಸಿಗಲ್ಲ. ಈ ಮೊಳಕೆ ಕಾಳಿನಲ್ಲಿರುವ ಪ್ರೋಟಿನ್, ಫೈಬರ್, ವಿಟಮಿನ್ಸ್, ಕಬ್ಬಿಣದ ಅಂಶ, ಕ್ಯಾಲ್ಸಿಯಂ ಹೀಗೆ ದೇಹಕ್ಕೆ ಬೇಕಾದ ಆರೋಗ್ಯಕರ ಅಂಶಗಳು ಇರುತ್ತದೆ. ಹಾಗಾಗಿ ನಮ್ಮ ದೇಹಕ್ಕೆ ಮೊಳಕೆ ಕಾಳು ತುಂಬ ಉತ್ತಮ ಇನ್ನು ಮೊಳಕೆ ಸೇವನೆಯಿಂದ ಯಾವೆಲ್ಲ ರೋಗಗಳನ್ನು ತಡೆಗಟ್ಟಬಹುದು ಅನ್ನೋದು ಇಲ್ಲಿದೆ ನೋಡಿ.

ಈ ಮೊಳಕೆ ಕಾಳು ಸೇವೆನಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಮೊಳಕೆ ಕಾಲಿನಲ್ಲಿರುವ ವಿಟಮಿನ್ ಸಿ ದೇಹಕ್ಕೆ ಇನ್ಫೆಕ್ಷನ್ ಆಗೋದನ್ನ ತಡೆಯುತ್ತದೆ. ಇದರ ಜೊತೆ ವಿಟಮಿನ್ ಎ ಅಂಶ ಕೂಡ ಹೆಚ್ಚಾಗಿ ಇರೋದ್ರಿಂದ ದೇಹಕ್ಕೆ ಹೆಚ್ಚಿನ ಆಂಟಿ ಆಕ್ಸಿಡೆಂಟ್ಸ್ ಸಿಗುವ ರೀತಿ ನಿಗಾವಹಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇನ್ನು ಈ ಮೊಳಕೆ ಕಾಳು ಸೇವನೆಯಿಂದ ಜೀರ್ಣಶಕ್ತಿ ವೃದ್ಧಿಸುತ್ತೆ: ಸಾಮಾನ್ಯವಾಗಿ ಮನೆಯಲ್ಲಿರುವ ಹೆಸರು ಕಾಲನ್ನು ನೀರಿನಲ್ಲಿ ನೆನಸಿಟ್ಟು ನಂತರ ಮೊಳಕೆ ಬಂದ ಮೇಲೆ ಸೇವಿಸುವುದರಿಂದ ಜೀರ್ಣಶಕ್ತಿ ಉತ್ತಮವಾಗುತ್ತೆ. ಈ ಮೊಳಕೆ ಕಾಲಿನಲ್ಲಿರುವ ಪೌಷ್ಟಿಕಾಂಶ ಜೀರ್ಣಕ್ರಿಯೆಯನ್ನು ಸರಾಗ ಮಾಡುತ್ತದೆ. ಅಲ್ಲದೆ ಫೈಬರ್ ಅಂಶವು ದೇಹದಲ್ಲಿ ಆಹಾರದ ಸಂಚಾರ ಸರಿಯಾಗಿ ಆಗುವಂತೆ ನೋಡಿಕೊಳ್ಳುವುದರ ಜೊತೆಗೆ ಮಲಬದ್ಧತೆ ಅಥವಾ ಪೈಲ್ಸ್ ತೊಂದರೆ ಆಗುವುದನ್ನು ನಿವಾರಿಸುವುದರ ಜೊತೆಗೆ ಕಡಿಮೆ ಮಾಡುತ್ತದೆ.

ಈ ಮೊಳಕೆ ಕಾಳು ಸೇವೆನೆಯಿಂದ ಕ್ಯಾನ್ಸರ್ ಬಾರದ ಹಾಗೆ ನೋಡಿಕೊಳ್ಳುತ್ತದೆ: ವಿಟಮಿನ್ ಎ, ಸಿ, ಅಮಿನೋ ಆಸಿಡ್ಸ್ ಹಾಗೂ ಪ್ರೋಟಿನ್ ಅಂಶ ದೇಹದಲ್ಲಿ ಫ್ರೀ ರಾಡಿಕಲ್ಸ್ ಸೇರದ ಹಾಗೆ ನೋಡಿಕೊಳ್ಳುತ್ತದೆ. ದೇಹದಲ್ಲಿ ಆಗುವ ಹಲವಾರು ಕ್ರಿಯೆಗಳ ಪರಿಣಾಮವಾಗಿ ಫ್ರೀ ರಾಡಿಕಲ್ಸ್ ಉತ್ಪತ್ತಿ ಆಗುತ್ತದೆ. ಇದರಿಂದ ದೇಹಕ್ಕೆ ಕ್ಯಾನ್ಸರ್ ಸೆಲ್ಸ್ ಸೇರುತ್ತದೆ. ಅಷ್ಟೇ ಅಲ್ಲದೆ ಸಾಕಷ್ಟು ಕಾಯಿಲೆಗಳು ಬರೋದಕ್ಕೆ ಇದು ಕಾರಣವಾಗುತ್ತದೆ. ಬೇಗ ಸುಸ್ತಾಗೋದು, ಕಣ್ಣು ಮಂಜಾಗುವುದು, ಹೃದಯಕ್ಕೆ ಸಂಬಂಧ ಪಟ್ಟ ತೊಂದರೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ನೀವು ಇವುಗಳಿಂದ ದೂರವಿರಬೇಕು ಅಂದ್ರೆ ಆದೊಷ್ಟು ಮೊಳಕೆ ಕಾಳು ತಿನ್ನುವುದನ್ನು ರೂಢಿಮಾಡಿಕೊಳ್ಳಿ.

ಇನ್ನು ಮೊಳಕೆ ಬಂದ ಹೆಸರು ಕಾಳಿನಲ್ಲಿ ಕ್ಯಾಲೋರೀಸ್ ಇಲ್ಲದ ಕಾರಣ ಇದನ್ನು ಎಷ್ಟು ತಿಂದರೂ ತೂಕ ಹೆಚ್ಚಾಗಲ್ಲ. ಬದಲಾಗಿ ತೂಕ ಕಡಿಮೆ ಆಗುತ್ತೆ. ಮೊಳಕೆ ಬಂದ ಹೆಸರು ಕಾಳನ್ನು ತಿನ್ನುವುದರಿಂದ ಇದರಲ್ಲಿರೋ ಫೈಬರ್ ನಿಮ್ಮ ದೇಹಕ್ಕೆ ಸೇರಿ ಹೊಟ್ಟೆ ತುಂಬುವ ಹಾಗೆ ಮಾಡುತ್ತೆ. ಆದರ ಜೊತೆ ಪದೇ ಪದೇ ಹಸಿವಾಗದ ರೀತಿ ನೋಡಿಕೊಳ್ಳುತ್ತದೆ.

Leave a Comment

error: Content is protected !!