Yuvarajkumar: ಮೊದಲ ಸಿನಿಮಾದ ಟೀಸರ್ ರಿಲೀಸ್ ಆದ ಬೆನ್ನಲ್ಲೇ ಯುವರಾಜ್ ಕುಮಾರ್ ಅವರಿಗೆ ಸಿಕ್ಕಂತಹ ಬಿರುದು ಏನು ಗೊತ್ತಾ? ನೆಕ್ಸ್ಟ್ ಲೆವೆಲ್ ಕ್ರೇಜ್.

Yuva ದೊಡ್ಮನೆಯ ಮೂರನೇ ಜನರೇಶನ್ ನ ಪ್ರತಿಭೆ ಆಗಿರುವ ಯುವರಾಜಕುಮಾರ್(Yuvarajkumar) ಅಂತೂ ಇಂತೂ ಕನ್ನಡ ಚಿತ್ರರಂಗಕ್ಕೆ ಅಧಿಕೃತವಾಗಿಯೇ ಕಾಲಿಟ್ಟಿದ್ದಾರೆ. ನಿಜಕ್ಕೂ ಅವರ ಮೊದಲ ಸಿನಿಮಾದ ಟೈಟಲ್ ಟೀಸರ್ ಪ್ರತಿಯೊಬ್ಬರನ್ನು ಮೆಚ್ಚಿಸುವ ಮೂಲಕ ಯೂಟ್ಯೂಬ್ ನಲ್ಲಿ ಕೂಡ ಟ್ರೆಂಡಿಂಗ್ ನಲ್ಲಿದೆ. ಮುಂದಿನ ದಿನಗಳಲ್ಲಿ ಯುವರಾಜ್ ಕುಮಾರ್ ಕನ್ನಡ ಚಿತ್ರರಂಗದ ಮುಂದಿನ ದೊಡ್ಡ ಪ್ರತಿಭೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರ ನಂತರ ಅವರ ಜಾಗದಲ್ಲಿ ಯಾರನ್ನು ನೋಡುವುದು ಎನ್ನುವುದಾಗಿ ಅಪ್ಪು ಅಭಿಮಾನಿಗಳಲ್ಲಿ ಸಾಕಷ್ಟು ಬೇಸರ ಇತ್ತು. ಆದರೆ ಈ ಬೇಸರವನ್ನು ಕಡಿಮೆ ಮಾಡಲು ಅಪ್ಪು ಅವರ ಜಾಗದಲ್ಲಿ ಅವರ ಜವಾಬ್ದಾರಿಯನ್ನು ಹೊತ್ತು ಯುವರಾಜ್ ಕುಮಾರ್ ಅವರ ಜಾಗವನ್ನು ಸಮರ್ಥವಾಗಿ ತುಂಬಲು ಯುವ ಸಿನೆಮಾದ ಮೂಲಕ ಈಗ ಬಂದಿದ್ದಾರೆ.

ಇನ್ನು ಈಗಾಗಲೇ ಯುವರಾಜಕುಮಾರ್(Yuvarajkumar) ಅವರ ಮೊದಲ ಸಿನಿಮಾದ ಚಿತ್ರೀಕರಣ ಪೂರೈಸುವ ಮುನ್ನವೇ ಯುವರಾಜ್ ಕುಮಾರ್ ಅವರಿಗೆ ದೊಡ್ಡ ಮನೆ ಅಭಿಮಾನಿಗಳು ಹಲವಾರು ಬಿರುದುಗಳನ್ನು ಈಗಾಗಲೇ ನೀಡಲು ಪ್ರಾರಂಭಿಸಿದ್ದಾರೆ. ಅಷ್ಟಕ್ಕೂ ಯುವರಾಜ್ ಕುಮಾರ್ ಅವರಿಗೆ ಅಭಿಮಾನಿಗಳು ನೀಡುತ್ತಿರುವ ಬಿರುದುಗಳು ಏನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ಅವರ ಜಾಗದಲ್ಲಿ ಯುವರಾಜ್ ಕುಮಾರ್ ಅವರನ್ನು ಎಲ್ಲರೂ ಕೂಡ ಕಾಣುತ್ತಿರುವುದರಿಂದ ಅವರನ್ನು ಜೂನಿಯರ್ ಪವರ್ ಸ್ಟಾರ್ ಹಾಗೂ ಮೆಗಾ ಪವರ್ ಸ್ಟಾರ್ ಎಂಬುದಾಗಿ ಕರೆಯುತ್ತಿದ್ದಾರೆ. ತಮ್ಮ ಸಿನಿಮಾಗಳ ಮೂಲಕ ಮುಂದಿನ ದಿನಗಳಲ್ಲಿ ಯುವರಾಜ್ ಕುಮಾರ್ ಇನ್ನಷ್ಟು ಯಶಸ್ಸನ್ನು ಪಡೆದು ಕನ್ನಡ ಚಿತ್ರರಂಗ ಕಾಣುವಂತಹ ಶ್ರೇಷ್ಠ ನಾಯಕನಾಗಿ ಕಾಣಿಸಿಕೊಳ್ಳಲಿ ಎಂಬುದಾಗಿ ಹಾರೈಸೋಣ.

Leave A Reply

Your email address will not be published.