Yuva: ಡಿ ಬಾಸ್ ನಟನೆಯ ಕಾಟೇರ ಸಿನಿಮಾದ ದಾಖಲೆಯನ್ನು 2 ಗಂಟೆಗಳಲ್ಲಿ ಧೂಳಿಪಟ ಮಾಡಿದ ಯುವ ಸಿನಿಮಾದ ಟೀಸರ್!

Yuvarajkumar ದೊಡ್ಮನೆಯ ಮೂರನೇ ಜನರೇಷನ್ ನ ಕುಡಿ ಆಗಿರುವಂತಹ ಯುವರಾಜ್ ಕುಮಾರ್ ಅವರು ಕೊನೆಗೂ ಕನ್ನಡ ಚಿತ್ರರಂಗಕ್ಕೆ ನಾಯಕ ನಟನಾಗಿ ಕಾಲಿಡುವುದು ಕನ್ಫರ್ಮ್ ಆಗಿದೆ. ಯುವರಾಜ್ ಕುಮಾರ್ ಅವರ ಮೊದಲ ಸಿನಿಮಾದ ಹೆಸರು ಯುವ(Yuva Kannada Film) ಎಂದು ಈಗಾಗಲೇ ಅಧಿಕೃತವಾಗಿ ನಾಮಕರಣ ಮಾಡಲಾಗಿದೆ.

ಸಂತೋಷ್ ಆನಂದ್ ರಾಮ್(Santosh Ananddram) ನಿರ್ದೇಶನದಲ್ಲಿ ಹಾಗೂ ಹೊಂಬಾಳೆ ಫಿಲಂಸ್(Hombale Films) ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾಗೆ ಯುವರಾಜ್ ಕುಮಾರ್ ಅವರು ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು ಸಿನಿಮಾ ಪಕ್ಕ ಮಾಸ್ ಆಗಿ ಮೂಡಿ ಬರಲಿದೆ ಎನ್ನುವ ಸುಳಿವನ್ನು ಸಿನಿಮಾದ ಟೀಸರ್ ಈಗಾಗಲೇ ನೀಡಿದೆ. ಇನ್ನು ಮೊದಲ ಸಿನಿಮಾದ ಮೊದಲ ಟೀಸರ್ ಮೂಲಕವೇ ಚಿತ್ರರಂಗದ ದೊಡ್ಡ ಸ್ಟಾರ್ ನಟನ ದಾಖಲೆಯನ್ನು ಕೂಡ ಯುವರಾಜ್ ಕುಮಾರ್ ಮುರಿದಿದ್ದಾರೆ.

ಇತ್ತೀಚಿಗಷ್ಟೇ ಫೆಬ್ರವರಿ 16ರಂದು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ನಟಿಸಿದ್ದ ಕಾಟೇರ(Kaatera) ಸಿನಿಮಾದ ಟೈಟಲ್ ಅನೌನ್ಸ್ಮೆಂಟ್ ಟೀಸರ್ ವಿಡಿಯೋ ಎರಡು ವಾರದಲ್ಲಿ 13 ಲಕ್ಷ ವ್ಯೂಸ್ ಅನ್ನು ಪಡೆದುಕೊಂಡಿತ್ತು. ಆದರೆ ಯುವರಾಜಕುಮಾರ್ ನಟನೆಯ ಯುವ ಸಿನಿಮಾದ ಟೀಸರ್ ಈಗ ಕೇವಲ ಅದನ್ನು ಎರಡೇ ಗಂಟೆಗಳಲ್ಲಿ ಮುರಿದು ಬಿಸಾಕಿದೆ.

ಈ ಮೂಲಕ ಕನ್ನಡ ಚಿತ್ರರಂಗದ ಟಾಪ್ ನಟ ಆಗಿರುವ ದರ್ಶನ್(Darshan) ಅವರ ರೆಕಾರ್ಡ್ ಅನ್ನು ಕೂಡ ಯುವರಾಜಕುಮಾರ್(Yuvarajkumar) ಕೇವಲ ಮೊದಲ ಸಿನಿಮಾದಲ್ಲಿಯೇ ಮುರಿಯುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಸ್ಟಾರ್ ಆಗುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಯುವ ಸಿನಿಮಾದ ಟೀಸರ್ ಬಗ್ಗೆ ನಿಮಗಿರುವ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!