Loose Mada Yogi: ಯೋಗಿ ಮಾಡಬೇಕಾಗಿದ್ದ ಸಿನಿಮಾವನ್ನು ಯಶ್ ಮಾಡಿ ಸ್ಟಾರ್ ಆದ್ರು! ಯಶ್ ಅವರ ಅದೃಷ್ಟವನ್ನು ಚೇಂಜ್ ಮಾಡಿದ ಆ ಸಿನಿಮಾ ಯಾವುದು?

Yash ದುನಿಯಾ ಸಿನಿಮಾದಲ್ಲಿ ವಿಜಯ್(Duniya Vijay) ರವರ ಜೊತೆಗೆ ಪಕ್ಕದಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಲೂಸ್ ಮಾದ ಯೋಗಿ(Loose Mada Yogi) ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಯುವ ಉದಯೋನ್ಮುಖ ನಟನಾಗಿ ಕಾಣಿಸಿಕೊಳ್ಳುತ್ತಾರೆ. ಆರಂಭದಲ್ಲಿ ಮುಂದಿನ ದಿನಗಳಲ್ಲಿ ಯೋಗಿ ಖಂಡಿತವಾಗಿ ಕನ್ನಡದ ಸೂಪರ್ ಸ್ಟಾರ್ಗಳಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ ಎಂಬುದಾಗಿ ಎಲ್ಲರೂ ಅಂದುಕೊಂಡಿದ್ದರು.

ಆದರೆ ಯಕ್ಷ ಸಿನಿಮಾ(Yaksha Film) ಮಾಡುವ ಮೂಲಕ ಅವರು ಮಾಡಿಕೊಂಡಂತಹ ಎಡವಟ್ಟು ಹಾಗೂ ಸಾಲ ಅವರನ್ನು ತಮ್ಮ ಭವಿಷ್ಯವನ್ನು ತಮ್ಮ ಕೈಯಾರೆ ತಾವೇ ಹಾಳು ಮಾಡಿಕೊಳ್ಳುವಂತೆ ಮಾಡುತ್ತದೆ. ಆರಂಭಿಕ ದಿನಗಳಲ್ಲಿ ಅವರ ಡ್ಯಾನ್ಸ್ ಹಾಗೂ ನಟನೆಯನ್ನು ಎಲ್ಲರೂ ಕೂಡ ಇಷ್ಟಪಟ್ಟಿದ್ದರು. ಹೀಗಿದ್ದರೂ ಕೂಡ ಅವರು ಮಾಡಬೇಕಾಗಿದ್ದ ಒಂದು ಸಿನಿಮಾ ಅವರೇ ಮಾಡಿದ್ದರೆ ಇಂದಿಗೂ ಕೂಡ ಸೂಪರ್ ಸ್ಟಾರ್ ಆಗಿ ಚಿತ್ರರಂಗದಲ್ಲಿ ಮಿಂಚುತ್ತಿದ್ದರು.

ಹೌದು ಮಿತ್ರರೇ ಲೂಸ್ ಮಾದ ಯೋಗಿ ಮಾಡಬೇಕಾಗಿದ್ದ ಆ ಸಿನಿಮಾವನ್ನು ರಾಕಿಂಗ್ ಸ್ಟಾರ್ ಯಶ್(Rocking Star Yash) ರವರು ಮಾಡುವ ಮೂಲಕ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿ ಇಂದು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಸ್ಟಾರ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಗಿದ್ದರೆ ಅಷ್ಟಕ್ಕೂ ಆ ಸಿನಿಮಾ ಯಾವುದು ಎನ್ನುವುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ರಾಕಿಂಗ್ ಸ್ಟಾರ್ ಯಶ್ ರಾಧಿಕಾ ಪಂಡಿತ್(Radhika Pandit) ಸಿಂಧು ಲೋಕನಾಥ್ ಹಾಗೂ ಸತೀಶ್ ನೀನಾಸಂ ನಟಿಸಿದ್ದಂತಹ ಸೂಪರ್ ಹಿಟ್ ಸಿನಿಮಾ ಡ್ರಾಮಾ(Drama Kannada Film) ವನ್ನು ಮೊದಲು ಲೂಸ್ ಮಾದ ಯೋಗಿ(Yogi) ಮಾಡಬೇಕಾಗಿತ್ತು, ಆದರೆ ಕಾರಣಾಂತರಗಳಿಂದ ಅವರು ಮಾಡಲು ಸಾಧ್ಯವಾಗಲಿಲ್ಲ. ಅದಾದ ನಂತರ ಯಶ್ ರವರು ಈ ಸಿನಿಮಾವನ್ನು ಒಪ್ಪಿಕೊಂಡು ದೊಡ್ಡ ಮಟ್ಟದಲ್ಲಿ ಗೆಲುವನ್ನು ಸಾಧಿಸಿ ಚಿತ್ರರಂಗದಲ್ಲಿ ಸ್ಟಾರ್ ಪಟ್ಟವನ್ನು ಗಳಿಸಿ ಈಗ ಯಾವ ಸ್ಥಾನದಲ್ಲಿದ್ದಾರೆ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ.

Leave A Reply

Your email address will not be published.