Rocking Star Yash: ನೆಕ್ಸ್ಟ್ ಫಿಲ್ಮ್ ಯಾವಾಗ ಎಂದು ಕೇಳಿದ್ದಕ್ಕೆ ರೈಸ್ ಅಪ್ ಬೇಬಿ ಎಂದ ಯಶ್! ಆಶ್ಚರ್ಯದಲ್ಲಿ ಅಭಿಮಾನಿಗಳು.

Yash 19 ರಾಕಿಂಗ್ ಸ್ಟಾರ್ ಯಶ್(Rocking Star Yash) ಅವರ ಅಭಿಮಾನಿಗಳು ಸೇರಿದಂತೆ ಪ್ರತಿಯೊಬ್ಬರೂ ಕೂಡ ರಾಕಿಂಗ್ ಸ್ಟಾರ್ ಯಶ್(Hash) ರವರನ್ನು ಕೇಳುತ್ತಿರುವ ಒಂದೇ ಒಂದು ಪ್ರಶ್ನೆ ಎಂದರೆ ನಿಮ್ಮ ಮುಂದಿನ ಸಿನಿಮಾ ಯಾವಾಗ ಹಾಗೂ ಅದರ ಬಗ್ಗೆ ಇರುವಂತಹ ಅಪ್ಡೇಟ್ಗಳು ಏನು ಎಂಬುದು. ಈಗಾಗಲೇ ಸಾಕಷ್ಟು ಸಮಯಗಳು ಕಳೆದಿದ್ದರೂ ಕೂಡ ಇದರ ಕುರಿತಂತೆ ಯಾವುದೇ ಅಪ್ಡೇಟ್ಗಳು ಸಿಕ್ಕಿಲ್ಲ.

ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಯಶ್(Yash) ಅವರ ಮುಂದಿನ ಸಿನಿಮಾದ ಕುರಿತಂತೆ ಸಾಕಷ್ಟು ಊಹಾಪೋಹಗಳ ಸುದ್ದಿಗಳು ಬರುತ್ತಲೇ ಇವೆ. ಆದರೆ ಅಧಿಕೃತವಾದ ಸುದ್ದಿಗಳನ್ನು ಯಾವ ಮೂಲಗಳು ಕೂಡ ನೀಡುತ್ತಿಲ್ಲ ಎನ್ನುವುದು ಮತ್ತೊಂದು ಬೇಸರದ ವಿಚಾರವಾಗಿದೆ.

ಯಶ್ ಅವರ ಬಳಿ ಅವರ ಮುಂದಿನ ಸಿನಿಮಾದ ಬಗ್ಗೆ ಅಪ್ಡೇಟ್ ಕೇಳುತ್ತಿರುವ ಅಭಿಮಾನಿಗಳಿಗೆ ಯಶ್ ಅವರಿಂದ ಒಂದು ಸರ್ಪ್ರೈಸಿಂಗ್ ವಿಚಾರ ಹೊರ ಬಂದಿದೆ. ಹೌದು ಯಶ್ ರವರ 19ನೇ(Yash 19) ಸಿನಿಮಾದ ಬಗ್ಗೆ ಅಪ್ಡೇಟ್ ಕೇಳುವ ಅಭಿಮಾನಿಗಳಿಗೆ ಯಶ್ ರೈಸ್ ಆಫ್ ಬೇಬಿ ಎನ್ನುವುದಾಗಿ ಉತ್ತರ ನೀಡಿದ್ದಾರೆ. ಪ್ರತಿಯೊಬ್ಬ ಅಭಿಮಾನಿಗಳು ಕೂಡ ಇದರ ಕುರಿತಂತೆ ಇದೇನಪ್ಪ ಹೊಸ ಸ್ಲೋಗನ್ ಎನ್ನುವುದಾಗಿ ಆಶ್ಚರ್ಯಪಟ್ಟಿದ್ದಾರೆ. ಅಷ್ಟಕ್ಕೂ ಇದೇನು ಎಂಬುದಾಗಿ ಕೇಳುತ್ತಿರುವ ಯಶ್ ಅಭಿಮಾನಿಗಳಿಗೆ ಉತ್ತರಕೂಡ ಸಿಕ್ಕಿದೆ.

ಹೌದು ಮಿತ್ರರೇ, ರಾಕಿಂಗ್ ಸ್ಟಾರ್ ಯಶ್(Yash) ರವರು ನಟಿಸಿರುವಂತಹ ಹೊಸ ಪೆಪ್ಸಿ(Pepsi) ಜಾಹೀರಾತು ಈಗಾಗಲೇ ಎಲ್ಲಾ ಕಡೆ ವೈರಲ್ ಆಗುತ್ತಿದ್ದು ಅದರಲ್ಲಿ ಪೆಪ್ಸಿ ಹೀರುತ್ತಾ ರಾಕಿಂಗ್ ಸ್ಟಾರ್ ಯಶ್ ರವರು ರೈಸ್ ಅಪ್ ಬೇಬಿ ಎನ್ನುವ ಡೈಲಾಗ್ ಹೇಳಿದ್ದು ಈಗ ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ಸಿನಿಮಾ ರೇಂಜ್ನಲ್ಲಿ ಈ ಜಾಹೀರಾತು ವೈರಲ್ ಆಗುತ್ತಿದ್ದು ಇದನ್ನೇ ಎಲ್ಲಾ ಯಶ್ ಅಭಿಮಾನಿಗಳು ಸಂಭ್ರಮಿಸುತಿದ್ದಾರೆ.

Leave a Comment

error: Content is protected !!