ತಮ್ಮ ಮುಂದಿನ ಸಿನಿಮಾದ ಬಗ್ಗೆ ಹೇಳಿಕೆ ನೀಡಿದ ಯಶ್. ಬೇಸರದಲ್ಲಿ ಅಭಿಮಾನಿಗಳು.

KGF yash next movie update: ರಾಕಿಂಗ್ ಸ್ಟಾರ್ ಯಶ್ ಅವರ ಕೊನೆಯ ಸಿನಿಮಾ ಕೆಜಿಎಫ್ ಚಾಪ್ಟರ್ 2 ಬಿಡುಗಡೆ ಆಗಿ ಈಗಾಗಲೇ ಹಲವಾರು ಸಮಯಗಳು ಕಳೆದಿದ್ದು 2022 ರಲ್ಲಿ ಅತ್ಯಂತ ಹೆಚ್ಚು ಕಲೆಕ್ಷನ್ (Collection ) ಮಾಡಿರುವ ಭಾರತೀಯ ಸಿನಿಮಾ ಎನ್ನುವ ಹೆಗ್ಗಳಿಕೆಗೂ ಕೂಡ ಪಾತ್ರವಾಗಿದೆ. ಈ ಸಿನಿಮಾ ಇಡೀ ಕನ್ನಡ ಚಿತ್ರರಂಗವನ್ನು ಭಾರತೀಯ ಚಿತ್ರರಂಗದ ತುತ್ತ ತುದಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಆದರೆ ಕೆಜಿಎಫ್ ಚಾಪ್ಟರ್ 2 ನಂತರ ರಾಕಿಂಗ್ ಸ್ಟಾರ್ ಯಶ್ ಅವರು ಯಾವ ಸಿನಿಮಾ ಮಾಡಲಿದ್ದಾರೆ ಎಂಬ ಕುರಿತಂತೆ, ಪ್ರತಿಯೊಬ್ಬರಲ್ಲಿ ಕೂಡ ಗೊಂದಲ ತುಂಬಿದೆ.

ಯಶ್ ಅವರ 19ನೇ ಸಿನಿಮಾದ ಬಗ್ಗೆ ಸಾಕಷ್ಟು ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ( Social Media ) ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸಖತ್ ಆಗಿ ಓಡಾಡುತ್ತಿದ್ದು ಅಭಿಮಾನಿಗಳಲ್ಲಿ ಕೂಡ ಇದರ ಕುರಿತಂತೆ ಚರ್ಚೆಗಳು ತೀವ್ರವಾಗಿಯೇ ನಡೆಯುತ್ತಿದೆ. ಆದರೆ ಕೊನೆಗೂ ರಾಕಿಂಗ್ ಸ್ಟಾರ್ ಯಶ್ ಅವರೇ ಖುದ್ದಾಗಿ ಇದರ ಕುರಿತಂತೆ ಇತ್ತೀಚಿಗಷ್ಟೇ ನಡೆದಿರುವ ಸಂದರ್ಶನ (Interview ) ಒಂದರಲ್ಲಿ ಬಿಚ್ಚಿಟ್ಟಿದ್ದಾರೆ.

ಹೌದು ಮಿತ್ರರೇ, ಸದ್ಯಕ್ಕಂತು ನಾನು ಯಾವುದೇ ಸಿನಿಮಾವನ್ನು ಮಾಡುತ್ತಿಲ್ಲ ಅದರಲ್ಲಿಯೂ ವಿಶೇಷವಾಗಿ ಕೆಜಿಎಫ್ ಚಾಪ್ಟರ್ 3 ಚಿತ್ರವನ್ನು ಮಾಡಲು ಹೋಗುತ್ತಿಲ್ಲ. ನಾನು ಹೊಸ ಹೊಸ ಸಿನಿಮಾಗಳನ್ನು ಪ್ರಯತ್ನ ಪಡುವ ಹೋರಾಟಗಾರನಾಗಿದ್ದೇನೆ ಹೀಗಾಗಿ ಹೊಸ ರೀತಿಯ ಸಿನಿಮಾವನ್ನು ಮಾಡಲು ನಾನು ಅಪೇಕ್ಷಿಸುತ್ತೇನೆ. ನಾನು ಯಾವ ಸಿನಿಮಾ ಮಾಡಲಿದ್ದೇನೆ ಎನ್ನುವ ಕಥೆ ನಿರ್ದೇಶಕರು ಹಾಗೂ ಚಿತ್ರತಂಡ ಫೈನಲ್ (Final ) ಆದಮೇಲೆ ನಾನು ಇದರ ಕುರಿತಂತೆ ಘೋಷಿಸುತ್ತೇನೆ ಎಂಬುದಾಗಿ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.

ಕೇವಲ ಸ್ನೇಹಿತರು ಮಾತ್ರ ಅಂತಿದ್ದ ಪವಿತ್ರ ಹಾಗೂ ನರೇಶ್ ಈಗ ಮಾಡಿರೋದಾದ್ರೂ ಏನು ಗೊತ್ತಾ?

ಹೀಗಾಗಿ ಜನವರಿ 8ರಂದು ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನಾಚರಣೆಯ ಸಂದರ್ಭದಲ್ಲಿ ಹೊಸ ಸಿನಿಮಾದ ಕುರಿತಂತೆ ಅಪ್ಡೇಟ್ ( Update ) ಸಿಗುತ್ತದೆ ಎಂಬುದಾಗಿ ಭಾವಿಸಿರುವ ಅಭಿಮಾನಿಗಳಿಗೆ ದೊಡ್ಡ ಮಟ್ಟದ ಬೇಸರವನ್ನು ಸ್ವತಹ ಅವರ ನೆಚ್ಚಿನ ನಟ ರಾಕಿಂಗ್ ಸ್ಟಾರ್ ಯಶ್ ನೀಡಿದ್ದಾರೆ ಎಂದು ಹೇಳಬಹುದಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!