ಡಾಕ್ಟರ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ನಡೆದ ಗಲಾಟೆ ಏನಾಗಿತ್ತು ಗೊತ್ತಾ?? ಮುಖ್ಯಮಂತ್ರಿ ಆಗಿದ್ದ ಬಂಗಾರಪ್ಪನವರಿಗೆ ಚಪ್ಪಲಿ ಎಸೆದವರಾರು??

ಕರ್ನಾಟಕ ರತ್ನ ಪ್ರಶಸ್ತಿಯು, ‘ಯಾವುದೇ ಒಂದು ರಂಗದಲ್ಲಿ ಪ್ರಾವೀಣ್ಯತೆಯನ್ನು ಹೊಂದಿದ್ದು, ಅದಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡು, ಅಪರಿಮಿತ ಸೇವೆಗೈದ ವ್ಯಕ್ತಿಗಳಿಗೆ ನೀಡುವ ಗೌರವ’ವೆನ್ನಬಹುದು. 1992 ರಲ್ಲಿ ಎಸ್ ಬಂಗಾರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ‘ಕರ್ನಾಟಕ ರತ್ನ’ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸುವ ಕಾರ್ಯವನ್ನು ಮೊಟ್ಟ ಮೊದಲಿಗೆ ಹಮ್ಮಿಕೊಂಡರು.

ಈವರೆಗೆ 10 ಜನರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಪೌರಾಣಿಕ, ಪ್ರೇಮ, ಸಂಸಾರಿಕ, ಸಾಮಾಜಿಕ ಸೇರಿದಂತೆ ಹಲವಾರು ವಿಧದ ಕಥೆಗಳಲ್ಲಿ, ನಾನಾ ರೀತಿಯ ಪಾತ್ರಗಳಿಗೆ ಬಣ್ಣ ಹಚ್ಚಿ ಕರ್ನಾಟಕದ ಮನೆ ಮಂದಿಯ ಮನ ತಲುಪಿದ, ಮಾದರಿಯಾಗಿ ಜೀವಿಸಿದ ಮೇರು ನಟ ಡಾ. ರಾಜಕುಮಾರ್ ಅವರಿಗೆ ಈ ಪ್ರಶಸ್ತಿ ಸಂದಿದೆ. ಅವರಂತೆಯೇ ಅವರ ಪುತ್ರ ಪುನೀತ್ ರಾಜಕುಮಾರ್ ಅವರಿಗೂ ಕೂಡ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಕರ್ನಾಟಕ ರತ್ನ ಪ್ರಶಸ್ತಿಯನ್ನು ಮೊಟ್ಟ ಮೊದಲಿಗೆ ನೀಡಿ ಗೌರವಿಸುವ ಯೋಜನೆಯನ್ನು ಹಮ್ಮಿಕೊಂಡಾಗ, ಮೊದಲು ಕೇಳಿ ಬಂದ ಹೆಸರು ಡಾಕ್ಟರ್ ರಾಜಕುಮಾರ್ ಅವರದ್ದಾಗಿತ್ತು. ಆದರೆ ಡಾಕ್ಟರ್ ರಾಜಕುಮಾರ್ ಅವರು ಇದನ್ನು ನಿರಾಕರಿಸಿದರು. ನಿರಾಕರಿಸಲು ಕಾರಣವೇನೆಂದರೆ, ‘ಕನ್ನಡ ಸಾಹಿತ್ಯದಲ್ಲಿ ತಮ್ಮ ಪಾಂಡಿತ್ಯದಿಂದ ಅಪಾರ ಕೊಡುಗೆ ನೀಡಿದ ಕುವೆಂಪು ಅವರಿಗೆ ಮೊಟ್ಟ ಮೊದಲಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಿ’ ಎಂಬುದಾಗಿತ್ತು.

ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿತ್ವವುಳ್ಳ ರಾಜಕುಮಾರ ಅವರು ಕರ್ನಾಟಕ ರತ್ನ ಪ್ರಶಸ್ತಿಯನ್ನು ಕುವೆಂಪು ಅವರಿಗೆ ನೀಡಿದ ನಂತರವೇ ಸ್ವೀಕರಿಸಿದ್ದಾರೆ. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಕವಿ ಕುವೆಂಪು ಅವರಿಗೆ ತನಗಿಂತಲೂ ಮೊದಲು ಈ ಪ್ರಶಸ್ತಿ ಸಲ್ಲಬೇಕು ಎಂದು ರಾಜಕುಮಾರ್ ಅವರು ಆಸೆ ಪಟ್ಟಿದ್ದರು.

ಡಾಕ್ಟರ್ ರಾಜಕುಮಾರ್ ಅವರು ಹೇಳಿದಂತೆಯೇ ಮೊದಲು ಕುವೆಂಪು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ನಂತರ ರಾಜಕುಮಾರ್ ಅವರಿಗೆ ಪ್ರಶಸ್ತಿಯನ್ನು ನೀಡುತ್ತಾರೆ. ಪ್ರಶಸ್ತಿಯನ್ನು ಸ್ವೀಕರಿಸಿದ ಬಳಿಕ ರಾಜಕುಮಾರ ಅವರು ವೇದಿಕೆಯಲ್ಲಿ ಭಾಷಣವನ್ನು ಮಾಡುತ್ತಾರೆ. ನಂತರ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ ಅವರು ಭಾಷಣವನ್ನು ಮಾಡಲು ಪ್ರಾರಂಭಿಸುತ್ತಾರೆ. ಅದೇ ವೇಳೆಯಲ್ಲಿ ಕಿಡಿಗೇಡಿಗಳು ಅವರ ಮೇಲೆ ಚಪ್ಪಲಿಯನ್ನು ಎಸೆದು ಕಾರ್ಯಕ್ರಮಕ್ಕೆ ಒಂದು ಕಪ್ಪು ಚುಕ್ಕೆ ಇಟ್ಟಿರುವುದು ಬೇಸರದ ಸಂಗತಿ.

ಕಿಡಿಗೇಡಿಗಳು ಈ ರೀತಿಯಾಗಿ ಮಾಡಲು ಒಂದು ಕಾರಣವಿದೆ. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗುವುದು ಅವರ ಪಕ್ಷದಲ್ಲಿಯೇ ಕೆಲವರಿಗೆ ಇಷ್ಟವಿರಲಿಲ್ಲ. ಅಲ್ಲದೆ ರಾಜಕುಮಾರವರು ಬಂಗಾರಪ್ಪ ಅವರಿಗೆ ಸಂಬಂಧಿಗಳು ಆಗಿದ್ದರು. ರಾಜಕುಮಾರ್ ಅವರಿಗೆ ಆಪ್ತರಾಗಿದ್ದ ಕಾರಣಕ್ಕಾಗಿಯೇ ಬಂಗಾರಪ್ಪ ಅವರು ಕರ್ನಾಟಕ ಪ್ರಶಸ್ತಿಯನ್ನು ನೀಡಿ ಗೌರವಿಸುವ ಯೋಚನೆ ಮಾಡಿದ್ದಾರೆ ಎಂದು, ತಮ್ಮಷ್ಟಕ್ಕೆ ತಾವೇ ಅಂದುಕೊಂಡು ಅವರು ಭಾಷಣ ಮಾಡುತ್ತಿರುವಾಗ ಚಪ್ಪಲಿಯನ್ನು ಎಸೆದಿದ್ದರು.

Leave a Comment

error: Content is protected !!