ರಾಧಿಕಾ ನನ್ನ ಸೊಸೆಯೇ ಅಲ್ಲ.. ರಾಧಿಕಾ ನಾ ಯಾವತ್ತೂ ನಾನು ಸೊಸೆ ತರ ನೋಡೇ ಇಲ್ಲ ಅಂತ ಯಶ್ ಅಮ್ಮ ಹೇಳಿದ್ದೇಕೆ
ರಾಧಿಕಾ ಪಂಡಿತ್ ಮತ್ತು ಯಶ್ ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ ಗಳು. ಈ ಮುದ್ದು ಜೋಡಿಗಳು ಮಾದರಿ ದಂಪತಿಗಳು. ರಾಧಿಕಾ ಮತ್ತು ಯಶ್ ಅವರ ಜೋಡಿಯನ್ನು ನೋಡಿ ನಮಗೆ ಕೂಡ ಇದೇ ರೀತಿಯ ಪಾರ್ಟ್ನರ್ ಸಿಗಲಿ ಎಂದು ಎಷ್ಟೋ ಜನ ದೇವರಲ್ಲಿ ಬೇಡಿಕೊಳ್ಳುತ್ತಾರೆ. ಸಿನಿರಂಗದಲ್ಲಿ ಆಗಲಿ ಅಥವಾ ವೃತ್ತಿ ಜೀವನದಲ್ಲೇ ಆಗಲಿ ರಾಧಿಕಾ ಮತ್ತು ಯಶ್ ಅವರದ್ದು ಕಾಂಟ್ರವರ್ಸಿಗಳೇ ಇಲ್ಲ. ಇಬ್ಬರು ಆದರ್ಶ ದಂಪತಿಗಳು.
ಯಶ್ ಮತ್ತು ರಾಧಿಕಾ ಪಂಡಿತ್ ಅವರು ಪ್ರೀತಿಸಿ ಮದುವೆಯಾಗಿದ್ದಾರೆ ಎಂಬ ವಿಷಯ ಎಲ್ಲರಿಗೂ ತಿಳಿದಿದೆ. ಇಬ್ಬರೂ ಕೂಡ ತಮ್ಮ ವೃತ್ತಿಜೀವನವನ್ನು ಒಟ್ಟಿಗೆ ಪ್ರಾರಂಭ ಮಾಡಿ ಒಟ್ಟಿಗೆ ಯಶಸ್ಸನ್ನು ಕಂಡಿದ್ದಾರೆ ಪ್ರಾರಂಭದಲ್ಲಿ ಯಶ್ ಮತ್ತು ರಾಧಿಕಾ ಒಳ್ಳೆಯ ಸ್ನೇಹಿತರಾಗಿದ್ದು ತದನಂತರ ಸ್ನೇಹ ಪ್ರೀತಿ ಆಗಿ ಬದಲಾಗಿತ್ತು. ತಮ್ಮ ಪ್ರೀತಿಯನ್ನು ಮನೆಯವರಿಗೆ ನೇರವಾಗಿ ತಿಳಿಸಿ ಇಬ್ಬರು ಕುಟುಂಬದವರ ಒಪ್ಪಿಗೆಯ ಮೇರೆಗೆ ವಿವಾಹವಾಗಿದ್ದಾರೆ.
ತನ್ನ ಮಗ ಯಶ್ ಮತ್ತು ರಾಧಿಕಾ ಇಬ್ಬರ ಸಂಬಂಧದ ಬಗ್ಗೆ ಇದೀಗ ಯಶ್ ಅವರೇ ಸ್ವತಃ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಯಶ್ ಮತ್ತು ರಾಧಿಕಾ ಒಟ್ಟಿಗೆ ಧಾರಾವಾಹಿಗಳಲ್ಲಿ ನಟಿಸುವಾಗ ಕೂಡ ರಾಧಿಕಾ ಯಶ್ ಮನೆಗೆ ಆಗಾಗ ಭೇಟಿ ಕೊಡುತ್ತಿದ್ದಳು. ಯಶ್ ಮನೆಯಲ್ಲಿ ಕಾರ್ಯಕ್ರಮಗಳಿದ್ದರೆ ರಾಧಿಕಾ ಬರುತ್ತಿದ್ದಳು ಮತ್ತು ರಾಧಿಕಾ ಮನೆಯಲ್ಲಿ ಕಾರ್ಯಕ್ರಮಗಳಿದ್ದರೆ ಕೂಡಾ ಹೋಗುತ್ತಿದ್ದರು. ಒಟ್ಟಿನಲ್ಲಿ ರಾಧಿಕಾ ಯಶ್ ಅಮ್ಮನಿಗೆ ಮದುವೆಗಿಂತಲೂ ಮುಂಚೆಯಿಂದಲೇ ಪರಿಚಯ.

ರಾಧಿಕಾ ಮತ್ತು ಯಶ್ ಅವರು ಪ್ರೀತಿ ಮಾಡಲು ಪ್ರಾರಂಭಿಸಿದಾಗ ಯಶ್ ಅಮ್ಮನ ಬಳಿ ಹೋಗಿ ಹೇಳಿದ್ದರು. ತನ್ನ ಮಗ ರಾಧಿಕಾಳನ್ನು ಪ್ರೀತಿ ಮಾಡುತ್ತಿದ್ದ ಎಂಬ ವಿಷಯ ತಿಳಿದಮೇಲೆ ಯಶ್ ಅಮ್ಮ ಖುಷಿ ಖುಷಿ ಪಟ್ಟಿದ್ದರು. ಯಾವಾಗ ಎಷ್ಟು ನನ್ನ ರಾಧಿಕಾಳನ್ನೇ ಮದುವೆಯಾಗುತ್ತೇನೆ ಎಂದು ಹೇಳುತ್ತಾರೋ ಕಾದು ಯಶಮಂ ಕಣ್ಣುಮುಚ್ಚಿಕೊಂಡು ಒಪ್ಪಿಕೊಂಡರು. ಹಾಗೆ ರಾಧಿಕಾ ಅವರ ಮನೆಯವರು ಕೂಡ ಯಶ್ ಅವರ ಹೆಸರನ್ನು ಕೇಳಿದ ಮೇಲೆ ತಕ್ಷಣ ಒಪ್ಪಿಕೊಂಡರು.
ಮದುವೆಯಾದ ಮೇಲೆ ರಾಧಿಕಾ ಯಶ್ ಮನೆಗೆ ಸೊಸೆಯಾಗಿ ಬಂದಿರುವುದು ಯಶ್ ಅಮ್ಮನಿಗೆ ಹೊಸದು ಅನ್ನಿಸಲಿಲ್ಲ. ಯಾಕೆಂದರೆ ಯಶ್ ಅವರ ಅಮ್ಮ ಹೇಳುವ ಹಾಗೆ ರಾಧಿಕಾ ನನಗೆ ಸೊಸೆಯಲ್ಲ ನಾನು ಯಾವತ್ತೂ ರಾಧಿಕಾಳನ್ನು ಸೊಸೆಯ ತರ ನೋಡೇ ಇಲ್ಲ ಎಂದು ಹೇಳಿದ್ದಾರೆ ಯಾಕೆಂದರೆ ರಾಧಿಕಾಳನ್ನು ಯಶ್ ಅಮ್ಮ ಯಾವಾಗಲೂ ಫ್ರೆಂಡ್ ಥರ ಕಾಣುತ್ತಾರಂತೆ. ಅತ್ತೆ ಸೊಸೆಯ ಹಾಗೆ ಇರಬೇಕಿದ್ದ ಇವರು ಗೆಳತಿಯರಾಗಿ ಸಂಬಂಧ ಬೆಳೆಸಿಕೊಂಡಿದ್ದಾರೆ.
ರಾಧಿಕಾ ಎಲ್ಲಾ ವಿಚಾರವನ್ನು ಮನಬಿಚ್ಚಿ ಅತ್ತೆಯ ಬಳಿ ಹೇಳಿಕೊಳ್ಳುತ್ತಾರೆ. ಯಶ್ ಅವರ ತಂದೆ ತಾಯಿ ಮೈಸೂರಿನ ಮೂಲದವರಾದ್ದರಿಂದ ರಾಧಿಕಾ ಅವರು ಅತ್ತೆಯ ಬಳಿ ಮೈಸೂರಿನ ಬಗೆ ಬಗೆ ಪದಾರ್ಥಗಳನ್ನು ಮಾಡುವುದನ್ನು ಕಲಿತಿದ್ದಾರೆ. ಮುದ್ದೆ ಬಸ್ಸಾರು ಮಾಡುವುದನ್ನು ಅತ್ತೆಯ ಬಳಿ ಕಲಿತುಕೊಂಡಿದ್ದಾರೆ. ಶ್ರೇಷ್ಠವಾದ ಪದಾರ್ಥಗಳನ್ನು ಮಾಡುವುದನ್ನು ರಾಧಿಕಾ ಅತ್ತೆಯ ಬಳಿ ಕಲಿತುಕೊಂಡಿದ್ದಾರೆ. ರಾಧಿಕಾಗೆ ಹೊಂದಿಕೊಳ್ಳುವಂತಹ ಒಳ್ಳೆಯ ಸ್ವಭಾವ ಇದೆಯೆಂದು ಉತ್ಸವ ರಾಮ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ತಮ್ಮ ಮನೆಗೆ ರಾಧಿಕಾ ಒಳ್ಳೆಯ ಸೊಸೆ. ತುಂಬ ಚೆನ್ನಾಗಿ ಅರ್ಥಮಾಡಿಕೊಂಡು ಜೀವನ ಸಾಗಿಸುತ್ತಾಳೆ ಎಂದು ಯಶ್ ಅಮ್ಮ ಹೇಳಿದ್ದಾರೆ.