ವಿಷ್ಣು ದಾದಾ ಅವರ ಮತ್ತೋರ್ವ ಪುತ್ರಿ ಯಾರು ? ಎಲ್ಲಿದ್ದಾರೆ ? ಆಕೆಗೆ ಮದುವೆಯಾಗಿದೆಯೇ?

ಕನ್ನಡ ಚಿತ್ರರಂಗದ ಮೇರು ನಟರಾದ ಡಾಕ್ಟರ್ ವಿಷ್ಣುವರ್ಧನ್ ( vishuvardhan) ಹಾಗೂ ಭಾರತೀಯವರು ( bharati vishnuvardhan) ಇಬ್ಬರು ಮಕ್ಕಳನ್ನು ದತ್ತು ಪಡೆದುಕೊಂಡು ತಮ್ಮ ಸ್ವಂತ ಮಕ್ಕಳಂತೆಯೇ ನೋಡಿಕೊಂಡಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಇವರು ದತ್ತು ಪಡೆದ ಹೆಣ್ಣು ಮಕ್ಕಳಿಬ್ಬರ ಹೆಸರು, ಚಂದನಾ ಮತ್ತು ಕೀರ್ತಿ (Vishnuvardhan daughter chandana and keerti).

ಕೀರ್ತಿಯವರು ಮೀಡಿಯಾಗಳಲ್ಲಿ ಆಗಾಗ ಕಾಣಿಸುತ್ತಾರೆ. ಆದರೆ ಚಂದನ ಅವರು ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಇತ್ತೀಚಿಗಷ್ಟೇ ಈ ಕುಟುಂಬವು ಡಾಕ್ಟರ್ ವಿಷ್ಣುವರ್ಧನ್ ಅವರ ಮನೆಯ ನವೀಕರಣದ ಕನಸನ್ನು ನೆರವೇರಿಸುವ ಸಲುವಾಗಿ ಹೊಸದೊಂದು ನವಯುಗದ ಮನೆಯನ್ನೇ ನಿರ್ಮಿಸಿದ್ದಾರೆ. ಎರಡು ಫ್ಲೋರ್ಗಳ ಮನೆ ಅದಾಗಿದ್ದು, ಹಳೆಯ ಮನೆಯಲ್ಲಿ ವಿಷ್ಣುವರ್ಧನ್ ಅವರು ಕಾಲ ಕಳೆಯಲು ಇಷ್ಟಪಡುತ್ತಿದ್ದ ಹಸಿರು ತುಂಬಿದ ಗಾರ್ಡನ್ ನಂತೆಯೇ ಹೊಸ ಮನೆಯಲ್ಲಿಯೂ ಗಿಡ ಮರಗಳನ್ನು ಬೆಳೆಸಲೆಂದೇ ಜಾಗವನ್ನು ಮೀಸಲಿಟ್ಟು ಸುಂದರ ವನವನ್ನು ಬೆಳೆಸಿದ್ದಾರೆ. ವಿಷ್ಣುವರ್ಧನ್ ಅವರು ಪೂಜಿಸುತ್ತಿದ್ದ ಗಣೇಶನ ಮೂರ್ತಿಗಾಗಿ ಮನೆಯ ಎದುರಲ್ಲಿ ಒಂದು ಮಂಟಪವನ್ನು ನಿರ್ಮಿಸಿದ್ದಾರೆ.

Vishnuvardhan second daughter

ಈ ಮನೆಯ ಗ್ರಹಪ್ರವೇಶವು ನವೆಂಬರ್ 27ರಂದು ಅದ್ದೂರಿಯಾಗಿ ನೆರವೇರಿತ್ತು. ಮನೆಯ ನಿರ್ಮಾಣ ಕಾಲದಲ್ಲಿ ಭಾರತೀಯ ವಿಷ್ಣುವರ್ಧನ್ ಅವರೊಂದಿಗೆ ಮಗಳು ಕೀರ್ತಿ ಹಾಗೂ ಅವರ ಪತಿ ಅನಿರುದ್ಧ ಅವರು ಹೆಗಲಾಗಿ ನಿಂತಿದ್ದು, ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಜೊತೆ ಜೊತೆಯಲಿ ಧಾರವಾಹಿಯ ಆರ್ಯವರ್ಧನ್ ಖ್ಯಾತಿಯ ಅನಿರುದ್ಧವರನ್ನು ವಿಷ್ಣುವರ್ಧನ್ ಅವರ ಪುತ್ರಿ ಕೀರ್ತಿಯವರು ವಿವಾಹವಾಗಿದ್ದಾರೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಇದೇ ದಂಪತಿಗಳು ಗೃಹಪ್ರವೇಶ ಕಾರ್ಯಕ್ರಮದ ಪೂಜೆಯಲ್ಲಿ ಕಾಣಿಸಿಕೊಂಡಿದ್ದರು.

ಕೀರ್ತಿಯವರು ಅವರ ಆಸೆಯಂತೆ ತಂದೆ ವಿಷ್ಣುವರ್ಧನ್ ಅವರ ಒಪ್ಪಿಗೆ ಪಡೆದು ಕಾಸ್ಟ್ಯೂಮ್ ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಷ್ಣುವರ್ಧನ್ ಕುಟುಂಬದ ಸಭೆ ಸಮಾರಂಭಗಳಲ್ಲಿಯಾದರೂ ಕಾಣಿಸಿಕೊಂಡು ಕೀರ್ತಿಯವರು ಮೀಡಿಯಾದಲ್ಲಿ ಆಗಾಗ ಕಾಣ ಸಿಗುತ್ತಾರೆ. ಆದರೆ ಚಂದನ ಅವರು ಗೃಹಪ್ರವೇಶ ಕಾರ್ಯಕ್ರಮಕ್ಕೆ ಆಗಮಿಸಿದ್ದರು ಕೂಡ ಫೋಟೋ ಹಾಗೂ ವಿಡಿಯೋಗಳಲ್ಲಿ ಅಷ್ಟಾಗಿ ಸೆರೆಯಾಗಿಲ್ಲ. ಇವರಿಗೆ ಮಾಧ್ಯಮಗಳೆಂದರೆ ಮುಜುಗರವಂತೆ.

Vishnuvardhan second daughter photo
Vishnuvardhan second daughter photo

ಚಂದನಾ ಅವರು ಫಾರಿನ್ ಕಂಟ್ರಿಯಲ್ಲಿ ಸೆಟಲ್ ಆಗಿದ್ದಾರೆ ಎಂಬುದು ಹಲವರ ಅಭಿಪ್ರಾಯ. ಆದರೆ ಅವರು ತಮ್ಮ ಉದ್ಯಮಿ ಪತಿಯೊಂದಿಗೆ, ಬೆಂಗಳೂರಿನಲ್ಲಿಯೇ ವಾಸವಾಗಿದ್ದಾರೆ ಎನ್ನಲಾಗುತ್ತಿದೆ. ಮಾಧ್ಯಮದವರು ಸಂದರ್ಶನಕ್ಕಾಗಿ ಚಂದನಾ ಹಾಗೂ ಅವರ ಪತಿಯಲ್ಲಿ ಕೇಳಿದಾಗ ಮುಜುಗರದಿಂದ ಅವರಿಬ್ಬರೂ ಒಪ್ಪಿಕೊಳ್ಳಲಿಲ್ಲವಂತೆ. ಒಬ್ಬ ಸ್ಟಾರ್ ನಟನ ಮಗಳಾಗಿಯೂ ಕೂಡ ಹೆಚ್ಚು ಪ್ರಚಾರಗೊಳ್ಳದೆ ಸರಳ ಜೀವನವನ್ನು ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ವಿಷ್ಣುವರ್ಧನ್ ಅವರ ಪುತ್ರಿಯರು, ಚಂದನಾ ಮತ್ತು ಕೀರ್ತಿ ಇಬ್ಬರು ಖುಷಿಯಾದ ಜೀವನವನ್ನು ಸಾಗಿಸುತ್ತಿದ್ದಾರೆ.

ಇದನ್ನ ಓದಿ : ಅಪ್ಪು ಬದುಕಿದ್ದರೆ ಮಾಡಬೇಕಾಗಿದ್ದ ಸಿನಿಮಾಗಳು ಯಾವುವು ಗೊತ್ತಾ?

Leave a Comment

error: Content is protected !!