ಕಾಂತಾರ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಸಪ್ತಮಿ ಗೌಡ ಅವರ ತಂದೆ ಯಾರು ಗೊತ್ತಾ ನಿಜಕ್ಕೂ ಯಾರ ಮಗಳು ಅಂತ ಗೊತ್ತಾದ್ರೆ ನೀವು ಕೂಡ ನಡಗುತ್ತೀರಾ!

ಕಾಂತಾರ ಸಿನಿಮಾ ಈಗಾಗಲೇ ದೇಶ ವಿದೇಶಗಳಲ್ಲಿ ದಿನದಿಂದ ದಿನಕ್ಕೆ ಪ್ರೇಕ್ಷಕರ ಮನ್ನಣೆಗೆ ಒಳಗಾಗುತ್ತಾ, ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿದೆ. ಈ ಮೂಲಕ ಚಿತ್ರರಂಗದಲ್ಲಿ ಸ್ಟಾರ್ ಹೀರೋಗಳನ್ನು ಹಾಕಿಕೊಂಡು ಸಿನಿಮಾ ಮಾಡಬೇಕಾದ ಅವಶ್ಯಕತೆ ಇಲ್ಲ ಮಾಡುತ್ತಿರುವ ಸಿನಿಮಾದ ಕಂಟೆಂಟ್ ಸ್ಟಾರ್ ಆಗಿದ್ದರೆ ಸಿನಿಮಾವನ್ನು ಜನರು ಮೆಚ್ಚಿ ತಲೆ ಮೇಲೆ ಇಟ್ಟು ಕೂರಿಸಿ ಪೂಜೆ ಮಾಡುತ್ತಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ ಕಾಂತಾರ ಸಿನಿಮಾ ಕೂಡ ಇದೇ ಕ್ಯಾಟಗರಿಗೆ ಸೇರುವ ಸಿನಿಮಾ ಆಗಿದೆ. ಇನ್ನು ಕೇವಲ 2 ರಿಂದ 3 ದಿನಗಳಲ್ಲಿ ತಮಿಳು ತೆಲುಗು ಹಿಂದಿ ಹಾಗು ಮಲಯಾಳಂ ಭಾಷೆಗಳಲ್ಲಿ ಕೂಡ ಕಾಂತಾರ ಸಿನಿಮಾ ಡಬ್ ಆಗಿ ಬಿಡುಗಡೆ ಆಗಿ ಅದ್ದೂರಿಯಾಗಿ ಬಿಡುಗಡೆ ಕಾಣಲಿದೆ ಎಂಬುದಾಗಿ ಹೊಂಬಾಳೆ ಫಿಲಂ ಸಂಸ್ಥೆಯಿಂದ ಅಧಿಕೃತವಾಗಿ ಈಗಾಗಲೇ ಪ್ರಕಟಣೆ ಹೊರಬಂದಿದೆ. ಒಂದು ವೇಳೆ ಕಾಂತಾರ ಸಿನಿಮಾ ಪಾನ್ ಇಂಡಿಯನ್ ಸಿನಿಮಾ ಆಗಿ ಯಶಸ್ಸು ಕಂಡರೆ ಖಂಡಿತವಾಗಿ ಕನ್ನಡ ಚಿತ್ರರಂಗ ಇನ್ನೊಂದು ಹಂತ ಮೇಲೇರುವುದರಲ್ಲಿ ಯಾವುದೇ ಅನುಮಾನವಿಲ್ಲ.

ಈಗಾಗಲೇ ಕಾಂತಾರ ಸಿನಿಮಾ ಅಮೆರಿಕದಲ್ಲಿ ಕೂಡ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿರುವ ಎರಡನೇ ಕನ್ನಡದ ಸಿನಿಮಾ ಎಂಬುದಾಗಿ ದಾಖಲೆಯನ್ನು ನಿರ್ಮಿಸಿದೆ. ಇನ್ನು ಈಗ ಸದ್ಯದ ಮಟ್ಟಿಗೆ ಕಾಂತರಾ ಸಿನಿಮಾದ ಮೂಲಕ ಸದ್ದು ಮಾಡುತ್ತಿರುವುದು ಚಿತ್ರದ ನಾಯಕ ನಟಿ ಆಗಿರುವ ಸಪ್ತಮಿ ಗೌಡ. ಸಪ್ತಮಿ ಗೌಡ ಲೀಲಾ ಪಾತ್ರದಲ್ಲಿ ಎಲ್ಲರ ಮನವನ್ನು ಗೆದ್ದಿರುವ ನಟಿಯಾಗಿದ್ದಾರೆ. ಇದಕ್ಕೂ ಮುನ್ನ ಡಾಲಿ ಧನಂಜಯ್ ಅವರ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ಕೂಡ ಒಂದು ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಇನ್ನು ಸಪ್ತಮಿ ಗೌಡ ಯಾರು ಅಂತ ಗೊತ್ತಾದ್ರೆ ಖಂಡಿತವಾಗಿ ಒಂದು ಕ್ಷಣ ನೀವು ಕೂಡ ಬೆಚ್ಚಿ ಬೀಳೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಸಪ್ತಮಿ ಗೌಡ ಅವರು ಒಂದು ಕಾಲದಲ್ಲಿ ಬೆಂಗಳೂರು ಭೋಗತ ಲೋಕದ ಹುಟ್ಟಡಗಿಸಿದ ದಕ್ಷ ಹಾಗೂ ಶಿಸ್ತುಬದ್ಧ ಪೊಲೀಸ್ ಅಧಿಕಾರಿ ಆಗಿರುವ ಎಸ್ ಕೆ ಉಮೇಶ್ ಅವರ ಪುತ್ರಿ ಆಗಿದ್ದಾರೆ. ಈ ವಿಷಯ ಬಹುತೇಕ ಎಲ್ಲರಿಗೂ ಕೂಡ ತಿಳಿಯದ ವಿಷಯವಾಗಿತ್ತು. ಅದೇನೇ ಇರಲಿ ಕಾಂತಾರ ಸಿನಿಮಾದಲ್ಲಿ ಲೀಲಾ ಪಾತ್ರಧಾರಿಯಾಗಿ ಸಪ್ತಮಿ ಗೌಡ ತಮ್ಮ ಪರಿಪೂರ್ಣ ನಟನೆಯನ್ನು ಪ್ರೇಕ್ಷಕರಿಗೆ ತೋರ್ಪಡಿಸಿದ್ದಾರೆ ಎನ್ನಬಹುದಾಗಿದೆ.

Leave a Comment

error: Content is protected !!