ಆಂಕರ್ ಅನುಶ್ರೀ ಅವರನ್ನು ನೀವೆಲ್ಲಾ ರಿಯಾಲಿಟಿ ಶೋಗಳ ನಿರೂಪಕಿಯಾಗಿ ನೋಡಿರುತ್ತೀರಿ. ಅನುಶ್ರೀ ಅವರ ನಿರೂಪಣೆ ಕರ್ನಾಟಕದ ಮೂಲೆ ಮೂಲೆಗೂ ತಲುಪುತ್ತೆ. ಸರಿಗಮಪ ಸಿಂಗಿಂಗ್ ಶೋ ನಲ್ಲಿ ಅನುಶ್ರೀ ಅವರ ನಿರೂಪಣೆ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು. ಅನುಶ್ರೀ ಕನ್ನಡ ಕಿರುತೆರೆಯಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದಾರೆ. ಇದೀಗ ಅನುಶ್ರೀ ಅವರ ವೈಯಕ್ತಿಕ ಜೀವನ ಚರ್ಚೆಗಳು ಕೂಡ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅನುಶ್ರೀ ಅವರು ಮೂಲತಃ ಮಂಗಳೂರಿನವಳು. ಅನುಶ್ರೀ ಹುಟ್ಟಿದ್ದು ತುಳು ಮಾತನಾಡುವ ಕುಟುಂಬದಲ್ಲಿ. ಇವರ ತಂದೆ ಸಂಪತ್ ಕುಮಾರ್ ಮತ್ತು ತಾಯಿ ಶಶಿಕಲಾ. ಅನುಶ್ರೀಗೆ ಅಭಿಜಿತ್ ಎಂಬ ತಮ್ಮ ಕೂಡ ಇದ್ದಾನೆ. ಅನುಶ್ರೀ ಅವರು ಚಿಕ್ಕ ವಯಸ್ಸಿನಲ್ಲಿದ್ದಾಗ ಅವರ ತಂದೆ ತಾಯಿ ಬೇರೆಯಾಗುತ್ತಾರೆ. ಚಿಕ್ಕ ವಯಸ್ಸಿನಲ್ಲೇ ಅನುಶ್ರೀ ಅವರ ತಂದೆ ಹೆಂಡತಿ ಮಕ್ಕಳನ್ನು ಬಿಟ್ಟು ದೂರ ಹೋಗುತ್ತಾರೆ. ಮನೆ ಮಕ್ಕಳನ್ನು ಬಿಟ್ಟು ದೂರದ ಊರಿಗೆ ತೆರಳಿ ಸಂಪತ್ ಕುಮಾರ್ ಅವರು ಸೇಲ್ಸ್&ಮಾರ್ಕೆಟಿಂಗ್ ನಲ್ಲಿ ಕೆಲಸ ಮಾಡುತ್ತಿದ್ದರು. ಈ ಕಡೆ ತಂದೆಯಿಲ್ಲದೆ ಅನುಶ್ರೀ ಅವರು ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುವ ಸಂದರ್ಭ ಒದಗಿತ್ತು.

ಚಿಕ್ಕ ವಯಸ್ಸಿನಲ್ಲಿ ಮಕ್ಕಳನ್ನು ಹೆಂಡತಿಯನ್ನು ಬಿಟ್ಟು ಹೋದ ನಂತರ ಅನುಶ್ರೀ ತಂದೆ ಮತ್ತೆ ಯಾವತ್ತೂ ಹಿಂತಿರುಗಿ ಬಂದಿಲ್ಲ. ಆದರೆ ಇದೀಗ ಅನುಶ್ರೀ ಅವರ ತಂದೆ ಸಂಪತ್ ಕುಮಾರ್ ಅವರು ತನ್ನ ಹೆಂಡತಿ ಮಕ್ಕಳನ್ನು ನೆನಪಿಸಿಕೊಂಡಿದ್ದಾರೆ. ಸ್ಟ್ರೋ ಕ್ ಕಾಯಿಲೆಯಿಂದ ಬಳಲುತ್ತಿರುವ ಸಂಪತ್ ಕುಮಾರ್ ಅವರು ಈದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನುಶ್ರೀ ಅವರ ತಂದೆ ಸಂಪತ್ ಕುಮಾರ್ ಅವರ ಸ್ಥಿತಿ ತುಂಬಾ ಗಂಭೀರವಾಗಿದೆ. ತಮ್ಮ ಕಾಲ ಮೇಲೆ ನಿಂತು ಓಡಾಡೋಕ್ಕೆ ಕೂಡಾ ಆಗ್ತಿಲ್ಲ.

ನಡೆದಾಡೋಕೆ ಕೂಡ ಆಗದೇ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿರುವ ಸಂಪತ್ ಕುಮಾರ್ ಅವರು ತನ್ನ ಮಗಳ ಬಗ್ಗೆ ಬೇಸರದ ಮಾತುಗಳನ್ನಾಡಿದ್ದಾರೆ. 1998 ರ ವರೆಗೂ ನಾನು ನನ್ನ ಫ್ಯಾಮಿಲಿ ಜೊತೆ ಇದ್ದೆ. ಆದರೆ ನನಗೆ ನನ್ನ ಕುಟುಂಬದಲ್ಲಿ ಪ್ರಾಮುಖ್ಯತೆ ಕೊಟ್ಟಿಲ್ಲ ಎಂಬ ಕಾರಣದಿಂದ ಕುಟುಂಬವನ್ನು ಬಿಟ್ಟು ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದೇನೆ. ನ್ಯೂಜಿಲ್ಯಾಂಡ್ ಶ್ರೀಲಂಕಾ ದುಬೈ ದೇಶ ಗಳಲ್ಲಿ ಜೀವನ ಸಾಗಿಸಿಕೊಂಡು ಇಷ್ಟು ದಿವಸ ನಾನು ರಾಯಲ್ ಆಗಿ ಇದ್ದೆ. ಇದೀಗ ನನಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ಈಗ ನನ್ನ ಟೈಮ್ ಸರಿಯಿಲ್ಲ. ಕೆಟ್ಟ ಕಾಲವನ್ನು ಎದುರಿಸಬೇಕಾದ ಪರಿಸ್ಥಿತಿ ಬಂದಿದೆ.

ಹಿಂದೆಂದೂ ಕೂಡ ನಾನು ಅನುಶ್ರೀ ತಂದೆ ಎಂದು ಹೇಳಿಕೊಂಡಿಲ್ಲ. ನನ್ನ ಮಗಳು ತುಂಬಾ ಕಷ್ಟಪಟ್ಟು ಹೆಸರು ಕೀರ್ತಿಯನ್ನು ಗಳಿಸಿದ್ದಾಳೆ. ನನ್ನ ಮಗಳ ಹೆಸರಿಗೆ ಧಕ್ಕೆ ಬರಬಾರದು ಎಂದು ನಾನು ಎಲ್ಲಿಯೂ ಕೂಡ ಸತ್ಯ ಬಾಯ್ಬಿಟ್ಟಿರಲಿಲ್ಲ. ನಾನು ಆಸ್ಪತ್ರೆಯಲ್ಲಿ ಹಾಸಿಗೆ ಹಿಡಿದಿದ್ದರೂ ಕೂಡ ನನ್ನ ಮಗಳು ನನ್ನನ್ನು ನೋಡಲಿಕ್ಕೆ ಬಂದಿಲ್ಲ. ಅವಳು ನನ್ನನ್ನು ನೋಡಲಿಕ್ಕೆ ಬರದೇ ಇದ್ದರೂ ನನಗೆ ಬೇಜಾರಿಲ್ಲ ಆದರೆ ನಾನು ತೀರಿಕೊಂಡ ಮೇಲೆ ಮಣ್ಣು ಹಾಕಿದರೆ ಸಾಕು. ಹಾಗೆ ಅನುಶ್ರೀ ನನ್ನ ಬಗ್ಗೆ ಹೇಳಿಕೊಳ್ಳಬಹುದಿತ್ತು ಆದರೆ ಆಕೆ ನನ್ನ ಬಗ್ಗೆ ಹೇಳಿಕೊಳ್ಳದೆ ಸಿಂಪತಿಯನ್ನು ಗಿಟ್ಟಿಸಿಕೊಳ್ಳುತ್ತಿದ್ದಾಳೆ. ಎಂಬ ಅಸಮಾಧಾನ ಮಾತುಗಳನ್ನು ಸಂಪತ್ ಕುಮಾರ್ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.

By admin

Leave a Reply

Your email address will not be published.