ಕೊನೆಗೂ ಹೊರಬಿತ್ತು ಶಾಕಿಂಗ್ ಸತ್ಯ! ಜೇಮ್ಸ್ ಚಿತ್ರದಲ್ಲಿ ಅಪ್ಪು ಮಾಡಬೇಕಿದ್ದ ಉಳಿದ ಸೀನ್ ಗಳನ್ನು ಮಾಡಿದ ವ್ಯಕ್ತಿ ಯಾರು ಗೊತ್ತಾ

ಅಪ್ಪು ಅವರ ಕೊನೆಯ ಚಿತ್ರ ಜೇಮ್ಸ್ ಚಿತ್ರ ಎರಡನೇ ದಿನದ ನಂತರವೂ ಕೂಡ ಯಶಸ್ವಿ ಓಟವನ್ನು ಮುಂದುವರಿಸಿದೆ. ಈ ಚಿತ್ರ ಚೆನ್ನಾಗಿದೆಯೋ ಇಲ್ಲವೋ ಅದು ಮುಖ್ಯವಲ್ಲ ನಮಗೆಲ್ಲ ಅಪ್ಪು ಅವರನ್ನು ಕೊನೆಯ ಬಾರಿ ಸ್ಕ್ರೀನ್ ಮೇಲೆ ನೋಡೋದೇ ಮುಖ್ಯ ಅಂತ ಪ್ರತಿಯೊಬ್ಬರೂ ಕೂಡ ಈ ಸಿನಿಮಾವನ್ನು ವೀಕ್ಷಿಸುತ್ತಿದ್ದಾರೆ. ಹಾಗೆ ಈ ಸಿನಿಮಾ ಕೂಡ ರೆಕಾರ್ಡ್ ಬ್ರೇಕಿಂಗ್ ದಾಖಲೆಗಳನ್ನು ಸೃಷ್ಟಿ ಮಾಡುತ್ತಿದೆ. ಮೊದಲನೆ ದಿನ ಕರ್ನಾಟಕದಲ್ಲಿ ಅತಿ ಹೆಚ್ಚು ಹಣವನ್ನು ಗಳಿಸಿದ ಸಿನಿಮಾ ಇದಾಗಿದೆ.

ಮೊದಲನೇ ವಾರದ ಕೊನೆಯಲ್ಲಿ ಜೇಮ್ಸ್ ಚಿತ್ರ ನೂರು ಕೋಟಿಯಷ್ಟು ಕಲೆಕ್ಷನ್ ಮಾಡುವುದು ಪಕ್ಕಾ ಆಗಿದೆ. ಚಿತ್ರ ಇಷ್ಟನ್ನೂ ಯಶಸ್ವಿಗೊಳಿಸಲು ಕಾರಣ ಅಪ್ಪು ಮಾತ್ರ. ಅಪ್ಪು ಕೊನೆಯುಸಿರೆಳೆಯುವುದಕ್ಕೆ ಮೊದಲು ಮುಂಚೆ ಜೇಮ್ಸ್ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದರು. ಈ ಚಿತ್ರವನ್ನು ಅಪ್ಪು ಅವರೇ ಕೊನೆಯದಾಗಿ ನಮಗೆಲ್ಲಾ ಉಡುಗೊರೆಯಾಗಿ ನೀಡಿ ಗುಡ್ ಬೈ ಹೇಳಿ ಹೋಗಿದ್ದಾರೆ. ಸಿನಿಮಾವನ್ನು ನೋಡಿದ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಆದರೆ ಸ್ವಲ್ಪ ಎಲ್ಲೋ ಒಂದು ಕಡೆ ಬೇಸರವೂ ಕೂಡ ಆಗಿದೆ.

ಅಭಿಮಾನಿಗಳಿಗೆ ಸ್ವಲ್ಪ ಬೇಸರವಾಗಿದ್ದೂ ಏಕೆಂದರೆ ಮೊದಲನೆಯದಾಗಿ ಅಪ್ಪು ಅವರ ಧ್ವನಿ ಈ ಚಿತ್ರದಲ್ಲಿಲ್ಲ. ಹಾಗೆಯೇ ಎರಡನೆಯ ವಿಷಯ ಏನೆಂದರೆ ಅಪ್ಪು ಸಂಪೂರ್ಣ ಚಿತ್ರೀಕರಣವನ್ನು ಕಂಪ್ಲೀಟ್ ಮಾಡಿಲ್ಲದ ಕಾರಣ ಕೆಲವು ದೃಶ್ಯಗಳಲ್ಲಿ ಪುನೀತ್ ಅವರ ಬದಲಾಗಿ ಪುನೀತ್ ಅವರಂತೆ ಕಾಣುವ ಇನ್ನೊಬ್ಬ ವ್ಯಕ್ತಿ ಅಭಿನಯ ಮಾಡಿದ್ದಾರೆ. ಜೇಮ್ಸ್ ಚಿತ್ರದ ನಿಂಜಾ ಫೈಟಿಂಗ್ ದೃಶ್ಯ ಮತ್ತು ಇನ್ನೂ ಕೆಲವು ಸೀನ್ ಗಳಲ್ಲಿ ಅವರ ಬದಲಾಗಿ ಬೇರೊಬ್ಬ ವ್ಯಕ್ತಿಯ ಬಳಿ ನಟನೆ ಮಾಡಿಸಿದ್ದಾರೆ. ಅಪ್ಪು ಅವರ ಫೇಸ್ ಗೆ ಕಂಪ್ಯೂಟರ್ ಗ್ರಾಫಿಕ್ಸ್ ಅಳವಡಿಸಲಾಗಿದೆ.

ಇದೀಗ ಪುನೀತ್ ಬದ್ಲಾಗಿ ನಟನೆ ಮಾಡಿದ ವ್ಯಕ್ತಿ ಯಾರೆಂದು ಸತ್ಯ ಹೊರಬಿದ್ದಿದೆ. ಹೌದು ಗೆಳೆಯರೇ ಪುನೀತ್ ಅವರ ಬದಲಾಗಿ ಜೇಮ್ಸ್ ಚಿತ್ರದಲ್ಲಿ ಕೆಲವು ದೃಶ್ಯಗಳಲ್ಲಿ ಅಭಿನಯ ಮಾಡಿದ್ದು ಜೂನಿಯರ್ ಪುನೀತ್ ರಾಜ್ ಕುಮಾರ್. ಇವರ ಹೆಸರು ಆನಂದ್. ಪುನೀತ್ ಅವರ ಹಾಗೆ ಕಾಣುವ ಆನಂದ್ ಅವರು ಕನ್ನಡ ಸಿನಿಮಾ ಒಂದರಲ್ಲಿ ಹೀರೋ ಆಗಿ ಕೂಡ ನಟಿಸಿದ್ದಾರೆ. ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಸ್ವತಃ ಆನಂದ್ ಅವರೇ ಈ ವಿಷಯದ ಬಗ್ಗೆ ಅಪ್ಪು ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ನಾನು ಒಬ್ಬ ಅಭಿಮಾನಿಯಾಗಿ ಪುನಿತ್ ಅವರು ಬಿಟ್ಟುಹೋಗಿದ್ದ ಉಳಿದ ಸೀನ್ ಗಳನ್ನು ನಿಭಾಯಿಸಿದ್ದೇನೆ ಎಂದು ಹೇಳಿದ್ದಾರೆ.

ಇನ್ನೊಂದು ಆಶ್ಚರ್ಯಕರ ಸಂಗತಿಯೇನೆಂದರೆ ಪುನೀತ್ ರಾಜ್ ಕುಮಾರ್ ಅವರ ಸ್ಥಾನವನ್ನು ತುಂಬಿರುವ ಈ ಜೂನಿಯರ್ ಪುನೀತ್ ರಾಜ್ ಕುಮಾರ್ ನೋಡಲಿಕ್ಕೆ ಸೇಮ್ ಟು ಸೇಮ್ ಪುನೀತ್ ರಾಜ್ ಕುಮಾರ್ ಅವರ ಹಾಗೆ ಇದ್ದಾರೆ. ಮತ್ತು ಇವರ ಧ್ವನಿ ಕೂಡ ಸೇಮ್ ಟು ಸೇಮ್ ಪುನೀತ್ ಅವರ ವಾಯ್ಸ್ ತರಹನೇ ಇದೆ. ಅಪ್ಪು ಅವರ ಧ್ವನಿಯಲ್ಲಿಯೇ ಹಾಡುತ್ತಾರೆ. ವಿಶೇಷತೆ ಏನೆಂದರೆ ಇವರ ಹುಟ್ಟುತ್ತಲೇ ಪುನೀತ್ ಅವರ ಹಾಗೆ ಮಾತಾಡೋದು ಮತ್ತು ನಟನೆ ಮಾಡೋದು ಉಡುಗೊರೆಯಾಗಿ ಬಂದಿದೆ. ಇವರು ಯಾವುದೇ ರೀತಿಯ ಕೃತಕ ಅಭಿನಯ ಮಾಡೋದಿಲ್ಲ. ಇವರ ನಟನೆ ಮತ್ತು ಧ್ವನಿ ಮುಂಚೆಯಿಂದಲೂ ಪುನೀತ್ ಅವರ ಹೋಲಿಕೆಯಿದೆ.

ಸಿನಿಮಾ ನೋಡಿ ಬಂದವರಿಗೆ ಪುನೀತ್ ಅವರ ಬದಲಾಗಿ ಬೇರೊಬ್ಬ ವ್ಯಕ್ತಿ ಪುನೀತ್ ಅವರ ಜಾಗದಲ್ಲಿ ನಟಿಸಿದ್ದಾರೆ ಎಂಬುದು ಸ್ವಲ್ಪ ಕೂಡ ಸಂಶಯ ಬಂದಿಲ್ಲ. ಅಷ್ಟು ಚೆನ್ನಾಗಿ ನಿಭಾಯಿಸಿದ್ದಾರೆ. ಧ್ವನಿಯಲ್ಲಿ ಕೂಡ ಪುನೀತ್ ಅವರ ಹೋಲಿಕೆ ಇರುವ ಈ ವ್ಯಕ್ತಿ ಜೇಮ್ಸ್ ಚಿತ್ರದಲ್ಲಿ ಯಾಕೆ ಡಬ್ ಮಾಡಿಲ್ಲ ಎಂದು ಇದೀಗ ಪ್ರಶ್ನೆ ಕಾಡುತ್ತಿದೆ. ಅಭಿಮಾನಿಗಳೆಲ್ಲ ಶಿವಣ್ಣ ಅವರ ಬದಲಾಗಿ ಪುನೀತ್ ರಾಜ್ ಕುಮಾರ್ ಅವರೇ ವೈಸ್ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳುತ್ತಿದ್ದಾರೆ.

Leave a Comment

error: Content is protected !!