Weekend With Ramesh: ಈ ಬಾರಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಬರುವ ಅತಿಥಿಗಳ ಪಟ್ಟಿ ಅಧಿಕೃತವಾಗಿಯೇ ಹೊರಬಂತು ನೋಡಿ.

Ramesh Aravind ಇನ್ನೇನು ಕೆಲವೇ ದಿನಗಳಲ್ಲಿ ಅಂದರೆ ಮಾರ್ಚ್ 25 ರಿಂದ ಕರ್ನಾಟಕದ ಮನೆ ಮನೆಯು ಕಾಯುತ್ತಿರುವಂತಹ ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದ ಐದನೇ ಆವೃತ್ತಿ ಪ್ರಾರಂಭವಾಗಲಿದೆ. ರಮೇಶ್ ಅವರ ನಿರೂಪಣೆಯಲ್ಲಿ ಈ ಸಾಧಕರ ಸಾಧನೆಯನ್ನು ನೋಡುವಂತಹ ನಿಜವಾದ ಸ್ಪೂರ್ತಿದಾಯಕ ಕಾರ್ಯಕ್ರಮವನ್ನು ನೋಡಲು ಪ್ರತಿಯೊಬ್ಬರು ಕೂಡ ಕಾತರರಾಗಿದ್ದಾರೆ.

ಇನ್ನು ಮೊದಲನೇ ಸಂಚಿಕೆಗೆ ರಿಷಬ್ ಶೆಟ್ಟಿ(Rishab Shetty) ಬರಲಿದ್ದಾರೆ ಎನ್ನುವುದಾಗಿ ಭಾವಿಸಲಾಗಿತ್ತು ಆದರೆ ಈ ಸುದ್ದಿ ಈಗ ಸುಳ್ಳಾಗಿದ್ದು ಮೊದಲನೇ ಸಂಚಿಕೆಗೆ ಅತಿಥಿಯಾಗಿ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ(Actress ramya) ಅವರು ಬರಲಿದ್ದಾರಂತೆ. ಇನ್ನು ಯಾರೆಲ್ಲ ಈ ಕಾರ್ಯಕ್ರಮಕ್ಕೆ ಬರಬಹುದು ಎನ್ನುವ ಮಾಹಿತಿಗಳು ಕೂಡ ಈಗಾಗಲೇ ಜೀ ಕನ್ನಡ(Zee Kannada) ವಾಹಿನಿಯ ಹೆಡ್ ಆಗಿರುವ ರಾಘವೇಂದ್ರ ಹುಣಸೂರು ಅವರ ಮುಖಾಂತರವೂ ಕೂಡ ತಿಳಿದು ಬಂದಿದೆ.

ಹೌದು ಮಿತ್ರರೇ ಈ ಬಾರಿ ಪ್ರಭುದೇವ ರಚಿತಾರಾಮ್(Rachita Ram) ಧ್ರುವ ಸರ್ಜಾ ಇಶಾ ಫೌಂಡೇಶನ್ ನ ಜಗ್ಗಿ ವಾಸುದೇವ ಕೂಡ ಬರಲಿದ್ದಾರೆ ಎನ್ನುವ ಸುದ್ದಿಗಳು ಅಧಿಕೃತವಾಗಿ ತಿಳಿದು ಬಂದಿದ್ದು ಒಟ್ಟಾರೆ ಈ ಬಾರಿ 16 ಸೆಲೆಬ್ರಿಟಿಗಳು ಸಾಧಕರ ಸೀಟಿನಲ್ಲಿ ಕುಳಿತುಕೊಳ್ಳದಿದ್ದಾರಂತೆ. ಈ ಬಾರಿಯ ಹದಿನಾರನೇ ಅಂದರೆ ಕೊನೆಯ ಸೆಲೆಬ್ರಿಟಿ ವೀಕೆಂಡ್ ವಿತ್ ರಮೇಶ್(Weekend With Ramesh 5) ಕಾರ್ಯಕ್ರಮದ 100ನೇ ಸೆಲೆಬ್ರಿಟಿ ಆಗಿರಲಿದ್ದಾರೆ.

ಹೀಗಾಗಿ 100ನೇ ಸೆಲೆಬ್ರಿಟಿ ಅತ್ಯಂತ ವಿಶೇಷವಾಗಿರಲಿದ್ದು ಅವರ ಬಗ್ಗೆ ಮುಂದಿನ ದಿನಗಳಲ್ಲಿ ಅಧಿಕೃತವಾಗಿ ತಿಳಿಸಲಿದ್ದೇವೆ ಎನ್ನುವುದಾಗಿ ರಮೇಶ್ ಅರವಿಂದ್(Ramesh Aravind) ಸೀಕ್ರೆಟ್ ಅನ್ನು ತಮ್ಮಲ್ಲಿ ಉಳಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಸಾಕಷ್ಟು ಸಮಯಗಳಿಂದ ಕಾಯುತ್ತಿದ್ದ ಈ ಕಾರ್ಯಕ್ರಮ ಮತ್ತೆ ಕಿರುತೆರೆಗೆ ವಾಪಸ್ ಆಗಿರುವುದು ಎಲ್ಲರಿಗೂ ಕೂಡ ಖುಷಿ ನೀಡಿದೆ‌. ಈ ಕಾರ್ಯಕ್ರಮದ ಬಗ್ಗೆ ನಿಮಗಿರುವಂತಹ ಅಭಿಪ್ರಾಯ ಹಾಗೂ ನಿರೀಕ್ಷೆಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!