Vishnuvardhan ಕೋಟ್ಯಾಂತರ ಖರ್ಚು ಮಾಡಿ ವಿಷ್ಣು ಸ್ಮಾರಕವನ್ನು ಕಟ್ಟಿಸಿದ್ರು ಕೂಡ ಸರ್ಕಾರದ ಮೇಲೆ ಫ್ಯಾನ್ಸ್ ಕೋಪ ಮಾಡ್ಕೊಂಡಿರೋದು ಯಾಕೆ ಗೊತ್ತಾ?

Dr Vishnuvardhan ಕನ್ನಡ ಚಿತ್ರರಂಗದ ಅಭಿನಯ ಭಾರ್ಗವ ಭಾರತೀಯ ಚಿತ್ರರಂಗದ ಫೀನಿಕ್ಸ್(Phoenix) ಎಂಬುದಾಗಿ ಅಭಿಮಾನಿಗಳ ಮನಸ್ಸಿನಲ್ಲಿ ಎಂದಿಗೂ ಕೂಡ ನೆಲೆ ನಿಂತಿರುವ ಕನ್ನಡ ಚಿತ್ರರಂಗದ ಸಾಂಸ್ಕೃತಿಕ ರಾಯಭಾರಿ ವಿಷ್ಣುವರ್ಧನ್ ಅವರ ಸ್ಮಾರಕವನ್ನು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಎಚ್ ಡಿ ಕೋಟೆಯ ಸಮೀಪದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕಟ್ಟಲಾಗಿದೆ.

ವಿಷ್ಣುವರ್ಧನ್ ಅವರನ್ನು ನೆನಪಿಸುವಂತಹ ಹಲವಾರು ವಸ್ತುಗಳನ್ನು ಅಲ್ಲಿ ಇಡಲಾಗಿದ್ದು ಆಡಿಟೋರಿಯಂ(Auditorium) ಸೇರಿದಂತೆ ಇನ್ನೂ ಹಲವಾರು ಕಣ್ಮನ ಸೆಳೆಯುವಂತಹ ವಸ್ತುಗಳನ್ನು ಕೂಡ ಅಲ್ಲಿ ಕಟ್ಟಲಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಹಲವಾರು ವರ್ಷಗಳಿಂದ ವಿಷ್ಣು ಅಭಿಮಾನಿಗಳು ಇನ್ನಿಲ್ಲದಂತೆ ಪ್ರತಿಯೊಂದು ಸರ್ಕಾರಗಳಲ್ಲಿ ಕೂಡ ಬೇಡಿಕೊಳ್ಳುತ್ತಿದ್ದ ಬೇಡಿಕೆ ಕೊನೆಗೂ ಕೂಡ ಪೂರೈಸಿದಂತಾಗಿದೆ.

ಆದರೆ ವಿಷ್ಣುವರ್ಧನ್ ಅವರ ಸ್ಮಾರಕಗಳು ಲೋಕಾರ್ಪಣೆ ಆಗುತ್ತಿದ್ದ ಮಾರನೇ ದಿನವೇ ವಿಷ್ಣುವರ್ಧನ್ ಅಭಿಮಾನಿಗಳಲ್ಲಿ ಮತ್ತೆ ಅಸಮಾಧಾನದ ಹೊಗೆ ಭು’ಗಿಲೆದ್ದಿದೆ. ಸ್ಮಾರಕದ ಕುರಿತಂತೆ ಹಲವಾರು ವಿಷ್ಣು ಅಭಿಮಾನಿಗಳಲ್ಲಿ ಅಸಮಾಧಾನ ಇರುವುದು ಇತ್ತೀಚಿಗಷ್ಟೇ ವೈರಲ್ ಆಗಿರುವ ವಿಡಿಯೋ ಮೂಲಕ ತಿಳಿದು ಬಂದಿದೆ. ಇಷ್ಟೆಲ್ಲ ಕೋಟಿ ಖರ್ಚು ಮಾಡಿ ಸ್ಮಾರಕವನ್ನು ಕಟ್ಟಿಸಿದ್ದರು ಕೂಡ ವಿಷ್ಣು ಅಭಿಮಾನಿಗಳು(Fans) ಕೋಪಗೊಳ್ಳುತ್ತಿರುವುದು ಯಾಕೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ರಾತ್ರಿ ಆದ ನಂತರ ವಿಷ್ಣುವರ್ಧನ್ ಸ್ಮಾರಕದಲ್ಲಿ ಒಂದು ಬೆಳಕಿನ ವ್ಯವಸ್ಥೆಯನ್ನು ಕೂಡ ಮಾಡಿಲ್ಲ ಎಂಬುದಾಗಿ ತಿಳಿದು ಬಂದಿದ್ದು ರಾತ್ರಿ ವಿಷ್ಣು ಸ್ಮಾರಕ ಕತ್ತಲಲ್ಲೇ ಕಳೆಯಬೇಕಾದಂತಹ ಪರಿಸ್ಥಿತಿ ಕಂಡು ಬಂದಿದೆ. ಇದನ್ನು ಗಮನಿಸಿರುವ ಅಭಿಮಾನಿಗಳು ಇದನ್ನು ಕೇವಲ ಕಾಟಾಚಾರಕ್ಕೆ ಕಟ್ಟಲಾಗಿದೆ ಎಂಬುದಾಗಿ ಅಸಮಾಧಾನವನ್ನು ಹೊರಹಾಕಿದ್ದಾರೆ. ಇಷ್ಟೊಂದು ಭವ್ಯವಾಗಿ ನಿರ್ಮಾಣವಾಗಿರುವ ವಿಷ್ಣು ಸ್ಮಾರಕಕ್ಕೆ ಮೂಲಭೂತ(Fundamental) ಸೌಕರ್ಯವನ್ನು ಸರಿಯಾಗಿ ಮಾಡಬೇಕಾಗಿತ್ತು ಎಂಬುದಾಗಿ ಎಲ್ಲರೂ ಕೂಡ ಅಭಿಪ್ರಾಯಪಟ್ಟಿದ್ದಾರೆ. ಮುಂದಾದರೂ ಇದನ್ನು ಗಮನಿಸಿ ಸಂಬಂಧಪಟ್ಟವರು ಸರಿಯಾದ ಕ್ರಮಗಳನ್ನು ಕೈ ತೆಗೆದುಕೊಳ್ಳಲಿ ಎಂಬುದೇ ನಮ್ಮ ಆಶಯ.

Leave a Comment

error: Content is protected !!