ಸಾಹಸಸಿಂಹ ವಿಷ್ಣುವರ್ಧನ್ ಅವರು ಕಾಲ ಕಳೆಯಲು ಬಯಸುತ್ತಿದ್ದ ಸುಂದರ ಮನೆ ಈಗ ಹೇಗಿದೆ ಗೊತ್ತಾ? ಅವರು ಓಡಾಡುತ್ತಿದ್ದ ಕಾರ್ ಈಗ ಎಲ್ಲಿದೆ ಗೊತ್ತಾ?

ಕನ್ನಡ ಚಿತ್ರರಂಗದ ‘ಆಂಗ್ರಿ ಯಂಗ್ ಮ್ಯಾನ್’ ಎಂದೇ ಕರೆಸಿಕೊಳ್ಳುವ ವಿಷ್ಣುವರ್ಧನ್ ಅವರು ಪ್ರೇಮ ಕಥೆ, ಆಕ್ಷನ್ ಸಿನಿಮಾ, ಕಾದಂಬರಿ ಆಧಾರಿತ ಸಿನಿಮಾಗಳಲ್ಲಿಯೂ ಬಣ್ಣ ಹಚ್ಚಿ ಪಾತ್ರಕ್ಕೆ ತಕ್ಕನಾಗಿ ಅಭಿನಯಿಸಿ, ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದವರು. ಕರ್ಣ ಚಿತ್ರದಲ್ಲಿನ ಅವರ ಅಭಿನಯಕ್ಕೆ ಕಣ್ಣಲ್ಲಿ ನೀರು ಹಾಕದವರು ಖಂಡಿತ ಯಾರು ಇರಲಾರರು.

ಇದೀಗ ವಿಷ್ಣುವರ್ಧನ್ ಅವರ ಆಸೆಯಂತೆಯೇ ಅವರ ಕುಟುಂಬಸ್ಥರು ಹೊಸ ಮನೆಯೊಂದನ್ನು ನಿರ್ಮಿಸಿದ್ದು, ಗೃಹಪ್ರವೇಶಕ್ಕೆ ಭರ್ಜರಿ ತಯಾರಿ ನಡೆಸಿದ್ದು, ಆಪ್ತರು ಸಂಬಂಧಿಗಳು ಕೂಡಿದ್ದರಂತೆ. ಭಾರತಿ ವಿಷ್ಣುವರ್ಧನ್ ಅವರಲ್ಲಿ ವಿಷ್ಣುದಾದಾ ಅವರು ಆಗಾಗ ‘ಎಲ್ಲರೂ ಅವರವರ ಮನೆಯಲ್ಲಿ ಹೊಸ ಹೊಸ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದಾರೆ; ಅಂತೆಯೇ ನಾವು ನವೀಕರಣ ಮಾಡಿಸಬೇಕು’ ಎನ್ನುತ್ತಿದ್ದರಂತೆ.

Vishnuvardhan old house and new house transfomation

ಅವರ ಆಸೆಯಂತೆ 2019 ರಲ್ಲಿ ಹೊಸ ಮನೆಯನ್ನು ನಿರ್ಮಿಸುವ ಕಾರ್ಯಕ್ಕೆ ಕುಟುಂಬಸ್ಥರು ಮುಂದಾದರಂತೆ. ಭಾರತಿ ವಿಷ್ಣುವರ್ಧನ್, ಮಗಳು ಕೀರ್ತಿ ಹಾಗೂ ಅನಿರುದ್ಧ ಅವರ ಸಲಹೆ, ಸೂಚನೆ, ವೆಚ್ಚಗಳಲ್ಲಿ ವಿಷ್ಣು ದಾದಾ ಅವರ ಕನಸಿನ ಮನೆ ಸಿದ್ದಗೊಂಡಿದೆ. ಮನೆಯ ಮುಖ್ಯ ದ್ವಾರದ ಶೈಲಿಯಲ್ಲಿ ಕೊಂಚ ಬದಲಾಗಿದ್ದರು, ಜಾಗ ಹಳೆಯ ಮನೆಯ ಮುಖ್ಯದ್ವಾರದಲ್ಲಿಯೇ ಇದೆಯಂತೆ. ಇನ್ನು ವಿಷ್ಣು ದಾದಾ ಅವರು ಮನೆಯ ಆವರಣದಲ್ಲಿಯೇ ಇಟ್ಟು ಪೂಜಿಸುತ್ತಿದ್ದ ಗಣೇಶನ ವಿಗ್ರಹಕ್ಕಾಗಿ ಒಂದು ಮಂಟಪವನ್ನೇ ನಿರ್ಮಿಸಲಾಗಿದೆಯಂತೆ.

Dr Vishnuvardhan new house opening ceremony.
Dr Vishnuvardhan new house opening ceremony

ಮನೆಯ ಒಳಾಂಗಣ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆ ಇದ್ದು, ಮಾಡರ್ನ್ ಟ್ರೆಂಡಿಗೆ ತಕ್ಕನಾಗಿ ಡೆಕೋರೇಟ್ ಮಾಡಲಾಗಿದೆಯಂತೆ. ವಿಷ್ಣುವರ್ಧನ್ ಅವರ ಹಳೆಯ ಮನೆಯಲ್ಲಿನ ಫೋಟೋದಲ್ಲಿ ಸಾಮಾನ್ಯವಾಗಿ ಕಾಣುವಂತೆ ಸಿಲ್ವರ್ ಬಣ್ಣದ ಬೆಂಜ್ ಕಾರ್ ಒಂದು ಮನೆಯ ಎದುರಿನ ಆವರಣದಲ್ಲಿಯೇ ಕಾಣಿಸುತ್ತಿತ್ತು. ಆ ಬೆಂಜ್ ಕಾರ್ ಅಲ್ಲಿ ಪ್ರಯಾಣಿಸಲು ವಿಷ್ಣುವರ್ಧನ್ ಅವರು ಇಷ್ಟಪಡುತ್ತಿದ್ದರಂತೆ. ಇದೀಗ ಆ ಕಾರು ಎಲ್ಲಿದೆ ಎಂಬುದರ ಕುರಿತಾಗಿ ಮಾಹಿತಿ ಇಲ್ಲ. ಆದರೆ ಅದನ್ನು ಭದ್ರವಾಗಿ ಇರಿಸಿಕೊಳ್ಳಲಾಗಿದೆಯಂತೆ.

ವಿಷ್ಣುವರ್ಧನ್ ಹಳೆಯ ಮನೆಯಲ್ಲಿ ಒಂದೇ ಫ್ಲೋರ್ ನಲ್ಲಿ ವಿಶಾಲವಾದ ಜಾಗವಿತ್ತಂತೆ ಆದರೆ ಹೊಸ ಮನೆಯಲ್ಲಿ ಎರಡು ಫ್ಲೋರ್ ಗಳಿವೆ. ವಿಷ್ಣುವರ್ಧನ್ ಅವರಿಗೆ ಹಸಿರು ತುಂಬಿದ ವನದಲ್ಲಿ ಕುಳಿತು ಸಮಯ ಕಳೆಯಲು ತುಂಬಾ ಇಷ್ಟವಾಗಿತ್ತಂತೆ, ಅದೇ ರೀತಿ ಅವರ ಹಳೆಯ ಮನೆಯ ಎದುರಲ್ಲಿ ಸುಂದರ ಗಾರ್ಡನ್ ಇದ್ದು ಜೋಕಾಲಿಗಳಿದ್ದವಂತೆ. ಇದೀಗ ಹೊಸ ಮನೆಯ ಆಕಾರದಲ್ಲಿ ಬದಲಾವಣೆ ಇದ್ದರೂ ಒಂದಿಷ್ಟು ಜಾಗವನ್ನು ಗಿಡಗಳನ್ನು ಬೆಳೆಸಲೆಂದೇ ಮೀಸಲಿಟ್ಟು ಹೂಗಳ, ಬಣ್ಣ ಬಣ್ಣದ ಎಲೆಗಳ ಸಸಿಗಳನ್ನು ಬೆಳೆಸಲಾಗಿದೆಯಂತೆ. ಒಟ್ಟಿನಲ್ಲಿ ವಿಷ್ಣುವರ್ಧನ್ ಅವರ ಸುಂದರ ಮನೆಯ ಕನಸು ನೆರವೇರಿದ್ದು ಅಭಿಮಾನಿಗಳು ಕೂಡ ಹರ್ಷ ವ್ಯಕ್ತಪಡಿಸಿದ್ದಾರಂತೆ.

Leave a Comment

error: Content is protected !!