Vishnu Dada: ಸಿನಿಮಾ ಸೋತಾಗ ವಿಷ್ಣುವರ್ಧನ್ ಅವರು ಏನು ಮಾಡುತ್ತಿದ್ದರಂತೆ ಗೊತ್ತಾ? ಬಯಲಾಯಿತು ನೋಡಿ ವಿಷ್ಣುದಾದಾ ಮತ್ತೊಂದು ಮುಖ.

Dr Vishnuvardhan ನಾಗರಹಾವು ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಆಂಗ್ರಿ ಯಂಗ್ ಮ್ಯಾನ್ ಆಗಿ ಕಾಲಿಟ್ಟವರು ನಮ್ಮೆಲ್ಲರ ಸಂಪತ್ ಕುಮಾರ್(Sampath Kumar) ನಂತರದ ದಿನಗಳಲ್ಲಿ ಜನರ ಪ್ರೀತಿಗೆ ಪಾತ್ರರಾಗಿ ವಿಷ್ಣುವರ್ಧನ್ ಆಗಿ ಬದಲಾಗುತ್ತಾರೆ. ಮೈಸೂರಿನ ಮೂಲದವರಾಗಿದ್ದರು ಕೂಡ ಇಡೀ ಕನ್ನಡ ಕರ್ನಾಟಕವೇ ಇವರನ್ನು ಇಷ್ಟಪಟ್ಟು ಅಭಿನಯ ಭಾರ್ಗವ(Abhinaya Bhargava) ಎನ್ನುವುದಾಗಿ ಕರೆಯುತ್ತಿತ್ತು.

ಅಂದಿನ ಕಾಲದಲ್ಲಿ ಕನ್ನಡ ಚಿತ್ರರಂಗದಿಂದ ಹೊರಗೆ ಹೋಗಿ ಪರಭಾಷೆಗಳಲ್ಲಿ ಕೂಡ ಕನ್ನಡ ಚಿತ್ರರಂಗದ ಬಾವುಟವನ್ನು ಹಾರಿಸಿ ಭಾರತೀಯ ಚಿತ್ರರಂಗದ ಫೀನಿಕ್ಸ್ ಪಕ್ಷಿ ಎನ್ನುವ ಹೆಗ್ಗುರುತನ್ನು ಕೂಡ ಪಡೆದುಕೊಂಡಿದ್ದರು. ಇಂದಿಗೂ ಕೂಡ ಅಭಿನಯ ಭಾರ್ಗವ ವಿಷ್ಣುವರ್ಧನ್(Vishnuvardhan) ಅವರ ಹಲವಾರು ಸಿನಿಮಾಗಳು ಪ್ರೇಕ್ಷಕರಿಗೆ ಬದುಕಿನ ಪಾಠವನ್ನು ಕಲಿಸುವಂತಹ ಕೆಲಸವನ್ನು ಮಾಡುತ್ತಿವೆ. ಅಷ್ಟರಮಟ್ಟಿಗೆ ವಿಷ್ಣುವರ್ಧನ್ ರವರ ನಟನೆ ಹಾಗೂ ಸಿನಿಮಾಗಳು ಪ್ರೇಕ್ಷಕರ ಮೇಲೆ ಪ್ರಭಾವ ಬೀರಿವೆ.

Dr Vishnuvardhan

ಅದಕ್ಕಿಂತ ಪ್ರಮುಖವಾಗಿ ಅವರ ಇದೊಂದು ಗುಣ ಹಲವರಿಗೆ ತಿಳಿಯದೆ ಇರಬಹುದು ಆದರೆ ಇಂದಿನ ಈ ಲೇಖನಿಯಲ್ಲಿ ನಾವು ಅದನ್ನು ತಿಳಿದುಕೊಳ್ಳುವಂತಹ ಎಲ್ಲಾ ಪ್ರಯತ್ನವನ್ನು ಮಾಡೋಣ ಬನ್ನಿ. ಸಿನಿಮಾ ಸೋತಾಗ ತನಗೆ ಏನು ಸಂಬಂಧವೇ ಇಲ್ಲ ಎನ್ನುವ ಹಾಗೆ ಮಾಡುವಂತಹ ನಟರ ನಡುವೆ ಅಂದು ಅಭಿನಯ ಭಾರ್ಗವ ಡಾ ವಿಷ್ಣುವರ್ಧನ್(Dr Vishnuvardhan) ರವರ ವಿಶೇಷವಾಗಿ ಕಾಣಿಸುತ್ತಿದ್ದರು. ಹೀಗೆ ಹೇಳಲು ಒಂದು ವಿಶೇಷ ಕಾರಣವೂ ಕೂಡ ಇದೆ.

ವಿಷ್ಣುವರ್ಧನ್ ನಟನೆಯ ಎಲ್ಲಾ ಸಿನಿಮಾಗಳು ಗೆದ್ದಿವೆ ಎಂದಲ್ಲ. ಸೋತಿರುವ ಕೆಲವು ಸಿನಿಮಾಗಳು ಕೂಡ ಇದ್ದು ಈ ಸಂದರ್ಭದಲ್ಲಿ ಸಂಭಾವನೆಯನ್ನು ನಿರ್ಮಾಪಕರಿಗೆ ವಾಪಸು ಮಾಡಿ ಇನ್ನೂ ನಷ್ಟವಾದರೆ ತಮ್ಮ ಕೈಯಿಂದಾನೆ ವಿಷ್ಣುವರ್ಧನ್ ರವರು ನಿರ್ಮಾಪಕರಿಗೆ ನಷ್ಟವನ್ನು ಭರಿಸುವ ಕೆಲಸವನ್ನು ಮಾಡುತ್ತಿದ್ದರಂತೆ. ಇದಕ್ಕಾಗಿ ಅಂದಿನ ಕಾಲದಲ್ಲಿ ವಿಷ್ಣುವರ್ಧನ್ ರವರನ್ನು ನಿರ್ಮಾಪಕರ ನೆಚ್ಚಿನ ನಟ ಎನ್ನುವುದಾಗಿ ಕರೆಯಲಾಗುತ್ತಿತ್ತು. ವಿಷ್ಣುವರ್ಧನ್(Vishnu Dada) ಅವರ ಈ ದಯಾಳು ಮುಖದ ಪರಿಚಯದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!