Vishnuvardhan: ಲೇಟೆಸ್ಟ್ ಟೆಕ್ನಾಲಜಿಯಲ್ಲಿ ಮೂಡಿಬಂತು ವಿಷ್ಣುದಾದ ಭಾವಚಿತ್ರ. ಫೋಟೋ ನೋಡಿ ಭಾವುಕರಾದ ಅಭಿಮಾನಿಗಳು.

Dr Vishnuvardhan ಅಭಿನಯ ಭಾರ್ಗವ ಸಾಹಸಸಿಂಹ ವಿಷ್ಣುವರ್ಧನ್(Sahahasa Simha Vishnuvardhan) ಅವರ ಅಭಿಮಾನಿ ಯಾರು ತಾನೆ ಇಲ್ಲ ಹೇಳಿ ನೋಡೋಣ. ತಮ್ಮ ಮೇರು ವ್ಯಕ್ತಿತ್ವದ ಮೂಲಕ ಕೇವಲ ಪರದೆಯ ಮೇಲೆ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ಎಲ್ಲರಿಂದ ಗೌರವಕ್ಕೆ ಒಳಗಾಗುವಂತಹ ಬಂಗಾರದ ಮನಸ್ಸಿನ ಮನುಷ್ಯ ಎಂದರೆ ತಪ್ಪಾಗಲ್ಲ. ಆದರೆ ಅಂತಹ ಮೇರು ವ್ಯಕ್ತಿತ್ವವನ್ನು ಹೊಂದಿದ್ದ ನಟ ವಿಷ್ಣುದಾದ(Vishnudada) ಅವರನ್ನು ಆ ದೇವರು ಬೇಗ ಕರೆದುಕೊಂಡುಬಿಟ್ಟ ಎನ್ನುವುದು ನಿಜಕ್ಕೂ ಬೇಸರದ ಸಂಗತಿ.

ತಮ್ಮ ಜೀವಿತಾವಧಿಯಲ್ಲಿ ವಿಷ್ಣುವರ್ಧನ್(Vishnuvardhan) ಅವರವರು ಒಟ್ಟಾರೆಯಾಗಿ ಇನ್ನೂರು ಸಿನಿಮಾಗಳನ್ನು ಮಾಡಿದ್ದು ಅವರ 20ನೇ ಸಿನಿಮಾ ಆಪ್ತರಕ್ಷಕ ಸಿನಿಮಾ ಆಗಿತ್ತು. ಅವರ ಮರಣದ ನಂತರವೂ ಕೂಡ ನಾಗರಹಾವು ಸಿನಿಮಾದ ಮೂಲಕ ತಂತ್ರಜ್ಞಾನವನ್ನು ಬಳಸಿಕೊಂಡು ಮತ್ತೆ ಅವರನ್ನು ಸಿನಿಮಾದಲ್ಲಿ ಪುನರ್ ಸೃಷ್ಟಿಸಲಾಗಿತ್ತು. ಇದು ವಿಷ್ಣು ಅಭಿಮಾನಿಗಳ ಮನಸ್ಸನ್ನು ಗೆಲ್ಲಲು ಯಶಸ್ವಿಯಾಗಿತ್ತು.

ಕೆಲವು ಸಮಯಗಳ ಹಿಂದಷ್ಟೇ ಹೋದರೆ ಇತ್ತೀಚಿಗಷ್ಟೇ ರಾಜ್ಯ ಸರ್ಕಾರ ವಿಷ್ಣುವರ್ಧನ್ ರವರ ಸ್ಮಾರಕವನ್ನು(Vishnuvardhan Smaraka) ಕೂಡ ನಿರ್ಮಿಸಿದ್ದು ವಿಷ್ಣುವರ್ಧನ್ ರವರಿಗೆ ಸಲ್ಲ ಬೇಕಾಗಿರುವಂತಹ ಪ್ರತಿಯೊಂದು ಗೌರವಗಳನ್ನು ಕೂಡ ನೀಡಲು ಯಶಸ್ವಿಯಾಗಿದೆ. ರಾಜ್ಯದ ಮುಖ್ಯಮಂತ್ರಿಗಳಾಗಿರುವ ಬಸವರಾಜ ಬೊಮ್ಮಾಯಿಯವರು ಇತ್ತೀಚಿಗಷ್ಟೇ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲು ಕೂಡ ನಾವು ಪ್ರಯತ್ನವನ್ನು ನಡೆಸುತ್ತಿದ್ದೇವೆ ಎಂದು ಹೇಳುವ ಮೂಲಕ ವಿಷ್ಣು ಅಭಿಮಾನಿಗಳಿಗೆ ಶುಭ ಸುದ್ದಿಯನ್ನು ನೀಡಿದ್ದಾರೆ.

ಇತ್ತೀಚಿಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಎಐ ತಂತ್ರಜ್ಞಾನದ ಮೂಲಕ ವಿಷ್ಣುವರ್ಧನ್(Vishnu) ರವರ ಫೋಟೋವನ್ನು ಎಡಿಟ್ ಮಾಡುವ ಮೂಲಕ ಮಾಡೆಲ್ ಸ್ಟೈಲ್ ನಲ್ಲಿ ಅವರ ಫೋಟೋವನ್ನು ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಡಲಾಗಿದೆ. ಒಂದು ವೇಳೆ ವಿಷ್ಣು ಅವರು ಬದುಕಿದ್ದರೆ ಈಗ ಹೇಗಿರುತ್ತಿದ್ದರು ಎನ್ನುವ ಕಲ್ಪನೆಯಲ್ಲಿ ವಿಷ್ಣು ಅಭಿಮಾನಿಗಳು(Vishnu Fans) ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿ ಭಾವುಕರಾಗಿದ್ದಾರೆ.

Leave a Comment

error: Content is protected !!