ಲಕ್ಷಣ ಧಾರವಾಹಿಯಲ್ಲಿ ಕಪ್ಪಾಗಿರುವ ನಟಿ ನಿಜ ಜೀವನದಲ್ಲಿ ಹೇಗಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ ಫೋಟೋ.
Lakshana Kannada Serial ಲಕ್ಷ್ಮಣ ಧಾರವಾಹಿಯಲ್ಲಿ ತನ್ನ ಮಗಳು ತಪ್ಪಾಗಿರುವ ಹಿನ್ನೆಲೆಯಲ್ಲಿ ತಂದೆ ಯಾವಾಗಲೂ ಕೂಡ ಅವಳನ್ನು ಕಂಡರೆ ದೂರ ಸರಿಯುತ್ತಲೇ ಇರುತ್ತಾನೆ ಹಾಗೂ ಆಗಾಗ ಹೀಯಾಳಿಸಿ ಮಾತನಾಡುತ್ತಲೇ ಇರುತ್ತಾನೆ. ನಾವಿಬ್ಬರು ಗಂಡ ಹೆಂಡತಿ ಬಿಳಿಯಾಗಿದ್ದೇವೆ ಆದರೆ ಮಗಳು ಯಾಕೆ ಕಪ್ಪು ಎಂಬುದಾಗಿ ಹೆಂಡತಿಯನ್ನು ಕೂಡ ಜರೆಯುತ್ತಾನೆ. ಹೌದು ನಾವು ಮಾತನಾಡುತ್ತಿರುವುದು ಕಲರ್ಸ್ ಕನ್ನಡ ವಾಹಿನಿಯ ಟಾಪ್ ಧಾರವಾಹಿಗಳಲ್ಲಿ ಒಂದಾಗಿರುವ ಲಕ್ಷಣ ಧಾರವಾಹಿಯ ಪಾತ್ರಧಾರಿ ಆಗಿರುವ ನಕ್ಷತ್ರ ಅವರ ಬಗ್ಗೆ. ಸೀರಿಯಲ್(Serial) ನಲ್ಲಿ ಕಪ್ಪಾಗಿರುವ ಅವರು ನಿಜ ಜೀವನದಲ್ಲೂ ಕೂಡ ಹಾಗೆ ಇದ್ದಾರೆ ಎನ್ನುವುದು ಹಲವಾರು ಜನರ ಗೊಂದಲವಾಗಿದೆ.
ಮೂಲಗಳ ಪ್ರಕಾರ ನಿಜ ಜೀವನದಲ್ಲಿ ಅವರು ಅಷ್ಟೊಂದು ಕಪ್ಪಾಗಿಲ್ಲ ಕೇವಲ ಪಾತ್ರಕ್ಕಾಗಿ ತಪ್ಪಾಗುವಂತಹ ಮೇಕಪ್ ಹಾಕಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಸದ್ಯಕ್ಕೆ ಕಲರ್ಸ್ ಕನ್ನಡ ವಾಹಿನಿಯ ಅತ್ಯಂತ ಹೆಚ್ಚು ಟಿಆರ್ಪಿ(TRP) ಪಡೆಯುವಂತಹ ಧಾರವಾಹಿಗಳಲ್ಲಿ ಲಕ್ಷಣ ಕೂಡ ಒಂದಾಗಿದೆ. ಈ ಧಾರವಾಹಿಯಲ್ಲಿ ನಕ್ಷತ್ರ ಪಾತ್ರವನ್ನು ನಟಿಸುವ ನಟಿ ವಿಜಯ ಅವರು ಕೇವಲ ಧಾರವಾಹಿಯಲ್ಲಿ ಮಾತ್ರ ಕಪ್ಪಾಗಿ ಕಾಣಿಸಿಕೊಳ್ಳುತ್ತಿದ್ದು ನಿಜ ಜೀವನದಲ್ಲಿ ಅವರು ಚೆನ್ನಾಗಿ ಇದ್ದಾರೆ ಎಂಬುದು ಸತ್ಯವಾದ ಮಾತಾಗಿದೆ.

ನಟಿಸಿರುವ ಮೊದಲ ಧಾರವಾಹಿಯಲ್ಲಿಯೇ ವಿಜಯ ಅವರು ನಕ್ಷತ್ರ ಪಾತ್ರದ ಮೂಲಕ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಸೋಶಿಯಲ್ ಮೀಡಿಯಾದಲ್ಲಿ ಪಡೆದುಕೊಂಡಿದ್ದಾರೆ. ನಟ ಜಗನ್ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಧಾರವಾಹಿ ಕಿರುತೆರೆ ಲೋಕದಲ್ಲಿ ಆರಂಭದಲ್ಲಿಯೇ ಸಂಚಲನವನ್ನು(Sensation) ಸೃಷ್ಟಿಸಿದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದ ಬೇಡಿಕೆಯನ್ನು ಹೊಂದಿರುವ ಕಿರುತೆರೆಯ ಧಾರವಾಹಿಗಳಲ್ಲಿ ಇದು ಕೂಡ ಒಂದಾಗಿದೆ.
ಇನ್ನು ನಟಿ ವಿಜಯ ಅವರ ಕುರಿತಂತೆ ಇನ್ನಷ್ಟು ವಿವರವಾಗಿ ನೋಡುವುದಾದರೆ ಬೆಂಗಳೂರಿನಲ್ಲಿಯ ಜನಿಸಿ ವಿದ್ಯಾಭ್ಯಾಸವನ್ನು ಮುಗಿಸಿ ಉನ್ನತ ಹಂತದ ಶಿಕ್ಷಣವನ್ನು ಕೂಡ ಮುಗಿಸಿ ಮಾಡೆಲಿಂಗ್(Modelling) ಅನ್ನು ತಮ್ಮ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ನಕ್ಷತ್ರ ಧಾರವಾಹಿ ಅವರಿಗೆ ಮೊದಲ ನಟನೆಯ ಧಾರವಾಹಿ ಆಗಿದ್ದರೂ ಕೂಡ ಯಾವ ಅನುಭವಸ್ಥ ನಟಿಗೂ ಕೂಡ ಕಡಿಮೆ ಇಲ್ಲದಂತೆ ನಟಿಸಿರುವ ಅವರ ಅಭಿನಯ ಚಾತುರ್ಯತೆ ತಲೆ ತೂಗದವರೇ ಇಲ್ಲ ಎಂದು ಹೇಳಿದರು ತಪ್ಪಾಗಲಾರದು. ನಕ್ಷತ್ರ ಪಾತ್ರದಲ್ಲಿ ನಟಿಸುತ್ತಿರುವ ನಟಿ ವಿಜಯ ಅವರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.