Kgf Chapter 2: ಕೆಜಿಎಫ್ ಚಿತ್ರವನ್ನು ಹೀನಾಯವಾಗಿ ಟೀಕಿಸಿ ತೆಲುಗಿನ ಖ್ಯಾತ ನಿರ್ದೇಶಕ ಹೇಳಿದ್ದೇನು ಗೊತ್ತಾ?

Yash ಕೇವಲ ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿ ಕೂಡ ಅಸಂಖ್ಯಾತ ದಾಖಲೆಗಳನ್ನು ನಿರ್ಮಿಸಿರುವಂತಹ ಕನ್ನಡದ ಹೆಮ್ಮೆಯ ಕೆ.ಜಿ.ಎಫ್. ಚಾಪ್ಟರ್ 2(KGF Chapter 2) ಚಿತ್ರ ಕೇವಲ ಇಂದು ಮಾತ್ರವಲ್ಲ ಎಂದೆಂದೂ ಕೂಡ ಒಂದು ಅದ್ಭುತ ಮೇಕಿಂಗ್ ಹಾಗೂ ಒಳ್ಳೆಯ ಇಂಟರೆಸ್ಟಿಂಗ್ ಕಥೆಯನ್ನು ಹೊಂದಿರುವಂತಹ ಸಿನಿಮಾಗಳ ಸಾಲಿನಲ್ಲಿ ಕಾಣಿಸಿಕೊಳ್ಳುತ್ತದೆ.

ಇಂತಹ ಸೂಪರ್ ಹಿಟ್ ಸಿನಿಮಾಗಳು ಬಂದಾಗೆಲ್ಲ ಇವುಗಳನ್ನು ಟೀಕೆ ಮಾಡುವಂತಹ ಪ್ರೇಕ್ಷಕ ಅಥವಾ ಕೆಲವೊಂದು ಸೋ ಕಾಲ್ಡ್ ಸೆಲೆಬ್ರಿಟಿಗಳ ಗುಂಪು ಕೂಡ ಸೇರಿಕೊಳ್ಳುತ್ತದೆ. ಇನ್ನು ಇತ್ತೀಚಿಗಷ್ಟೇ ಪ್ರಶಾಂತ್ ನೀಲ್(Prashant Neel) ಹಾಗೂ ರಾಕಿಂಗ್ ಸ್ಟಾರ್ ಯಶ್(Rocking Star Yash) ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವಂತಹ ಕೆಜಿಎಫ್ ಚಾಪ್ಟರ್ 2 ಸಿನಿಮಾವನ್ನು ಯಾವುದೋ ಕಾಂಜಿಪಿಂಜಿ ಪ್ರೇಕ್ಷಕರಲ್ಲ ಬದಲಾಗಿ ತೆಲುಗು ಚಿತ್ರರಂಗದ ಒಬ್ಬ ನಿರ್ದೇಶಕನೇ ಹೀನಾಯವಾಗಿ ಟೀಕೆ ಮಾಡುವ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಾನೆ.

ಕೆಜಿಎಫ್ ಚಾಪ್ಟರ್ 2 ಸಿನಿಮಾವನ್ನು ಟೀಕೆ ಮಾಡುತ್ತಾ ನಿರ್ದೇಶಕ ವೆಂಕಟೇಶ್ ಮಹಾ(Venkatesh Maha) ಕೆಜಿಎಫ್ ಚಿತ್ರದ ಹೆಸರನ್ನು ಹೇಳದೆ ಪರೋಕ್ಷವಾಗಿಯೇ ಮಾತನಾಡುತ್ತಾ ಪ್ರತಿಯೊಬ್ಬರ ತಾಯಿ ಕೂಡ ನಾಲ್ಕು ಜನರಿಗೆ ಅನ್ನ ಹಾಕುವಂತಹ ಕೆಲಸ ಮಾಡು ಎಂಬುದಾಗಿ ಹೇಳುತ್ತಾಳೆ ಆದರೆ ಇಲ್ಲಿ ಜಗತ್ತಿನಲ್ಲಿರುವಂತಹ ಎಲ್ಲಾ ಹಣ ಹಾಗೂ ಚಿನ್ನವನ್ನು ನಿನ್ನದಾಗಿಸಿಕೊಳ್ಳು ಎಂಬುದಾಗಿ ಹೇಳುತ್ತಾಳೆ, ಇದು ಯಾವ ಸೀಮೆಯ ತಾಯಿ ಎಂಬುದಾಗಿ ಟೀಕೆ ಮಾಡಿದ್ದಾನೆ.

ಕೇವಲ ಇಷ್ಟು ಮಾತ್ರವಲ್ಲದೇ ಜನರಿಗೆ ಮನೆಯನ್ನು ಕಟ್ಟಿಸಿ, ನಂತರ ಪ್ರಪಂಚದಲ್ಲಿ ಇರುವಂತಹ ಎಲ್ಲಾ ಚಿನ್ನವನ್ನು ಕೂಡ ಹೋಗಿ ಸಮುದ್ರದಲ್ಲಿ ಬಿಸಾಕಿದ್ದಾನಲ್ಲ ಆತ ಎಂಥ ಕಂತ್ರಿ ನಾಯಿ ಇರಬಹುದೇ ಎಂಬುದಾಗಿ ಯಶ್ ಅವರು ನಿರ್ವಹಿಸಿದ್ದ ರಾಕಿ(Rocky Bhai) ಪಾತ್ರವನ್ನು ನಿರ್ದೇಶಕ ವೆಂಕಟೇಶ್ ಮಹಾ ಟೀಕಿಸಿದ್ದಾನೆ. ಅವರು ಬಳಸಿರುವ ಹೀನಾಯ ಭಾಷೆಯನ್ನು ಟೀಕಿಸಿರುವ ತೆಲುಗು ಪ್ರೇಕ್ಷಕರೇ ಈ ರೀತಿಯಾದಂತಹ ಒಂದು ಸಿನಿಮಾವನ್ನಾದರೂ ಮಾಡು ನಿನ್ನ ಮುಖಕ್ಕೆ ಎನ್ನುವುದಾಗಿ ಟೀಕಿಸಿದ್ದಾರೆ.

Leave A Reply

Your email address will not be published.