ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ನಡುವೆ ಪ್ರೀತಿ (love) ಶುರುವಾಗಿದ್ದು ಹೇಗೆ ಗೊತ್ತಾ?? ಕನ್ನಡಿಯಾದ ಸುಂದರ ನಾಯಿ…!
Vasista and Haripriya Love Story: ಕನ್ನಡ ಚಿತ್ರರಂಗದ ನಟರಾಗಿರುವ ವಸಿಷ್ಠ ಸಿಂಹ (Vasistha Simha) ಮತ್ತು ಹರಿಪ್ರಿಯಾ (Haripriya) ಇಬ್ಬರು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಇವರಿಬ್ಬರೂ ಒಂದಾಗುತ್ತಿದ್ದಾರೆ ಎಂದು ತಿಳಿದ ಬಳಿಕ ಅಭಿಮಾನಿಗಳಿಗೆ ವಸಿಷ್ಟ ಸಿಂಹ ಮತ್ತು ಹರಿಪ್ರಿಯಾ ನಡುವೆ ಪ್ರೀತಿ ಶುರುವಾದದ್ದು ಹೇಗೆ ಎಂಬ ಕುತೂಹಲವು ಮೂಡಿದೆ. ಯಾರು ಯಾರಿಗೆ ಮೊದಲು impress ಮಾಡಿದ್ರು? ಏನೇನ್ gifts ನೀಡಿದ್ದರು? ಅದರಲ್ಲಿ ಹರಿಪ್ರಿಯಾ ಅವರಿಗೆ ಇಷ್ಟವಾದ ಗಿಫ್ಟ್ ಯಾವುದು? ವಸಿಷ್ಠ ಸಿಂಹ ಅವರಿಗೆ ಇಷ್ಟವಾದ ಗಿಫ್ಟ್ ಯಾವುದು? ಅಂತೆಲ್ಲಾ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರಂತೆ.
Yes. ಹರಿಪ್ರಿಯಾ ಅವರು ತಮ್ಮ ಇನ್ಸ್ಟಾಗ್ರಾಮ್(Instagram) ಖಾತೆಯಲ್ಲಿ ಮೂಗುತಿಯನ್ನು ಚುಚ್ಚಿಸಿಕೊಳ್ಳುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದು, ಅವರ ಜೊತೆಯಲ್ಲಿ ಹೆಗಲಾಗಿ ನಿಂತಿದ್ದು, ಕಣ್ಣೀರನ್ನು ಒರೆಸಿದ್ದು, ವಸಿಷ್ಟ ಸಿಂಹ ಎಂದು ಗೊತ್ತಾಗುತ್ತಿದ್ದಂತಲೇ ಹರಿಪ್ರಿಯಾ ಅವರು ವಿವಾಹದ ತಯಾರಿಯಲ್ಲಿಯೇ ಮೂಗುತಿಯನ್ನು ಹಾಕಿಸಿಕೊಂಡಿದ್ದಾರೆ ಎಂದು ಸುದ್ದಿಯಾಗಿತ್ತು. ಇನ್ನು ದುಬೈ(Dubai) ನಲ್ಲಿ ವಸಿಷ್ಟ ಸಿಂಹ ಹಾಗೂ ಹರಿಪ್ರಿಯಾ ಅವರು ಕೈ ಕೈ ಹಿಡಿದು ಓಡಾಡಿರುವ ಫೋಟೋಗಳು ವೈರಲ್ ಆಗುತ್ತಿದ್ದಂತೆ ನಿಶ್ಚಿತಾರ್ಥದ (Engagement) ತಯಾರಿ ಜೋರಾಗಿದೆ ಎಂದು ಎಲ್ಲರಿಗೂ ತಿಳಿಯಿತು.
ಇದೀಗ ಹರಿಪ್ರಿಯಾ ಅವರು ಶೇರ್ ಮಾಡಿರುವ ಎರಡು ಸುಂದರ ನಾಯಿಗಳ ವಿಡಿಯೋ ಇವರಿಬ್ಬರ ಮಧ್ಯೆ ಪ್ರಾರಂಭವಾದ ಪ್ರೀತಿಯ ಕಥೆ (love story) ಯನ್ನು ವಿವರಿಸುತ್ತದೆ. ವಿಡಿಯೋದಲ್ಲಿ ಕಂಡು ಬಂದ ಹಾಗೆ ಒಂದು ವಸಿಷ್ಟ ಸಿಂಹ ಅವರು ಗಿಫ್ಟಾಗಿ ನೀಡಿದ ನಾಯಿ, ಇನ್ನೊಂದು ಹರಿಪ್ರಿಯಾ ಅವರು ಪ್ರೀತಿಯಿಂದ ಸಾಕಿದ ನಾಯಿ; ಇಬ್ಬರ ನಡುವಿನ ಆಟಗಳು ರಂಪಾಟಗಳು ತುಂಟಾಟಗಳನ್ನು ಸೆರೆಹಿಡಿದಿದ್ದು ದೃಶ್ಯಕ್ಕೆ ತಕ್ಕನಾಗಿ ಹರಿಪ್ರಿಯಾ ಅವರು ಕಥೆಯನ್ನು ವಿವರಿಸುತ್ತಾ ಹೋಗಿದ್ದಾರೆ.

‘ಹ್ಯಾಪಿ'(Happy) ಎಂಬುದು ಹರಿಪ್ರಿಯಾ ಅವರ ಮನೆಯಲ್ಲಿಯೇ ಸಾಕಿದ್ದಾಗಿದ್ದು, ‘ಲಕ್ಕಿ’ (Lucky) ಎಂಬುದು ಹರಿಪ್ರಿಯಾ ಮತ್ತು ಅವರ ಸುಂದರ ನಾಯಿ, ಹ್ಯಾಪಿ ಮಿಸ್ ಮಾಡಿಕೊಳ್ಳುತ್ತಿರುವ ನಾಯಿಯಾಗಿದ್ದು, ‘ಕ್ರಿಸ್ಟೆಲ್’ (Crystel) ಎಂಬುದು ವಸಿಷ್ಟ ಸಿಂಹ ಅವರು gift ಮಾಡಿರುವುದು. ಹರಿಪ್ರಿಯಾ ಅವರು “ಕ್ರಿಸ್ಟಲ್ ನನ್ನು ನನಗೆ ನೀಡಿದ್ದು ನನ್ನ ಪ್ರೀತಿಯ ಸಿಂಹ, ಅಂದರೆ ನಿಮ್ಮೆಲ್ಲರ ವಶಿಷ್ಟ ಸಿಂಹ; ರೆಡ್ ಬ್ಯಾಗ್ ನಲ್ಲಿ ಕ್ರಿಸ್ಟಲ್ ಅನ್ನು ತಂದು ನಮಗೆಲ್ಲರಿಗೂ ಸರ್ಪ್ರೈಸ್ ನೀಡಿದ್ದಾರೆ” ಎಂದಿದ್ದಾರೆ.
ಇದನ್ನಾ ಓದಿ : ಡಿ ಬಾಸ್ ದರ್ಶನ್ ಪ್ರತಿದಿನ ಬೆಳಿಗ್ಗೆ ಎದ್ದು ಎಷ್ಟು ಸಿ-ಗರೇಟ್ ಸೇದುತ್ತಾರೆ ಗೊತ್ತಾ?
ಮೊದಮೊದಲು ಕಚ್ಚಾಡುತ್ತಿದ್ದ ಹ್ಯಾಪಿ ಮತ್ತು ಕ್ರಿಸ್ಟಲ್ ದಿನಕಳೆದಂತೆ ಉತ್ತಮ ಸ್ನೇಹಿತರಾಗಿ ಬದಲಾಗಿರುವುದನ್ನು ಹರಿಪ್ರಿಯ ಅವರು ಹೇಳಿದ್ದಾರೆ. ಅಷ್ಟೇ ಅಲ್ಲದೆ ಸೀಕ್ರೆಟ್ ಒಂದನ್ನು ಹಂಚಿಕೊಂಡಿದ್ದಾರೆ. “ಕ್ರಿಸ್ಟಲ್ ಅನ್ನು ಸಿಂಹ ಅವರು ಗಿಫ್ಟ್ ಮಾಡಿದಾಗ ಯಾರಿಗೂ ಗೊತ್ತಿರ್ಲಿಲ್ಲ; ಇವನೊಂದು secret message ತಂದಿದ್ದಾನೆ ಅಂತ…ಅದೇನು ಅಂದ್ರೆ crystel ನ ಹೊಟ್ಟೆ ಮೇಲಿರುವಂತ ಹಾರ್ಟ್ ಶೇಪ್ ಮಾರ್ಕ್ (heart shaped mark)….ಕ್ರಿಸ್ಟೆಲ್ ಬೆಳಿತಾ ಬೆಳಿತಾ ಅವನ ಹೊಟ್ಟೆ ಮೇಲಿರುವ ಹಾರ್ಟ್ ಮಾರ್ಕ್ ಕೂಡ ಬೆಳಿತು; ನಮ್ಮ friendship ಬೆಳಿತು; ನಮ್ಮ ಪ್ರೀತಿ ಕೂಡ ಬೆಳಿತು. ಕ್ರಿಸ್ಟಲ್ ನಮ್ಮ ಪ್ರೀತಿಗೆ ಕನ್ನಡಿ ಹಿಡಿದಿದ್ದಾನೆ” ಎಂದು ಹರಿಪ್ರಿಯಾ ಅವರು ವಶಿಷ್ಠ ಸಿಂಹ ಅವರು ನೀಡಿದ surprise gift ನಿಂದಾಗಿ ಪ್ರೀತಿ ಬೆಳೆದ ಕಥೆಯನ್ನು ಹೇಳಿಕೊಂಡಿದ್ದಾರೆ.