ಮ್ಯಾರೇಜ್ ಯಾವಾಗ ಎಂಬ ಪ್ರಶ್ನೆಗೆ ವಸಿಷ್ಟ ಸಿಂಹ ಕೊಟ್ಟ ಉತ್ತರ ಏನು ನೋಡಿ

Vasishta simha marraige : ನಟ ಸಂಗೀತ ಗಾಯಕ ಎಲ್ಲದಕ್ಕಿಂತ ಹೆಚ್ಚಾಗಿ ಅವರ ವಾಯ್ಸ್ ಗೆ ಎಲ್ಲರೂ ಫಿದಾ ಆಗಿದ್ದಾರೆ. ವಾಯ್ಸ್ ಎಂದಾಕ್ಷಣ ಎಲ್ಲರೂ ಕೂಡ ಇಷ್ಟ ಪಡೋದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು. ಆದರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕೂಡ ಇಷ್ಟ ಪಡೋ ವಾಯ್ಸ್ ಇವರದ್ದು. ಹೌದು ನಾವು ಮಾತನಾಡುತ್ತಿರುವುದು ಬಹುಮುಖ ಪ್ರತಿಭೆ ಆಗಿರುವ ನಟ ವಸಿಷ್ಠ ಸಿಂಹ (vasishta simha) ಅವರ ಕುರಿತಂತೆ. ಇತ್ತೀಚಿಗೆ ಈ ನಟ ಸಾಕಷ್ಟು ಸುದ್ದಿಯಲ್ಲಿದ್ದಾರೆ. ನಾವು ಮಾತನಾಡುತ್ತಿರುವುದು ಅವರ ಸಿನಿಮಾಗಳ ಕುರಿತಂತೆ ಅಲ್ಲ ಬದಲಾಗಿ ಅವರ ವೈಯಕ್ತಿಕ ಜೀವನದ ಕುರಿತಂತೆ.

ಇಷ್ಟೆಲ್ಲ ಹೇಳಿದ್ಮೇಲೆ ಖಂಡಿತವಾಗಿ ನೀವು ಕೂಡ ನಾವು ಯಾವ ವಿಚಾರದ ಬಗ್ಗೆ ಮಾತನಾಡಲು ಹೊರಟಿದ್ದೇವೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಂಡಿರುತ್ತೀರಿ. ಹೌದು ಮಿತ್ರರೇ ನಾವು ಮಾತನಾಡುತ್ತಿರುವುದು ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯ ಅವರ ಕುರಿತಂತೆ.

ಇತ್ತೀಚಿಗಷ್ಟೇ ದುಬೈನಲ್ಲಿ (vasishta simha and haripriya) ಶಾಪಿಂಗ್ ಮಾಡುತ್ತಾ ಕೈ ಕೈ ಹಿಡಿದುಕೊಂಡು ಓಡಾಡುತ್ತಿದ್ದಾಗಲೇ ಎಲ್ಲರಿಗೂ ಇವರಿಬ್ಬರ ಬಗ್ಗೆ ಅನುಮಾನಗಳು ಮೂಡಿಬಂದಿದ್ದವು. ಅಷ್ಟರಲ್ಲಾಗಲೇ ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರು ಅತಿ ಶೀಘ್ರದಲ್ಲಿ ಎಂಗೇಜ್ಮೆಂಟ್ ಮಾಡಿಕೊಳ್ಳಲಿದ್ದಾರೆ ಎಂಬುದಾಗಿ ಕೂಡ ಸುದ್ದಿಗಳು ಹರಿದಾಡ ತೊಡಗಿದವು.

Vasishta simha marriage
Vasishta simha marraige

ಇನ್ನೇನು ಆ ಸುದ್ದಿ ನಿಜವೋ ಅಥವಾ ಸುಳ್ಳು ಎಂಬುದಾಗಿ ಪರಿಶೀಲಿಸಲು ಹೊರಟ ನೆಟ್ಟಿಗರಿಗೆ ಮತ್ತೊಂದು ಆಶ್ಚರ್ಯ ಕಾದಿತ್ತು ಅದೇನೆಂದರೆ ಈ ಸುದ್ದಿ ಹರಡಿದ ಕೆಲವೇ ದಿನಗಳಲ್ಲಿ ಇವರಿಬ್ಬರು ಕುಟುಂಬಸ್ಥರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಹಾಗೂ ಸರಳವಾಗಿ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಕೂಡ ಮುಗಿಸಿಕೊಂಡಿದ್ದರು. ಈಗಾಗಲೇ ಇವರ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿದಿದ್ದು ಅತಿ ಶೀಘ್ರದಲ್ಲೇ ಅಂದರೆ ಮುಂದಿನ ವರ್ಷದ ಆರಂಭಿಕ ಕೆಲವು ತಿಂಗಳುಗಳ ನಡುವಲ್ಲಿಯೇ ಇವರಿಬ್ಬರು ಮದುವೆ ಆಗುವುದು ಕೂಡ ಈಗಾಗಲೇ ಕನ್ಫರ್ಮ್ ಆಗಿದೆ.

ನನ್ನ ಸಿನೆಮಾಗೆ ಯಶ್ ಅವರನ್ನು ಹಾಕಿಕೊಳ್ಳುವುದಿಲ್ಲ ಎಂದು ರಿಜೆಕ್ಟ್ ಮಾಡಿದ್ದು ಯಾಕೆ ಗೊತ್ತಾ?

ಇನ್ನು ಇತ್ತೀಚಿಗಷ್ಟೇ ಮಾಧ್ಯಮ ಪ್ರತಿನಿಧಿಗಳ ಕೈಗೆ ಸಿಕ್ಕಂತಹ ವಸಿಷ್ಟ ಸಿಂಹ ಅವರಿಗೆ ರಿಪೋರ್ಟರ್ ನಿಮ್ಮ ಲವ್ ಮ್ಯಾರೇಜ್ ಕುರಿತಂತೆ ಸ್ವಲ್ಪ ಡೀಟೇಲ್ಸ್ ಕೊಡಿ ಎಂಬುದಾಗಿ ಕೇಳುತ್ತಾರೆ. ಆಗ ವಸಿಷ್ಟ ಸಿಂಹ ಅವರು ನಾವಿಬ್ಬರು ನಿಮ್ಮ ಮುಂದೆ ಅತೀ ಶೀಘ್ರದಲ್ಲೇ ಬರುತ್ತೇವೆ ಹಾಗೂ ಈ ವಿಚಾರದ ಕುರಿತಂತೆ ನಿಮ್ಮೊಂದಿಗೆ ಹಂಚಿಕೊಳ್ಳಲು ನಮಗೂ ಕೂಡ ಆಸಕ್ತಿ ಇದೆ ಎಂಬುದಾಗಿ ಹೇಳುತ್ತಾರೆ.

ಕೂಡಲೇ ಇವರಿಬ್ಬರ ಲವ್ ಸ್ಟೋರಿ ಯ ಕಹಾನಿ ಸಿಗುತ್ತದೆ ಎಂಬುದಾಗಿ ಭಾವಿಸಿದ್ದ ರಿಪೋರ್ಟರ್ ಗೆ ಇಲ್ಲಿ ನಿರಾಸೆ ಆದರೂ ಕೂಡ ಮುಂದಿನ ದಿನಗಳಲ್ಲಿ ಇದು ಖಂಡಿತವಾಗಿ ಸಿಕ್ಕೇ ಸಿಗುತ್ತದೆ ಎಂಬ ಸಂತೃಪ್ತಿಯಿಂದ ಹೋದರು ಎಂಬುದಾಗಿ ಭಾವಿಸಬಹುದು.

Leave a Comment

error: Content is protected !!