Vajramuni: ನೂರಾರು ಸಿನಿಮಾಗಳಲ್ಲಿ ಖಳನಾಯಕನಾಗಿ ಮಿಂಚಿದ್ದ ನಟರಾಕ್ಷಸ ವಜ್ರಮುನಿ ಪಡೆಯುತ್ತಿದ್ದ ಸಂಭಾವನೆ ಕೇಳಿದ್ರೆ ನೀವೂ ಕೂಡ ನಂಬಲ್ಲ.

Vajramuni ನಟ ರಾಕ್ಷಸ ನಟ ಭಯಂಕರ ಎಂಬುದಾಗಿ ಕರೆಯಲ್ಪಡುತ್ತಿದ್ದ ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ದಿವಂಗತ ವಜ್ರಮುನಿ ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇಂದು ಕನ್ನಡ ಚಿತ್ರರಂಗದಲ್ಲಿ ಹಲವಾರು ಪ್ರತಿಭಾನ್ವಿತ ಖಳನಾಯಕರು ಇರಬಹುದು ಆದರೆ ಅಂತಹ ಸ್ಟಾರ್ ಖಳನಾಯಕರು ಕೂಡ ವಜ್ರಮುನಿ(Vajramuni) ಅವರ ಹಾಗೆ ನಟಿಸಬೇಕು ಎನ್ನುವ ಆಸೆಯನ್ನು ಹೊಂದಿದ್ದರು. ಈ ವಿಚಾರದಲ್ಲಿ ಯಾವುದೇ ಅನುಮಾನ ಇಲ್ಲ ಎಂದು ನಿಸ್ಸಂಶಯವಾಗಿ ಹೇಳಬಹುದಾಗಿದೆ.

ಮಾಡರ್ನ್ ಐತಿಹಾಸಿಕ ಪೌರಾಣಿಕ ಯಾವುದೇ ರೀತಿಯ ಪಾತ್ರಗಳಿರಲಿ ವಜ್ರಮುನಿ ಅವರು ನೀರು ಕುಡಿದಷ್ಟೇ ಸುಲಭವಾಗಿ ನಟಿಸಬಲ್ಲ ಚಾತುರ್ಯತೆಯನ್ನು ಹೊಂದಿದ್ದರು. ಕನ್ನಡ ಚಿತ್ರರಂಗದ ಸ್ಟಾರ್ ನಟರಾಗಿರುವ ಅಣ್ಣಾವ್ರು ವಿಷ್ಣು ದಾದಾ ಶಂಕರ್ ನಾಗ್(Shankarnag) ಅನಂತ್ ನಾಗ್ ಹೀಗೆ ಪ್ರತಿಯೊಬ್ಬ ಘನ ಕಲಾವಿದರ ಜೊತೆಗೆ ಅವರನ್ನು ಕೂಡ ಮೀರಿಸುವಂತೆ ನಟಿಸಿದ್ದಾರೆ ನಮ್ಮೆಲ್ಲರ ನೆಚ್ಚಿನ ನಟ ವಜ್ರಮುನಿ ಯವರು.

Vajramuni

ಅವರ ನಟನೆಯನ್ನು ಮೆಚ್ಚಿ ಬೇರೆ ಭಾಷೆಯ ಸಿನಿಮಾ ನಿರ್ಮಾಪಕರು ಹಾಗೂ ನಿರ್ದೇಶಕರು ನಮ್ಮ ಸಿನಿಮಾಗಳಲ್ಲಿ ನಮ್ಮ ಭಾಷೆಯಲ್ಲಿ ಬಂದು ನಟಿಸಿ ಎಂಬುದಾಗಿ ಕೇಳಿದರೂ ಕೂಡ ಕನ್ನಡ ಸಿನಿಮಾ ರಂಗವನ್ನು ಬಿಟ್ಟು ವಜ್ರಮುನಿ ಅವರು ಎಲ್ಲಿಗೂ ಹೋಗಿರಲಿಲ್ಲ. ಇಂತಹ ಕನ್ನಡ ಪ್ರೇಮಿಯನ್ನು ನಿಜಕ್ಕೂ ನಾವು ಪ್ರತಿದಿನ ನೆನೆಸಿಕೊಳ್ಳಬೇಕು. ಇನ್ನು ಅಂದಿನ ಕಾಲದಲ್ಲಿ ಒಂದು ಸಿನಿಮಾಗೆ ವಜ್ರಮುನಿ ಅವರು ಪಡೆಯುತ್ತಿದ್ದ ಸಂಭಾವನೆ ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

70 ಹಾಗೂ 80ರ ದಶಕದಲ್ಲಿ ಕನ್ನಡ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ಖಳನಾಯಕನಾಗಿ ಕಾಣಿಸಿಕೊಂಡಿದ್ದ ವಜ್ರಮುನಿ(Vajramuni) ಅವರು ಒಂದು ಸಿನಿಮಾಗೆ 10,000 ದಿಂದ ಪ್ರಾರಂಭಿಸಿ ಸಂಭಾವನೆಯನ್ನು ಪಡೆಯುತ್ತಿದ್ದರು. ಅಂದಿನ 10000 ಎನ್ನುವುದು ಇಂದಿನ ಹತ್ತರಿಂದ ಹದಿನೈದು ಲಕ್ಷ ರೂಪಾಯಿಗಳಿಗೆ ಸಮ ಎಂದು ಹೇಳಬಹುದಾಗಿದೆ. ಸಂಭಾವನೆಗೂ ಮೀರಿದ ಪರಿಪಕ್ವ ನಟನೆಯನ್ನು ನೀಡಿ ಸಿನಿಮಾದ ಗೆಲುವಿನಲ್ಲಿ ತಾನು ಕೂಡ ಪ್ರಮುಖ ಪಾತ್ರವಾಗಿ ಇರುತ್ತಿದ್ದರು. ನಿಮಗೂ ಕೂಡ ವಜ್ರಮುನಿಯವರು ಇಷ್ಟ ಎಂದರೆ ತಪ್ಪದೇ ಶೇರ್ ಮಾಡಿ.

Leave a Comment

error: Content is protected !!