Kabzaa: ನಾಳೆ ಫಿಲ್ಮ್ ರಿಲೀಸ್ ಇಟ್ಕೊಂಡು ಬೆಳಿಗ್ಗೇನೆ ಉಪೇಂದ್ರ ಹೋಗಿರೋದು ಎಲ್ಲಿದೆ ಗೊತ್ತಾ? ನೀವೇ ನೋಡಿ.

Upendra ಆರ್ ಚಂದ್ರು(R chandru) ಅವರ ನಿರ್ದೇಶನದಲ್ಲಿ ಐ ಲವ್ ಯು ಸಿನಿಮಾದಲ್ಲಿ ಕಾಣಿಸಿಕೊಂಡ ನಂತರ ಕೂಡಲೇ ಉಪೇಂದ್ರ ಅವರು ಕಬ್ಜಾ ಸಿನಿಮಾದಲ್ಲಿ(Kabzaa Film) ಕೂಡ ಈಗಾಗಲೇ ನಾಯಕನಟನಾಗಿ ಕಾಣಿಸಿಕೊಂಡಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಸಿನಿಮಾ ಚಿತ್ರೀಕರಣವನ್ನು ಮುಗಿಸಿ ಹಲವಾರು ವರ್ಷಗಳ ನಂತರ ಈಗ ಅದ್ದೂರಿ ಬಿಡುಗಡೆಗೆ ಸಜ್ಜಾಗಿ ನಿಂತಿದೆ.

ಈ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ(Real Star Upendra) ಅವರ ಜೊತೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಹಾಗೂ ಶಿವಣ್ಣ(Shivanna) ಕೂಡ ಅತಿಥಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ವರ್ಷಗಳಿಂದ ಈ ಸಿನಿಮಾದ ಚಿತ್ರಿಕರಣ ನಡೆಯುತ್ತಿದ್ದು ಕೊನೆಗೂ ಈಗ ನಾಳೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿ ನಿಂತಿದೆ. ನಾಳೆ ಸಿನಿಮಾ ರಿಲೀಸ್ ಇಟ್ಟುಕೊಂಡು ಈಗ ಉಪೇಂದ್ರ ಅವರು ನಿರ್ದೇಶಕ ಚಂದ್ರು ಅವರ ಜೊತೆಗೆ ಹೋಗಿರುವುದು ಎಲ್ಲಿಗೆ ಗೊತ್ತಾ ಬನ್ನಿ ತಿಳಿಯೋಣ.

ಹೌದು ಮಿತ್ರರೇ, ಇಂದು ಬೆಳಗ್ಗೆ ಬೇಗ ನಿರ್ಮಾಪಕ ಕೆಪಿ ಶ್ರೀಕಾಂತ್ ಹಾಗೂ ನಿರ್ದೇಶಕ ಆರ್ ಚಂದ್ರು ಅವರ ಜೊತೆ ರಿಯಲ್ ಸ್ಟಾರ್ ಉಪೇಂದ್ರ ಪ್ರೈವೇಟ್ ಪ್ಲೇನ್ ನಲ್ಲಿ ತಿರುಪತಿ ತಿಮ್ಮಪ್ಪನ(Tirupathi Thimmappa) ದರ್ಶನಕ್ಕೆಂದು ತಿರುಪತಿಗೆ ಹಾರಿದ್ದಾರೆ. ಈ ವಿಡಿಯೋ ಇಂದು ಮುಂಜಾನೆ ಎಲ್ಲಾ ಕಡೆ ವೈರಲ್ ಆಗುತ್ತಿದ್ದು ಎಲ್ಲರೂ ಕೂಡ ತಮ್ಮದೇ ಆದ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಎಲ್ಲರೂ ಕೂಡ ಈ ಸಂದರ್ಭದಲ್ಲಿ ಶಾಲು ಪಂಚೆಯಂತಹ ಸಾಂಸ್ಕೃತಿಕ ಉಡುಪುಗಳನ್ನು ಧರಿಸಿದ್ದು ವಿಶೇಷವಾಗಿತ್ತು.

ಇನ್ನೇನು ನಾಳೆ ಅಂದರೆ ಮಾರ್ಚ್ 17ರಂದು ಪ್ರಪಂಚದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಕಬ್ಜಾ ಸಿನಿಮಾ ಪಂಚಭಾಷೆಗಳಲ್ಲಿ ಬಿಡುಗಡೆ ಕಾಣಲಿದ್ದು ಪ್ರೇಕ್ಷಕರೆಲ್ಲರೂ ಕೂಡ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡಲು ಕಾತರರಾಗಿದ್ದಾರೆ. ಕಬ್ಜಾ(Kabzaa) ಸಿನಿಮಾದ ಬಗ್ಗೆ ನಿಮಗಿರುವ ನಿರೀಕ್ಷೆಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!