ಸೌಂಡ್ ಮಾಡ್ತಿರೋ ಕಬ್ಜಾ ಸಿನಿಮಾದಲ್ಲಿ ನಟಿಸುವುದಕ್ಕೆ ಉಪ್ಪಿ ಹಾಗೂ ಕಿಚ್ಚ ಪಡೆದಿರುವ ಸಂಭವನ ಎಷ್ಟು ಗೊತ್ತಾ?

ನಿನ್ನೆಯಷ್ಟೇ ಬಿಡುಗಡೆಯಾಗಿರುವ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜಾ ಸಿನಿಮಾದ ಟೀಸರ್ ಈಗಾಗಲೇ ಯೂಟ್ಯೂಬ್ ನಲ್ಲಿ ಕೋಟ್ಯಾಂತರ ವೀಕ್ಷಣೆಯನ್ನು ಪಡೆದು ಮುನ್ನುಗ್ತಿದ್ದು ಪರಭಾಷ ಸಿನಿಮಾ ಪ್ರೇಮಿಗಳು ಕೂಡ ಮೆಚ್ಚುವಂತೆ ಮಾಡಿದೆ. ಇದು ನಮ್ಮದೇ ಕನ್ನಡ ಸಿನಿಮಾನ ಅನ್ನೋದಾಗಿ ಕನ್ನಡಿಗರು ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಸ್ವಾತಂತ್ರ್ಯಕ್ಕೂ ಪೂರ್ವ ಭಾಗದಲ್ಲಿ ಕಾಲ್ಪನಿಕವಾಗಿ ನೆಲೆಗೊಂಡ ಕಥೆ ಆಗಿದೆ ಎಂಬುದು ಟೀಸರ್ ಮೂಲಕ ತಿಳಿದು ಬಂದಿದೆ. ಇನ್ನು ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ಗ್ಯಾಂಗ್ಸ್ಟರ್ ಆಗಿ ಕಾಣಿಸಿಕೊಂಡಿದ್ದು, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಭಾರ್ಗವ ಭಕ್ಷಿ ಎನ್ನುವ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇವರಿಬ್ಬರೂ ಮೊದಲ ಬಾರಿಗೆ ಒಟ್ಟಾಗಿ ನಟಿಸುತ್ತಿದ್ದು ಸಿನಿಮಾ ಪ್ರೇಕ್ಷಕರಿಗೆ ಕಣ್ಣಿಗೆ ಹಬ್ಬದಂತಾಗಿದೆ ಎಂದರೆ ತಪ್ಪಾಗಲಾರದು.

ಸಿನಿಮಾದಲ್ಲಿ ನಾಯಕಿಯಾಗಿ ಶ್ರೀಯ ಶರಣ್ ರವರು ಕಾಣಿಸಿಕೊಂಡಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಶಿವಣ್ಣ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ ಗಾಳಿ ಸುದ್ದಿಗಳು ಜೋರಾಗಿ ಹರಿದಾಡುತ್ತಿದ್ದಾವೆ ಆದರೆ ಇದಕ್ಕೆ ನೂರಕ್ಕೆ ನೂರರಷ್ಟು ಸತ್ಯ ಎಂದು ಹೇಳುವ ಯಾವುದೇ ಪುರಾವೆಗಳು ಕೂಡ ದೊರಕಿಲ್ಲ. ಇನ್ನು ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲು ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಎಷ್ಟು ಸಂಭಾವನೆ ಪಡೆದುಕೊಂಡಿದ್ದಾರೆ ಎಂಬ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳಲು ರಿಯಲ್ ಸ್ಟಾರ್ ಉಪೇಂದ್ರ 12 ರಿಂದ 13 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ. ಉಪೇಂದ್ರ ಅವರ ನಂತರ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಿಚ್ಚ ಸುದೀಪ್ ಅವರು ಪ್ರಮುಖ ಪಾತ್ರಕ್ಕಾಗಿ ಎಂಟು ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿರುವ ಸಾಧ್ಯತೆ ಹೆಚ್ಚಾಗಿದೆ. ಯಾಕೆಂದರೆ ಇದು ಅತಿಥಿಪಾತ್ರಕ್ಕಿಂತ ಒಂದು ಕಲಾವಿದನ ಪಾತ್ರವೇ ಆಗಿರುವ ಕಾರಣದಿಂದಾಗಿ ಸ್ಟಾರ್ ಆಗಿರುವ ಕಿಚ್ಚ ಇಷ್ಟು ಪ್ರಮಾಣದಲ್ಲಿ ಹಣ ಪಡೆದುಕೊಂಡಿದ್ದಾರೆ ಎಂಬುದಾಗಿ ಭಾವಿಸಬಹುದು.

Leave a Comment

error: Content is protected !!