ಅಭಿಮಾನಿಯೊಬ್ಬನ ಮುಂದೆ ರಾಕಿಂಗ್ ಸ್ಟಾರ್ ಯಶ್ ಅವರ ಅನಿರೀಕ್ಷಿತ ವರ್ತನೆ ಹೇಗಿತ್ತು ನೋಡಿ ನಿಜಕ್ಕೂ ಶಾಕಿಂಗ್


ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ ಚಿತ್ರಕ್ಕೂ ಮುನ್ನ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತರಾಗಿದ್ದ ಸ್ಟಾರ್ ನಟ ಆಗಿದ್ದರು. ಆದರೆ ಕೆಜಿಎಫ್ ಬಿಡುಗಡೆ ಆದಮೇಲೆ ಅವರ ಜನಪ್ರಿಯತೆ ಹೆಚ್ಚಿದೆ ಇದೀಗ ಯಶ್ ಅವರು ಪ್ಯಾನ್ ಇಂಡಿಯನ್ ನಟನಾಗಿದ್ದಾರೆ. ಯಶ್ ಅವರಿಗೆ ದಕ್ಷಿಣ ಭಾರತದಲ್ಲಿ ಅಷ್ಟೇ ಅಲ್ಲದೆ ಉತ್ತರ ಭಾರತದಲ್ಲಿ ಕೋಟ್ಯಂತರ ಮಂದಿ ಅಭಿಮಾನಿಗಳಿದ್ದಾರೆ. ಇಂತಹ ಯಶಸ್ಸು ಸಿಕ್ಕಿರುವುದು ಯಶ್ ರವರ ಅದೃಷ್ಟವೋ ಅಥವಾ ಅವರ ಪರಿಶ್ರಮವೂ ಗೊತ್ತಿಲ್ಲ.

ಯಶ್ ಅವರ ಕೆಜಿಎಫ್ ಚಾಪ್ಟರ್ ೨ ಇದೀಗ ದೇಶದಾದ್ಯಂತ ಬಿಡುಗಡೆಯಾಗಿದೆ. ದೇಶದೆಲ್ಲೆಡೆ ಕೆಜಿಎಫ್ ಚಾಪ್ಟರ್ ೨ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ಅದೇ ಚಿತ್ರದ ಪ್ರಚಾರಕ್ಕೋಸ್ಕರ ಏಷ್ಯಾ ಅವರು ದೇಶದ ವಿವಿಧ ರಾಜ್ಯಗಳಿಗೆ ಭೇಟಿ ಕೊಡುತ್ತಿದ್ದಾರೆ. ದೆಹಲಿ ಮುಂಬೈ ಹಾಗೂ ತಮಿಳುನಾಡು ಆಂಧ್ರಪ್ರದೇಶ ಕೇರಳ ಹೀಗೆ ಎಲ್ಲಾ ರಾಜ್ಯಗಳಿಗೂ ಹೋಗಿ ಯಶ್ ಅವರ ಕೆಜಿಎಫ್ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ. ಪ್ರಚಾರಗೋಸ್ಕರ ಸಂದರ್ಶನ ಮತ್ತು ಕಾರ್ಯಕ್ರಮದಲ್ಲಿ ಯಶ್ ಅವರು ಬ್ಯುಸಿಯಾಗಿದ್ದಾರೆ.

ಯಶ್ ಅವರು ಕೆಜಿಎಫ್ ಚಿತ್ರದ ಪ್ರಚಾರಕ್ಕೋಸ್ಕರ ಆಂಧ್ರಪ್ರದೇಶಕ್ಕೆ ಹೋದಾಗ ಕಾರ್ಯಕ್ರಮವೊಂದರಲ್ಲಿ ನಡೆದ ಒಂದು ಘಟನೆ ಇದೀಗ ವೈರಲ್ ಆಗುತ್ತಿದೆ. ಆಂಧ್ರಪ್ರದೇಶದಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಯಶ್ ಮತ್ತು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರು ವೇದಿಕೆಯ ಮುಂದಗಡೆ ಮೊದಲನೇ ಸಾಲಿನಲ್ಲಿ ಕುಳಿತುಕೊಂಡಿದ್ದರು. ಯಶ್ ಅವರು ಕಾಲು ಮೇಲೆ ಕಾಲು ಹಾಕಿಕೊಂಡು ಸ್ಟೈಲಾಗಿ ಕುಳಿತಿದ್ದರು ಅದೇ ಸಮಯಕ್ಕೆ ಅಭಿಮಾನಿಯೊಬ್ಬ ಓಡಿ ಬಂದು ಯಶ್ ಅವರ ಕಾಲು ಕೆಳಗೆ ಬಂದು ಕುಳಿತುಕೊಳ್ಳುತ್ತಾನೆ.

ಇಂಥ ಸಮಯದಲ್ಲಿ ಬೇರೇ ನಟರಾಗಿದ್ದರೆ ತಕ್ಷಣವೇ ತನ್ನ ಬಾಡಿಗಾರ್ಡ್ ಕರೆಸಿ ಅಭಿಮಾನಿಯನ್ನು ದೂರಕ್ಕೆ ತಳ್ಳುತ್ತಿದ್ದರು. ಆದರೆ ಯಶ್ ಈ ಕೆಲಸ ಮಾಡಲಿಲ್ಲ ಯಶ್ ಅವರು ಅಭಿಮಾನಿಯ ಜೊತೆ ಅನಿರೀಕ್ಷಿತ ವರ್ತನೆ ತೋರಿರುವುದು ಪ್ರತಿಯೊಬ್ಬರಿಗೂ ಮನಮುಟ್ಟಿದೆ. ಯಶ್ ಅವರು ಕಾಲು ಮೇಲೆ ಕಾಲು ಹಾಕಿಕೊಂಡು ಕುಳಿತಿದ್ದಾಗ ಕಾಲಿನ ಕೆಳಗೆ ಬಂದು ಅಭಿಮಾನಿಯೊಬ್ಬ ಕುಳಿತುಕೊಂಡಾಗ ಯಶ್ ಅವರು ತಕ್ಷಣ ಒಂದು ಕಾಲು ಮೇಲೆ ಹಾಕಿದ್ದ ಇನ್ನೊಂದು ಕಾಲನ್ನು ಕೆಳಗೆ ಇರಿಸುತ್ತಾರೆ.

ಅಭಿಮಾನಿಯ ಮುಂದೆ ಕೂಡ ಕಾಲು ಮೇಲೆ ಕಾಲು ಹಾಕಿ ಕುಳಿತುಕೊಂಡರೆ ಅಭಿಮಾನಿಯ ಗೌರವಕ್ಕೆ ಧಕ್ಕೆ ತರುವಂತಾಗುತ್ತದೆ ಎಂಬ ಕಾರಣದಿಂದಾಗಿ ಅವರು ತಕ್ಷಣ ತಮ್ಮ ಕಾಲನ್ನು ಕೆಳಗಿರಿಸಿ ಸರಿಯಾಗಿ ಕೂತು ಕೊಂಡು ಅಭಿಮಾನಿಗೆ ಗೌರವವನ್ನು ಸಲ್ಲಿಸಿ ದ್ದಾರೆ. ಸಿನಿಮಾ ಹೀರೋಗಳು ನಡೆಯುವಂತಹ ಚಿಕ್ಕಪುಟ್ಟ ಹೆಜ್ಜೆಗಳನ್ನು ಜನರು ಗಮನಿಸುತ್ತಾರೆ. ಇಂಥ ಚಿಕ್ಕಪುಟ್ಟ ಸನ್ನಿವೇಶಗಳಲ್ಲಿ ದೊಡ್ಡತನ ತೋರಿಸುವುದರಿಂದಲೇ ಹೀರೋಗಳು ದೊಡ್ಡ ವ್ಯಕ್ತಿಗಳಾಗೋದು. ಒಟ್ಟಿನಲ್ಲಿ ಯಶ್ ಅವರು ಅಭಿಮಾನಿಗೆ ತೋರಿಸಿರುವ ಈ ಸಣ್ಣ ಗೌರವ ಇದೀಗ ಯಶ್ ಅವರ ಮೇಲಿನ ಅಭಿಮಾನ ಹೆಚ್ಚಿಸಿದೆ.


Leave A Reply

Your email address will not be published.