ನಟಿ ಉಮಾಶ್ರೀ ಅವರ ಬದುಕಿನ ಕಣ್ಣೀರ ಕಹಾನಿಯ ಬಗ್ಗೆ ಎಷ್ಟು ಜನರಿಗೆ ಗೊತ್ತು? ಇಲ್ಲಿದೆ ನೋಡಿ ನೀವು ಕೂಡ ಕಣ್ಣೀರು ಹಾಕ್ತಿರಾ.

ಕನ್ನಡ ಚಿತ್ರರಂಗದ ಖ್ಯಾತ ನಟಿ ಉಮಾಶ್ರೀ (Famous actress Umashree) ಅವರು ಕೇವಲ ಎರಡು ವರ್ಷದವರು ಇರಬೇಕಾದರೆ ಅವರ ತಂದೆ ತಾಯಿ ಇಬ್ಬರು ಕೂಡ ಮರಣ ಹೊಂದುತ್ತಾರೆ. ಆ ಚಿಕ್ಕ ಮಗುವನ್ನೇ ಕರೆದುಕೊಂಡು ಅವರ ದೊಡ್ಡಮ್ಮ ಬೆಂಗಳೂರಿಗೆ(Bangalore) ಬರುತ್ತಾರೆ. ಆ ಸಂದರ್ಭದಲ್ಲಿ ಕಾಲೇಜಿನಲ್ಲಿ ಓದುವಾಗ ಅವರ ಗೆಳತಿಯರಿಗೆ ಎಲ್ಲರಿಗೂ ಕೂಡ ಗೆಳೆಯರಿದ್ದರು ಆದರೆ ಅವರಿಗೆ ಇರಲಿಲ್ಲ ಹೀಗಾಗಿ ಅವರಲ್ಲಿ ಕೂಡ ಬಯಕೆ ಇತ್ತು. ಒಬ್ಬ ಹುಡುಗನ ಜೊತೆಗೆ ಪ್ರೀತಿ ಆರಂಭವಾಗಿ ಇಬ್ಬರೂ ಕೂಡ ಎಲ್ಲೆಂದರಲ್ಲಿ ಸುತ್ತಾಡಲು ಪ್ರಾರಂಭಿಸುತ್ತಾರೆ.

Famous actress Umashree

ಈ ವಿಚಾರ ಉಮಾಶ್ರೀ (Umashree) ಅವರ ದೊಡ್ಡಪ್ಪ ಹಾಗೂ ದೊಡ್ಡಮ್ಮನಿಗೆ ಗೊತ್ತಾಗಿ ಬುದ್ಧಿ ಹೇಳಿದರೂ ಕೂಡ ಕೇಳಿದ ಉಮಾಶ್ರೀ ಅವರೇ ಮನೆಯವರ ಮಾತನ್ನು ಧಿಕ್ಕರಿಸಿ ಅವನನ್ನೇ ಮದುವೆಯಾಗುತ್ತಾರೆ. ಮದುವೆಯಾಗಿ ಗಂಡನ ಮನೆಗೆ ಹೋದರೆ ಆತನಿಗೆ ದುಡಿಮೆ(Earning) ಕೂಡ ಇರುವುದಿಲ್ಲ ಹಾಗೂ ಆತ ಕೆಟ್ಟ ಚಟಗಳಿಗೆ ದಾಸ ಕೂಡ ಆಗಿರುತ್ತಾರೆ. ಉಮಾಶ್ರೀ ಅವರಿಗೆ ಕುಡಿತದ ಚಟದಲ್ಲಿ ಕಿರುಕುಳ ನೀಡಲು ಕೂಡ ಪ್ರಾರಂಭಿಸುತ್ತಾನೆ. ಇದರ ನಡುವೆ ಉಮಾಶ್ರೀ ಅವರು ಒಬ್ಬ ಮಗಳಿಗೆ ಜನ್ಮ ನೀಡುತ್ತಾರೆ.

Actor Umashree
Actor Umashree

ಈ ಸಂದರ್ಭದಲ್ಲಿ ಉಮಾಶ್ರೀ ಅವರಿಗೆ ಕಷ್ಟ ಇನ್ನಷ್ಟು ಹೆಚ್ಚಾಗುತ್ತದೆ. ಒಮ್ಮೆ ಉಮಾಶ್ರೀ ಅವರು ತವರು ಮನೆಗೆ ಹೋಗಿ ಬರುತ್ತೇನೆ ಎಂಬುದಾಗಿ ಹೇಳಿದಾಗ ಗಂಡನ ಮನೆಯವರು ಸಾಕಷ್ಟು ವಿರೋಧ ಮಾಡುತ್ತಾರೆ ಆಗ ವಿರೋಧದ ನಡುವೆಯೂ ಕೂಡ ತಮ್ಮ ತವರು ಮನೆಗೆ ಹೋಗಿ ಬಂದಾಗ ಮತ್ತೆ ಅವರ ಗಂಡನ ಮನೆಯವರು ಮನೆ ಒಳಗೆ ಉಮಾಶ್ರೀ ಅವರನ್ನು ಸೇರಿಸುವುದಿಲ್ಲ. ಆಗ ಉಮಾಶ್ರೀ ಅವರು ಒಂದು ಬಾಡಿಗೆ(Rent) ಮನೆಯನ್ನು ಬಾಡಿಗೆ ಪಡೆದುಕೊಂಡು ತಮ್ಮ ಗಂಡನೊಂದಿಗೆ ಬದುಕಬೇಕಾಗುತ್ತದೆ. ಇದೇ ಸಮಯದಲ್ಲಿ ಉಮಾಶ್ರೀ ಅವರ ಗಂಡ ಇನ್ನೊಂದು ಮದುವೆಯಾಗಿ ಬಂದು ಉಮಾಶ್ರೀ ಅವರನ್ನು ಮನೆಯಿಂದ ಹೊರ ಹಾಕುತ್ತಾರೆ. ಆಗ ಉಮಾಶ್ರೀ ಅವರು ಎರಡು ತಿಂಗಳ ಬಸುರಿಯಾಗಿರುತ್ತಾರೆ(Pregnant).

ಇದನೊಮ್ಮೆ ಓದಿ..ತೆಲುಗು ಚಿತ್ರರಂಗದ ಕರಾಳ ಮುಖವನ್ನು ಬಿಚ್ಚಿಟ್ಟ ಅಪ್ಪು ನಟನೆಯ ರಣವಿಕ್ರಮ ಸಿನಿಮಾದ ನಟಿ ಹೇಳಿದ್ದೇನು?

ಏನು ಮಾಡಲು ತೋಚದೆ ತಮ್ಮ ಹುಟ್ಟೂರಾಗಿರುವ ತುಮಕೂರಿಗೆ ಹೋಗುವ ಉಮಾಶ್ರೀ ಅವರು ಅಲ್ಲಿ ಒಬ್ಬರ ಸಹಾಯದಿಂದ ನಾಟಕವನ್ನು ಕಲಿತು ನಾಟಕ ಮಂಡಳಿಗೆ ಸೇರಿಕೊಳ್ಳುತ್ತಾರೆ. ಬೀದಿ ನಾಟಕಗಳಲ್ಲಿ ತಮ್ಮ ತಂಡದೊಂದಿಗೆ ಸೇರಿ ಜೀವನೋಪಾಯಕ್ಕಾಗಿ ನಾಟಕ(Drama) ಮಾಡಲು ಪ್ರಾರಂಭಿಸುತ್ತಾರೆ ಆ ಸಂದರ್ಭದಲ್ಲಿ ಬಂಗಾರದ ಜಿಂಕೆ ಎನ್ನುವ ಸಿನಿಮಾಗೆ ಉಮಾಶ್ರೀ ಅವರಿಗೆ ಅವಕಾಶ ಹುಡುಕಿಕೊಂಡು ಬರುತ್ತದೆ. ಇದಾದ ನಂತರ ಒಂದೊಂದೇ ಅವಕಾಶಗಳು ಉಮಾಶ್ರೀ ಅವರನ್ನು ಹುಡುಕಿಕೊಂಡು ಬಂದು ಇಂದು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ನಟಿ ಉಮಾಶ್ರೀ ಅವರು. ನೋಡಲು ಅವರು ಸ್ಟಾರ್ ಕಲಾವಿದೆ ಆಗಿರಬಹುದು ಆದರೆ ಇಲ್ಲಿಯವರೆಗೆ ಬರಲು ಅವರು ಪಟ್ಟಂತಹ ಕಷ್ಟ ನಿಜಕ್ಕೂ ಕೂಡ ಪ್ರಶಂಸಾರ್ಹ.

Leave a Comment

error: Content is protected !!