ಖ್ಯಾತ ನಟ ಮಹೇಶ್ ಬಾಬು ಅವರು ವಿಗ್ ಧರಿಸುತ್ತಾರಾ? ಈ ಪ್ರಶ್ನೆಗೆ ಉತ್ತರಿಸಿದ ಮಹೇಶ್ ಅವರ ಪರ್ಸನಲ್ ಮೇಕಪ್ ಮ್ಯಾನ್

ಕೂದಲುಗಳು ಉದುರಿ ಹೋಗಿ ಬೊಕ್ಕು ತಲೆಯಾದಾಗ ಸಾಮಾನ್ಯ ಜನರಿಂದ ಹಿಡಿದು ಸ್ಟಾರ್ ನಟರವರೆಗೂ ವಿಗ್ ಅಥವಾ ಟ್ರಾನ್ಸ್ ಫ್ಲೆಂಟೆಶನ್ ಟೆಕ್ನಾಲಜಿಯ ಮೊರೆ ಹೋಗಿ ತಲೆಯ ಮೇಲೆ ದಟ್ಟವಾಗಿ, ಹೇರಳವಾಗಿ, ಕೂದಲುಗಳು ಕಾಣುವಂತೆ ಮಾಡಿಸಿಕೊಳ್ಳುತ್ತಾರೆ. ಇದೀಗ ಮಹೇಶ್ ಬಾಬು ಅವರ ಅಭಿಮಾನಿಗಳಲ್ಲಿ ಅವರು ವಿಗ್ ಧರಿಸುತ್ತಾರಾ? ಎಂಬ ಸಂದೇಹ ಮೂಡಿ, ಚರ್ಚೆ ಮಾಡುತ್ತಿದ್ದಾರೆ.

40ರ ಆಸುಪಾಸಿನ ವಯಸ್ಸಾದರೂ ಹ್ಯಾಂಡ್ಸಮ್, ಯಂಗ್ ಅಂಡ್ ಎನರ್ಜಿಟಿಕ್ ಆಗಿ ಮಿಂಚುವ ಮಹೇಶ್ ಬಾಬು ಅವರು ಟಾಲಿವುಡ್ ನ ಪ್ರಿನ್ಸ್ ಎಂದೆ ಕರೆಸಿಕೊಳ್ಳುತ್ತಾರೆ. ತೆಲುಗು ಚಿತ್ರರಂಗದಿಂದ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಸ್ಟಾರ್ ನಟ ಕೃಷ್ಣ ಅವರ ಮಗನಾದ ಮಹೇಶ್ ಬಾಬು ಅವರಿಗೂ, ಅವರ ತಂದೆಯಂತೆಯೇ ತಲೆಯ ಮೇಲೆ ಕೂದಲು ಉದುರಿವೆಯೇ? ವಿಗ್ ಧರಿಸುತ್ತಾರೆಯೇ? ಎಂಬುದು ಪ್ರಶ್ನೆಯಾಗಿದೆ.

Tollywood super star actor mahesh babu wears hear wig

ಚಬ್ರೋಲು ಮಾಧವ್ ರಾವ್ ಅವರು ಕೃಷ್ಣ ಅವರ ಹಲವಾರು ಸಿನಿಮಾಗಳಿಗೆ ಮೇಕಪ್ ಆರ್ಟಿಸ್ಟ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ‘ಕೃಷ್ಣ ಅವರು ಆರಂಭದಲ್ಲಿ ತಮ್ಮ ಒರಿಜಿನಲ್ ಕೂದಲಿನಲ್ಲೇ ಬೇರೆ ಬೇರೆ ಸ್ಟೈಲ್ ಮಾಡಿಕೊಂಡು ಚಿತ್ರಗಳಲ್ಲಿ ನಟಿಸುತ್ತಿದ್ದರು. ಕೆಲವೊಮ್ಮೆ ವಿಗ್ ಧರಿಸಿದ ಕಾರಣ ಕೂದಲು ಉದುರಲು ಪ್ರಾರಂಭವಾಯಿತು. ತೆಳ್ಳಗಾದ ಕೂದಲಿನ ಪರಿಣಾಮ ಬೇರೆ ದಾರಿ ಇಲ್ಲದೆ ವಿಗ್ ಧರಿಸಲು ಆರಂಭಿಸಿದರು’ ಎಂದು ಮಾಧವ ರಾವ್ ಹೇಳಿದ್ದಾರೆ.

ಮಹೇಶ್ ಬಾಬು ಅವರು ವಿಗ್ ಧರಿಸುತ್ತಾರೆ ಎಂದರೆ ಅಭಿಮಾನಿಗಳು ಒಪ್ಪುವುದಿಲ್ಲ. ಅವರು ಟ್ರಾನ್ಸ್ ಫ್ಲಾಂಟೇಶನ್ ಟೆಕ್ನಾಲಜಿಯ ಮೂಲಕ ತಲೆಯ ಮೇಲೆ ಕೂದಲುಗಳನ್ನು ಪಡೆದಿದ್ದಾರೆ. ಅದಕ್ಕಾಗಿ ಅವು ಮಹೇಶ್ ಅವರ ಒರಿಜಿನಲ್ ಕೂದಲಂತೆಯೇ ಕಾಣಿಸುತ್ತದೆ. ಆದರೆ ಅವರು ವಿಗ್ ಧರಿಸುವುದಿಲ್ಲ ಎಂಬುದು ಅಭಿಮಾನಿಗಳ ವಾದ. ಇವರ ಪರ್ಸನಲ್ ಮೇಕಪ್ ಮ್ಯಾನ್ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ..

‘ಮಹೇಶ್ ಬಾಬು ಅವರ ಬಾಲ್ಯದ ಚಿತ್ರಗಳಿಗೆ ನಾನು ಮೇಕಪ್ ಹಾಕ್ತಿದ್ದೆ. ನಂತರ ನನ್ನ ಸೋದರಳಿಯ ಪಟ್ಟಾಭಿ, ಮಹೇಶ್ ಅವರಿಗೆ ಮೇಕಪ್ ಹಾಕಲು ಆರಂಭಿಸಿದ. ಮೊದಮೊದಲು ಮಹೇಶ್ ಅವರು ವಿಗ್ ಧರಿಸುತ್ತಿರಲಿಲ್ಲ. ಆದರೆ ತೆಳ್ಳಗಾದ ಕೂದಲಿನ ಪರಿಣಾಮ ಕೆಲವೊಂದು ಚಿತ್ರಗಳಿಗೆ ಅವರು ವಿಗ್ ಕೂಡ ಬಳಸಿದ್ದರು’ ಎಂದು ಮಾಧವರಾವ್ ತಿಳಿಸಿದ್ದಾರೆ. ಸದ್ಯ ತಂದೆಯ ನಿಧನದಿಂದ ನೋವಿನಲ್ಲಿರುವ ಮಹೇಶ್ ಬಾಬು ಅವರು ಶ್ರೀನಿವಾಸ್ ನಿರ್ದೇಶನದ ತ್ರಿವಿಕ್ರಮ ಸಿನಿಮಾದ ಚಿತ್ರೀಕರಣವನ್ನು ಮುಂದೂಡಿದ್ದಾರೆ. ಈ ಚಿತ್ರವು ಮುಂಬರುವ ಬೇಸಿಗೆಯಲ್ಲಿ ತೆರೆ ಕಾಣುವ ಪ್ರಯತ್ನವನ್ನು ಮಾಡಿಕೊಳ್ಳಲಾಗಿದೆಯಂತೆ. ಅಲ್ಲದೆ ಮಹೇಶ್ ಬಾಬು ಅವರು ರಾಜ ಮೌಳಿಯವರೊಂದಿಗೆ ಕೈಜೋಡಿಸಿ ಮುಂದಿನ ಚಿತ್ರದಲ್ಲಿ ನಟಿಸಲು ಒಪ್ಪಿದ್ದಾರೆ ಎಂಬ ಸುದ್ದಿಯು ಕೂಡ ಹರಿದಾಡುತ್ತಿದೆ.

South indian super star mahesh babu waers hear wig?
South indian super star mahesh babu hear wig

Leave a Comment

error: Content is protected !!