ತಾತನಾಗೋ ಟೈಮ್ ಅಲ್ಲಿ ತಂದೆಯಾದ ತೆಲುಗಿನ ಕೋಟಿ ನಿರ್ಮಾಪಕ ದಿಲ್ ರಾಜು!


ತೆಲಗು ಸಿನಿಮಾ ನಿರ್ಮಾಪಕ ದಿಲ್ ರಾಜು ಸಿನಿಮಾ ನಿರ್ಮಾಣದ ವಿಷಯದಲ್ಲಿ ತುಂಬಾನೇ ಫೇಮಸ್. ಇದುವರೆಗೆ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಯಶಸ್ವಿ ಪ್ರೋಡ್ಯೂಸರ್ ದಿಲ್ ರಾಜು. ಟಾಲಿವುಡ್ ನ ಸ್ಟಾರ್ ನಿರ್ಮಾಪಕ ದಿಲ್ ರಾಜು ಅವರು. ಇದುವರೆಗೆ ಐವತ್ತಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡಿದ ಖ್ಯಾತಿ ಅವರದ್ದು. ಇಡೀಗ ದಿಲ್ ರಜು ಅವರ ಕುಟುಂಬದ ಸಂಭ್ರಮ ದುಪ್ಪಟ್ಟಾಗಿದೆ. ಯಾಕೆ ಗೊತ್ತಾ?

ನಿರ್ಮಾಪಕ ದಿಲ್ ರಾಜು ಒಂದಿಲ್ಲೊಂದು ಸಿನಿಮಾ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರ ಜೀವನದಲ್ಲಿ ಅತ್ಯಂತ ಖುಷಿಯ ಘಳಿಗೆ ಈಗ ಬಂದಿದೆ. ನಿರ್ಮಾಪಕ ದಿಲ್ ರಾಜು ತಂದೆಯಾಗಿದ್ದಾರೆ. 51 ವರ್ಷದ ದಿಲ್ ರಾಜು ಅವರ ಎರಡನೆಯ ಪತ್ನಿ ಮೇಘಾ ರೆಡ್ಡಿ ಅಲಿಯಾಸ್ ತೇಜಸ್ವಿನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೈದ್ರಾಬಾದ್ ಆಸ್ವತ್ರೆಯಲ್ಲಿ ಗಂಡುಮಗುವಿಗೆ ತೇಜಸ್ವಿನಿ ಜನ್ಮ ನೀಡಿದ್ದು, ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿ ಇರುವುದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಟಾಲಿವುಡ್ ಮಂದಿ ಹಾಗೂ ದಿಲ್ ರಾಜು ಅವರ ಸ್ನೇಹಿತರು, ಬಂಧುಗಳು ಅವರೌ ತಂದೆಯಾಗಿರುವ ವಿಶಹ್ಯ ತಿಳಿದು ಶುಭ ಹಾರೈಸಿದ್ದಾರೆ. ಸದ್ಯ ದುಬೈನಲ್ಲಿರುವ ದಿಲ್ ರಾಜು ಮಗುವನ್ನು ನೋಡಲು ಹೈದ್ರಾಬಾದ್ ಗೆ ವಾವಸ್ ಆಗಿದ್ದಾರೆ.

ದಿಲ್ ರಾಜು ಎರಡನೇ ಮದುವೆ:
ದಿಲ್ ರಾಜು ಅವರು ಅನಿತಾ ಅವರನ್ನು ವಿವಾಹವಾಗಿದ್ದರು. ಈ ದಂಪತಿಗಳ ಮಗಳು ಹರ್ಷಿಕಾ ರೆಡ್ಡಿ. 2017ರಲ್ಲಿ ಅನಾರೋಗ್ಯದಿಂದ ಅನಿತಾ ಕೊನೆಯುಸಿರೆಳೆದರು. ಹರ್ಷಿಕಾ ರೆಡ್ದಿಯವರ ಮದುವೆಯನ್ನು ಅದ್ದೂರಿಯಾಗಿ ನಿರ್ಮಾಪಕ ದಿಲ್ ರಾಜು ನೆರವೇರಿಸಿದ್ದರು. ಮಗಳು ಹರ್ಷಿಕಾ ರೆಡ್ದಿ ತಂದೆಗೆ ಒತ್ತಾಯ ಮಾಡಿ 2020ರಲ್ಲಿ ಇನ್ನೊಂದು ಮದುವೆ ಮಾಡಿಸಿದ್ದರು. ಗಾಗನ ಸಖಿಯಾಗಿದ್ದ ತೇಜಸ್ವಿನಿ ಜೊತೆ ದಿಲ್ ರಾಜು ತಮ್ಮ 49ನೇ ವರ್ಷದಲ್ಲಿ ವಿವಾಹವಾಗಿದ್ದರು. ಇದೀಗ ತಮ್ಮ 51ನೇ ವರ್ಷಕ್ಕೆ ಇನ್ನೊಂದು ಮಗುವಿನ ತಂದೆಯಾಗಿ ಭಡ್ತಿ ಪಡೆದಿದ್ಡಾರೆ ದಿಲ್ ರಾಜು.

ದಿನ್ ರಾಜು ಅವರು ಒಬ್ಬ ಯಶಸ್ವಿ ನಿರ್ಮಾಪಕ. ತೆಲುಗು ಚಿತ್ರೋದ್ಯಮಕ್ಕೆ ಅವರ ಕೊಡುಗೆ ಅಪಾರ. ‘ದಿಲ್’ ರಾಜು ಅವರು ತಮ್ಮದೇ ಆದ ಶ್ರೀವೆಂಕಟೇಶ್ವರ ಕ್ರಿಯೇಷನ್ಸ್ ಲಾಂಛನದ ಮೂಲಕ ಸಿನಿಮಾ ನಿರ್ಮಾಣ ಮಾಡುತ್ತಾರೆ. 2003ರಲ್ಲಿ ತೆರೆಕಂಡ ‘ದಿಲ್’ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡ ನಿರ್ಮಾಪಕ ದಿಲ್ ರಾಜು ಆಗಿ ಫೇಮಸ್ ಆದರು. ಈ ಸಿನಿಮಾ ಯಶಸ್ಸಿನ ಬಳಿಕ ತೆಲಗುವಿನಲ್ಲಿ ದಿಲ್ ರಾಜು ನಿರ್ಮಾಣದ ಇತರ ಸಿನಿಮಾಗಳು ಯಾವವೇಂದರೆ, ಆರ್ಯ, ಸೀತಮ್ಮ, ಚೆಟ್ಟು ಬೊಮ್ಮರಿಲ್ಲು, ಮಿಸ್ಟರ್ ಪರ್ಫೆಕ್ಟ್, ವಕೀಲ್ ಸಾಬ್ ವಾಕಿಟ್ಲೋ ಸಿರಿಮಲ್ಲೆ, ಭದ್ರ, ಯೆವಡು, ಎಫ್‌ 2 ಮತ್ತು ಎಫ್‌ 3 ಮೊದಲಾದವು.

ಇನ್ನು ತೆಲಗುವಿನಲ್ಲಿ ಹೆಸರು ಮಾಡಿರುವ ನಿರ್ದೇಶಕರಾದ ಸುಕುಮಾರ್, ವಂಶಿ ಪೈಡಿಪಲ್ಲಿ ‘ಬೊಮ್ಮರಿಲ್ಲು’ ಭಾಸ್ಕರ್, ಬೋಯಪಟಿ ಶ್ರೀನು, ಶ್ರೀಕಾಂತ್ ಅಡ್ಡಾಲ ಮೊದಲಾದ ನಿರ್ದೇಶಕರ ಮೊದಲ ಚಿತ್ರಕ್ಕೆ ಹಣ ಹಾಕಿ ಅವರ ಗೆಲುವಿಗೂ ಕಾರಣರಾದ ನಿರ್ಮಾಪಕ ದಿಲ್ ರಾಜು! ಇನ್ನು ಬಾಲಿವುಡ್ ನಲ್ಲಿಯೂ ಸಿನಿಮಾ ನಿರ್ಮಾಣದಲ್ಲಿ ತೊಡಗಿರುವ ದಿಲ್ ರಾಜು ಕನ್ನಡ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾವನ್ನ ನಿರ್ಮಾಣ ಮಾಡಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.


Leave A Reply

Your email address will not be published.