ಸಿನಿಮಾ ರಂಗದಲ್ಲಿ ನಟ- ನಟಿಯರು ತೆರೆಯ ಮೇಲೆ ಕಾಣಿಸಿಕೊಂಡು, ಅಭಿಮಾನಿ ಬಳಗ ಹೆಚ್ಚಿಸಿಕೊಂಡು ಹೆಚ್ಚೆಚ್ಚು ಸಂಭಾವನೆ ಪಡೆಯುವ ವಿಷಯ ನಿಮಗೆಲ್ಲಾ ಗೊತ್ತೆ ಇದೆ. ಇನ್ನು ಕಿರುತೆರೆಯ ನಾಯಕ-ನಾಯಕಿಯರು ಇವರಿಗೆ ಸರಿಸಮನಾಗಿ ಬೆಳೆಯುತ್ತಿರುವುದು ಅಚ್ಚರಿಯೇನಲ್ಲ. ನಿರೂಪಕ – ನಿರೂಪಕಿಯರಿಗೂ ಇದು ಉತ್ತುಂಗದ ಕಾಲವೆನ್ನಬಹುದು. ಎಲ್ಲಾ ಭಾಷೆಗಳಲ್ಲೂ ಸಿನಿಮಾ ಕಾರ್ಯಕ್ರಮಗಳಿಗೆ, ಟಿವಿ ಶೋಗಳಿಗೆ ಅದರದೆ ಆದ ಜನಪ್ರಿಯತೆ ಇದೆ.

ತೆಲುಗಿನ ಈ ಖ್ಯಾತ ನಿರೂಪಕಿ, ದಿನವಿಡಿ ಬಿಡುವಿಲ್ಲದೆ ಬೇರೆ ಬೇರೆ ಚಾನಲ್ ಗಳ ವಿಭಿನ್ನ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಪ್ರೇಕ್ಷಕರ ಪ್ರೀತಿ ಗಳಿಸಿದ್ದಾರೆ. ಕೆಲವು ಶೋಗಳನ್ನು ಒಂದು ಎಪಿಸೋಡ್ ಮಿಸ್ ಮಾಡದೆ ಪ್ರೇಕ್ಷಕರು ನೋಡುತ್ತಿದ್ದಾರೆ ಎಂದರೆ ಈ ನಿರೂಪಕಿಯ ನಿರೂಪಣೆಯೂ ಕಾರಣ ಹೌದು.

ಈ ಟಿವಿಯಲ್ಲಿ 12 ವರ್ಷಗಳಿಂದ ನಿರಂತರವಾಗಿ ಟಿ.ಆರ್.ಪಿ ರೇಟ್ ಅನ್ನು ಟಾಪ್ ನಲ್ಲಿ ಇರಿಸಿಕೊಂಡಿರುವ ಶೋಗಳಲ್ಲಿ ಕ್ಯಾಶ್ ಕೂಡಾ ಒಂದು. ಅಷ್ಟು ವರ್ಷಗಳಿಂದ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಲು ಶೋನ ನಿರೂಪಣೆಯೆ ಕಾರಣ. ಈ ಶೋನ ನಿರೂಪಕಿ ಬೇರೆ ಯಾರೂ ಅಲ್ಲ; ನಿಮ್ಮ ನೆಚ್ಚಿನ ಸುಮಾ. ಹೊಸ ಹೊಸ ಆಟದ ಮೂಲಕ ಸೆಲೆಬ್ರಿಟಿಗಳ ರಂಜನೆಯೊಂದಿಗೆ ವೀಕ್ಷಕರ ಮನಗೆದ್ದ ಸುಮಾ, ದಿನವಿಡೀ ಕೆಲಸದಲ್ಲಿ ನಿರತರಾಗಿದ್ದಾರೆ.

ಯಾರ ಮನಸಿಗು ಘಾಸಿಯಾಗದಂತೆ ಇವರಾಡುವ ಮಾತುಗಳಿಂದ ಸೆಲೆಬ್ರಿಟಿಗಳಷ್ಟೆ ಅಲ್ಲ ವೀಕ್ಷಕರು ಸಂತಷಗೊಂಡಿದ್ದಾರಂತೆ. ಇವರ ಸ್ಟಾಪ್ ಗಳೂ ಇವರ ಕೆಲಸಕ್ಕೆ ಸೈ ಅಂತಿದ್ದಾರೆ. ಹೀಗಿರುವಾಗ ನಿರೂಪಕಿ ಹೆಚ್ಚು ಸಂಭಾವನೆ ಪಡೆಯುವುದರಲ್ಲಿ ತಪ್ಪೇನಿಲ್ಲ ಬಿಡಿ. ಹೌದು ಮೊದಲು ಒಂದು ಎಪಿಸೋಡ್ ಗೆ ಒಂದರಿಂದ ಎರಡು ಲಕ್ಷ ತೆಗೆದುಕೊಳ್ಳುತ್ತಿದ್ದ ಸುಮ ಇಗ ಅಷ್ಟು ಹಣಗಳನ್ನು ಸ್ಟಾಪ್ ಗಳಿಗೆ ಕೊಡುತ್ತಾರಂತೆ. ಕ್ಯಾಶ್ ಶೋಗಾಗಿ ಇವರು ಪಡೆಯುವ ಸಂಭಾವನೆ ಐದರಿಂದ ಹತ್ತು ಲಕ್ಷ. ಇಷ್ಟು ಹಣ ಪಡೆದರೂ ಅದಕ್ಕೆ ತಕ್ಕಂತೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವ ಇವರ ಬಗ್ಗೆ ಹರ್ಷದ ಮಾತುಗಳು ಕೇಳಿಬರುತ್ತಿರುವೆ.

By admin

Leave a Reply

Your email address will not be published.