ನಟನೆಯನ್ನು ತೊರೆದು ಆಸ್ಪತ್ರೆಯನ್ನು ನಿರ್ಮಿಸಿ ಜನರ ಸೇವೆಯಿಂದಲೇ ಜೀವನ ಕಟ್ಟಿಕೊಳ್ಳಲು ಹೊರಟ ಸಾಯಿ ಪಲ್ಲವಿ

ದಕ್ಷಿಣ ಭಾರತದ ನೈಜ ಸುಂದರಿ ಎಂದೇ ಕರೆಸಿಕೊಳ್ಳುವ ಸಾಯಿ ಪಲ್ಲವಿ ಅವರು 2015ರಲ್ಲಿ ಪ್ರೇಮಾಂ ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟರು ನೃತ್ಯ ಹಾಗೂ ಅಭಿನಯದ ಮೂಲಕ ಜನಮನ ಗೆದ್ದ ಸಾಯಿ ಪಲ್ಲವಿ ಅವರು ಕಲಿ, ಫಿದಾ, ಮಿಡಲ್ ಕ್ಲಾಸ್ ಅಬ್ಬಾಯಿ, ಮಾರಿ 2, ದಿಯಾ, ಗಾರ್ಗಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದು ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳ ಚಿತ್ರಗಳಲ್ಲಿ ಕಾಣಿಸಿಕೊಂಡ ಇವರು ಬಹುಭಾಷಾ ನಟಿ ಎನಿಸಿಕೊಂಡಿದ್ದಾರೆ.

Telugu actress sai pallavi quit acting to built hospital and to help people

ಯುನೈಟೆಡ್ ಸ್ಟೇಟ್ ಆಫ್ ಅಮೆರಿಕಾದ ಜಾರ್ಜಿಯದಿಂದ ಎಂಬಿಬಿಎಸ್ ಪದವಿಯನ್ನು ಪಡೆದುಕೊಂಡ ಸಾಯಿ ಪಲ್ಲವಿ ಯವರು ತಮ್ಮ ಹುಟ್ಟೂರಾದ ಕೊಯಂಬತ್ತೂರಿನಲ್ಲಿ ತಮ್ಮದೇ ಸ್ವಂತ ಆಸ್ಪತ್ರೆಯೊಂದನ್ನು ನಿರ್ಮಿಸಲಿದ್ದಾರಂತೆ. ಇನ್ನು ಆಸ್ಪತ್ರೆಯ ನಿರ್ವಹಣೆಯನ್ನು ಸಾಯಿ ಪಲ್ಲವಿ ಅವರ ತಂಗಿ, ಪೂಜಾ ನೋಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

Telugu actress sai pallavi quit acting to built hospital and to help people
Telugu actress sai pallavi quit acting to built hospital and to help people

ಸಂದರ್ಶನ ಒಂದರಲ್ಲಿ ಸಾಯಿ ಪಲ್ಲವಿ ಅವರಿಗೆ ನಿರೂಪಕರು ‘ನಿಮಗೆ ನೃತ್ಯ ಅಥವಾ ಅಭಿನಯ ಎರಡರಲ್ಲಿ ಒಂದನ್ನು ಆಯ್ಕೆ ಮಾಡುವಂತಹ ಸಂದರ್ಭ ಬಂದರೆ ಯಾವುದನ್ನು ಆಯ್ದುಕೊಳ್ಳುತ್ತೀರಿ?’ ಎಂದು ಪ್ರಶ್ನೆ ಮಾಡಿದ್ದರು. ಆಗ ಸಾಯಿ ಪಲ್ಲವಿಯವರು ‘ನೃತ್ಯ ಹಾಗೂ ಅಭಿನಯ ಎರಡು ನನಗೆ ತುಂಬಾ ಇಷ್ಟ. ಎರಡನ್ನು ಬಿಟ್ಟಿರಲು ನನಗೆ ಸಾಧ್ಯವಿಲ್ಲ’ ಎಂದು ಉತ್ತರಿಸಿದ್ದರು. ಅವರು ಮಾತನಾಡುವಾಗ ತೋರಿದ ಉತ್ಸಾಹವೇ ಹೇಳುವಂತೆ , ಸಾಯಿ ಪಲ್ಲವಿಯವರು ಸದ್ಯ ನಟನೆಯನ್ನು ತೊರೆಯುವುದಿಲ್ಲ ಎಂದನಿಸುತ್ತದೆ.

ಇದೀಗ ಆಸ್ಪತ್ರೆಯನ್ನು ನಿರ್ಮಿಸಲಿದ್ದಾರೆ ಎಂಬ ಸುದ್ದಿಯು ಹರಡುತ್ತಿದ್ದಂತೆ ಅಭಿಮಾನಿಗಳು ‘ಸಾಯಿ ಪಲ್ಲವಿಯವರು ನಟನೆಯನ್ನು ಬಿಟ್ಟುಬಿಡುತ್ತಾರೆಯೇ?’ ಎಂದು ಪ್ರಶ್ನಿಸುತ್ತಿದ್ದಾರೆ. ಸಾಯಿ ಪಲ್ಲವಿ ಅವರು ರೋಗಿಗಳ ಸೇವೆಗಾಗಿ ಆಸ್ಪತ್ರೆಯನ್ನು ಕಟ್ಟಿಸುವಲ್ಲಿ ಗಮನಹರಿಸುತ್ತಿದ್ದು, ಗಾರ್ಗಿಯ ನಂತರ ಬಂದ ಆಫರ್ಸ್ ಗಳನ್ನು ರಿಜೆಕ್ಟ್ ಮಾಡಿದ್ದಾರೆ ಎಂಬ ಸುದ್ದಿಯು ತಿಳಿಯುತ್ತಿದ್ದಂತೆ, ಕೆಲವರು ‘ಸಾಯಿ ಪಲ್ಲವಿ ಅವರು ಚಿತ್ರರಂಗವನ್ನು ತೊರೆದು ಆಸ್ಪತ್ರೆಯ ನಿರ್ವಹಣೆಯನ್ನು ಮಾಡಲಿದ್ದಾರೆ’ ಎನ್ನುತ್ತಿದ್ದರೆ, ಇನ್ನೂ ಕೆಲವರು ‘ಕೊಂಚ ದಿನಗಳವರೆಗೆ ಚಿತ್ರರಂಗದಲ್ಲಿ ಬ್ರೇಕ್ ತೆಗೆದುಕೊಂಡು ಆಸ್ಪತ್ರೆಯ ಕೆಲಸ ಮುಗಿದ ಬಳಿಕ ಮತ್ತೆ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎನ್ನುತ್ತಿದ್ದಾರಂತೆ.

Leave a Comment

error: Content is protected !!