Suriya: ತಮಿಳು ನಟ ಸೂರ್ಯ ತಮ್ಮ ಪತ್ನಿಯಿಂದ ದೂರ ಆಗಿರೋದ್ಯಾಕೆ? ಸದ್ಯದಲ್ಲೇ ಕೇಳಿಬರುತ್ತಾ ಡಿವೋರ್ಸ್ ಸುದ್ಧಿ!

Actor Suriya ತಮಿಳು ಚಿತ್ರರಂಗದ ಖ್ಯಾತ ನಟ ಸೂರ್ಯ(Suriya) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸಿನಿಮಾ ಹಿನ್ನೆಲೆಯಿಂದ ಚಿತ್ರರಂಗಕ್ಕೆ ಕಾಲಿಟ್ಟಿದ್ದರು ಕೂಡ ತಮ್ಮ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಸಂಪಾದಿಸುತ್ತಾರೆ. ಇಂದಿಗೂ ಪ್ರಥಮ ಭಿನ್ನ ವಿಭಿನ್ನವಾದ ಪಾತ್ರಗಳ ಮೂಲಕ ಪರಭಾಷ ಸಿನಿಮಾ ಪ್ರೇಮಿಗಳನ್ನು ಕೂಡ ತನ್ನ ಅಭಿಮಾನಿಗಳಾಗುವಂತೆ ಮಾಡಿಕೊಂಡಿದ್ದಾರೆ.

ಆದರೆ ಇತ್ತೀಚಿನ ದಿನಗಳಲ್ಲಿ ಅವರ ವೈಯಕ್ತಿಕ ಜೀವನದಲ್ಲಿ ಕೆಲವೊಂದು ಸಮಸ್ಯೆಗಳು ಬಹಿರಂಗವಾಗಿ ಎಲ್ಲಾ ಕಡೆ ಆ ಸುದ್ದಿಗಳು ಓಡಾಡುತ್ತಿವೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಟಿ ಜ್ಯೋತಿಕ(Actress Jyothika) ಅವರನ್ನು ನಟಸೂರ್ಯ ಅವರು ಪ್ರೀತಿಸಿ ಮದುವೆ ಆಗುತ್ತಾರೆ. ಆದರು ಸಿನಿಮಾ ನಟಿಯನ್ನು ಪ್ರೀತಿಸಿ ಮದುವೆಯಾಗಿರುವುದು ಅವರ ತಂದೆ ಶಿವಕುಮಾರ್ ಅವರಿಗೆ ಇಷ್ಟ ಇರಲಿಲ್ಲ. ಹೀಗಾಗಿ ಮದುವೆ ಆದ ನಂತರ ನಟಿಸುವ ಹಾಗೆ ಇಲ್ಲ ಎನ್ನುವ ಶರತ್ತನ್ನು ವಿಧಿಸಿ ಮದುವೆ ಮಾಡಿಸಿದ್ದರು.

ಆದರೆ ಕೆಲವು ವರ್ಷಗಳ ಕಾಲ ಸುಮ್ಮನಿದ್ದ ನಟಿ ಜ್ಯೋತಿಕಾ ಅವರು 2015 ರಿಂದ ಮತ್ತೆ ನಟಿಸಲು ಪ್ರಾರಂಭಿಸಿದ್ದರು. ಇದು ನಟ ಸೂರ್ಯ(Actor Suriya) ಅವರ ತಂದೆಗೆ ಮತ್ತೆ ಅಸಮಾಧಾನ ಮೂಡುವಂತೆ ಮಾಡಿ ಮನೆಯಲ್ಲಿ ಜಗಳ ಪ್ರಾರಂಭವಾಗುವಂತೆ ಮಾಡಿತು. ಇದರಿಂದಾಗಿ ಅಸಮಾಧಾನ ಗೊಂಡ ಸೂರ್ಯ ತನ್ನ ಮಕ್ಕಳು ಹಾಗೂ ಹೆಂಡತಿಯ ಜೊತೆಗೆ ಈಗ ಮುಂಬೈನಲ್ಲಿ ಜೀವನ ನಡೆಸುತ್ತಿದ್ದಾರೆ.

ತಮಿಳು ಚಿತ್ರರಂಗದ ಅತ್ಯಂತ ದೊಡ್ಡ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿರುವ ಸೂರ್ಯ(Suriya) ಅವರ ವೈಯಕ್ತಿಕ ಜೀವನ ಈ ರೀತಿಯಲ್ಲಿ ಹೊರಬಂದಿರುವುದು ನಿಜಕ್ಕೂ ಕೂಡ ಅವರಿಗೆ ಮುಜುಗರ ಉಂಟಾಗುವಂತೆ ಮಾಡಿದೆ ಎಂದು ಹೇಳಬಹುದಾಗಿದೆ‌. ಮುಂದಿನ ದಿನಗಳಲ್ಲಿ ಇದು ಯಾವ ತಿರುವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕೂಡ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!