Suniel Shetty ಮಗಳ ಮದುವೆಯಲ್ಲಿ ಭರ್ಜರಿ ಸ್ಟೆಪ್ ಹಾಕಿದ ಸುನಿಲ್ ಶೆಟ್ಟಿ. ಫೋಟೋ ವೈರಲ್ ನೆಟ್ಟಿಗರು ಫುಲ್ ಖುಷ್.


Suniel Shetty ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಹಾಗೂ ಬ್ಯುಸಿನೆಸ್ ಮ್ಯಾನ್ ಆಗಿರುವ ಸುನಿಲ್ ಶೆಟ್ಟಿ ಅವರು ತಮ್ಮ ಮಗಳು ಅಥಿಯಾ ಶೆಟ್ಟಿ ಅವರನ್ನು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡದ ಉಪನಾಯಕ(Vice Captain) ಹಾಗೂ ಖ್ಯಾತ ಕ್ರಿಕೆಟಿಗ ಆಗಿರುವ ಕೆಎಲ್ ರಾಹುಲ್ ಅವರಿಗೆ ಮದುವೆ ಮಾಡಿಸಿಕೊಟ್ಟಿದ್ದಾರೆ. ಸಾಕಷ್ಟು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಭರದಿಂದ ಓಡಾಡುತ್ತಿರುವ ಟ್ರೆಂಡಿಂಗ್ ಸುದ್ದಿ ಇದಾಗಿದೆ.

ಸಾಕಷ್ಟು ವರ್ಷಗಳಿಂದ ಇಬ್ಬರೂ ಕೂಡ ಪರಸ್ಪರ ಪ್ರೀತಿಸಿ ಡೇಟಿಂಗ್ ಮಾಡುತ್ತಿದ್ದರು. ಈ ಬಗ್ಗೆ ಸಂಪೂರ್ಣ ವಿಚಾರ ಎರಡು ಕುಟುಂಬಸ್ಥರಿಗೂ ಗೊತ್ತಿದ್ದರೂ ಕೂಡ ಮದುವೆ ಆಗುವ ತನಕವೂ ಕೂಡ ಎಲ್ಲಿಯೂ ಇವರಿಬ್ಬರ ಪ್ರೀತಿಯ ಕುರಿತಂತೆ ಬಾಯಿ ಬಿಟ್ಟಿರಲಿಲ್ಲ. ಕೊನೆಗೂ ಈಗ ಜನವರಿಯಲ್ಲಿ(January) ಮದುವೆ ಆಗುವ ಮೂಲಕ ಎಲ್ಲಾ ವದಂತಿಗೆ ತೆರೆ ಎಳೆದು ದಾಂಪತ್ಯ ಜೀವನಕ್ಕೆ ಈ ನವ ಜೋಡಿಗಳು ಕಾಲಿಟ್ಟಿದ್ದಾರೆ. ನಿಜಕ್ಕೂ ಇದು ಕ್ರಿಕೆಟ್ ಹಾಗೂ ಸಿನಿಮಾ ರಂಗಕ್ಕೆ ಅತ್ಯಂತ ಸಂತೋಷ ನೀಡುವಂತಹ ಸುದ್ದಿಯಾಗಿದೆ.

suniel shetty dancing at daughter’s wedding

ಇನ್ನು ಮದುವೆ ಫೋಟೋ ಹಾಗೂ ವಿಡಿಯೋ ತುಣುಕುಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದು ಶೆಟ್ರ ಮನೆಯ ಮದುವೆ ಸಂಭ್ರಮವನ್ನು ನೋಡಲು ಪ್ರತಿಯೊಬ್ಬರೂ ಕೂಡ ಕಾತರರಾಗಿದ್ದರು. ಅದರಲ್ಲಿಯೂ ವಿಶೇಷವಾಗಿ ಸುನಿಲ್ ಶೆಟ್ಟಿ ಅವರು ತಮ್ಮ ಮಗಳ ಸಿನಿಮಾದ ಹಾಡಿಗೆ ಕುಣಿದಂತಹ ಫೋಟೋ ಕೂಡ ಇನ್ಸ್ಟಾಗ್ರಾಮ್ ನಲ್ಲಿ ಸಖತ್ ವೈರಲ್(Viral) ಆಗಿದೆ.

ಒಟ್ಟಾರೆಯಾಗಿ ಸುನಿಲ್ ಶೆಟ್ಟಿ ಅವರು ಒಬ್ಬ ಅಪ್ಪನಾಗಿ(Being A Father) ತಮ್ಮ ಮಗಳ ಮದುವೆಯನ್ನು ಕನಸು ಕಂಡಂತೆ ಮನಸು ಮಾಡಿದ್ದಾರೆ ಎಂದು ಸಂತೋಷದಿಂದ ಹೇಳಬಹುದಾಗಿದೆ. ಒಬ್ಬ ಅಪ್ಪನಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಮಗಳ ಮದುವೆಯನ್ನು ಅದ್ದೂರಿಯಾಗಿ ಎಲ್ಲರೂ ಮೆಚ್ಚುವಂತೆ ಆಚರಿಸಬೇಕು ಎನ್ನುವುದಾಗಿ ಬಯಸುತ್ತಾರೆ. ಸುನಿಲ್ ಶೆಟ್ಟಿ ಕೂಡ ಅದಕ್ಕೆ ಹೊರತಾಗಿಲ್ಲ ಹಾಗೂ ಅದನ್ನು ಸಂಪೂರ್ಣವಾಗಿ ಮಾಡಿ ತೋರಿಸಿದ್ದಾರೆ. ಈ ಮದುವೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.


Leave A Reply

Your email address will not be published.