Ambareesh: ಮಂಡ್ಯದ ಗಂಡು ಅಂಬಿಯ ಮೇಲೆ ಸುಮಲತಾ ಅಂಬರೀಶ್ ಗೆ ಲವ್ ಆಗಿದ್ದು ಯಾವ ಸಿನಿಮಾದಲ್ಲಿ? ಇಲ್ಲಿ ನೋಡಿ ಫುಲ್ ಡೀಟೇಲ್ಸ್.

Sumalatha Ambareesh ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಹಲವಾರು ಜನ ಪ್ರೀತಿಸಿ ಮದುವೆಯಾದ ಉದಾಹರಣೆಗಳಿವೆ ಅವರಲ್ಲಿ ರೆಬೆಲ್ ಸ್ಟಾರ್ ಅಂಬರೀಶ್(Rebel Star Ambareesh) ಹಾಗೂ ಸುಮಲತಾ ಅಂಬರೀಶ್ ರವರ ಲವ್ ಸ್ಟೋರಿ ಕೂಡ ಪ್ರತಿಯೊಬ್ಬರು ಮೆಚ್ಚುವಂತದ್ದು. ನಟ ಅಂಬರೀಶ್ ರವರು ಕೇವಲ ಸಿನಿಮಾ ರಂಗದಲ್ಲಿ ನಟನೆಯ ವಿಚಾರದಲ್ಲಿ ಮಾತ್ರವಲ್ಲದೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ವಿಚಾರದಲ್ಲಿ ಕೂಡ ಸದಾ ಮುಂದು.

ಅದಕ್ಕಾಗಿಯೇ ಅವರನ್ನು ಕನ್ನಡ ಚಿತ್ರರಂಗದಲ್ಲಿ ಕಲಿಯುಗದ ಕರ್ಣ ಎನ್ನುವುದಾಗಿ ಪ್ರೀತಿಯಿಂದ ಕರೆಯಲಾಗುತ್ತಿತ್ತು. ಹಲವಾರು ಮಾಸ್ ಹಾಗೂ ಕಮರ್ಷಿಯಲ್ ಸಿನಿಮಾಗಳಲ್ಲಿ ಹೆಚ್ಚಾಗಿ ಅಂಬರೀಶ್(Ambareesh) ರವರು ನಟಿಸುತ್ತಿದ್ದ ಕಾರಣ ಪಾಡ್ಯಹೈಕಳ ನೆಚ್ಚಿನ ನಟನಾಗಿ ಅಂಬರೀಶ್ ರವರು ಕಾಣಿಸಿಕೊಳ್ಳುತ್ತಿದ್ದರು. ಇನ್ನು ಪ್ರೀತಿಸಿ ಮದುವೆಯಾಗಿದ್ದ ಅಂಬರೀಶ್ ಹಾಗೂ ಸುಮಲತಾ ನಡುವೆ ಪ್ರೀತಿ ಯಾವಾಗ ಮೂಡಿತು ಯಾವ ಸಿನಿಮಾದಲ್ಲಿ ಮೂಡಿತು ಎಂಬುದನ್ನು ತಿಳಿಯೋಣ ಬನ್ನಿ.

1988ರಲ್ಲಿ ತೆರೆ ಕಂಡಂತಹ ನವದೆಹಲಿ ಎನ್ನುವ ಸಿನಿಮಾದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಜೊತೆಗೆ ಪ್ರಮುಖ ಪಾತ್ರದಲ್ಲಿ ಸುಮಲತಾ ಅಂಬರೀಶ್(Sumalatha Ambareesh) ರವರು ಪ್ರಮುಖವಾಗಿ ಕಾಣಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಇವರ ನಡುವೆ ಪರಿಚಯ ಆಗಿ ಪರಿಚಯ ಸ್ನೇಹಕ್ಕೆ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರೂ ಕೂಡ ಮನೆಯವರ ಸಮ್ಮುಖದಲ್ಲಿ ಮದುವೆಯಾಗುತ್ತಾರೆ.

ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಪ್ರೀತಿಸಿ ಮದುವೆ ಆಗಿರುವ ಹಲವಾರು ಜೋಡಿಗಳಿಗೆ ಸುಮಲತಾ ಅಂಬರೀಶ್ ಹಾಗೂ ಅಂಬರೀಶ್ ಜೋಡಿ ಮಾದರಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. ಅದಾದ ನಂತರವೂ ಕೂಡ ಇಬ್ಬರು ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಅಂಬರೀಶ್(Sumalatha Ambareesh) ಜೊತೆಗೆ ನಟಿಸಿರುವಂತಹ ಯಾವ ಸಿನಿಮಾ ನಿಮ್ಮ ನೆಚ್ಚಿನ ಸಿನಿಮಾ ಎಂಬುದನ್ನು ಕಾಮೆಂಟ್ ಮಾಡಿ.

Leave a Comment

error: Content is protected !!