ಮದುವೆ ಆಗೋಕೆ ರೆಡಿಯಾದ ಜೂನಿಯರ್ ರೆಬೆಲ್ ಸ್ಟಾರ್. ಅಭಿಷೇಕ್ ಅಂಬರೀಶ್ ಮದುವೆ ಯಾವಾಗ ಹುಡುಗಿ ಯಾರು ಗೊತ್ತಾ?

ರೆಬೆಲ್ ಸ್ಟಾರ್ ಅಂಬರೀಶ್ ಅವರ ನಂತರ ಅವರ ಉತ್ತರಾಧಿಕಾರಿಯಾಗಿ ಕನ್ನಡ ಚಿತ್ರರಂಗಕ್ಕೆ ಅಮರ್ ಚಿತ್ರದ ಮೂಲಕ ಅಭಿಷೇಕ್ ಅಂಬರೀಶ್ ಅವರು ಕಾಲಿಡುತ್ತಾರೆ. ಅಭಿಷೇಕ್ ಅಂಬರೀಶ್ ಅವರಿಗೆ ಮೊದಲ ಸಿನಿಮಾದಲ್ಲಿಯೇ ದೊಡ್ಡಮಟ್ಟದ ಮೆಚ್ಚುಗೆ ಕನ್ನಡ ಚಿತ್ರರಂಗದ ಎಲ್ಲಾ ಗಣ್ಯರಿಂದಲೂ ಕೂಡ ಸಿಗುತ್ತದೆ.

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ತಮ್ಮ ಸ್ವಂತ ತಮ್ಮನಂತೆ ಅಭಿಷೇಕ್ ಅಂಬರೀಶ್ ಅವರನ್ನು ಕನ್ನಡ ಚಿತ್ರರಂಗದಲ್ಲಿ ಸಪೋರ್ಟ್ ಮಾಡುತ್ತಾರೆ ಹಾಗೂ ಮಾಡುತ್ತಿದ್ದಾರೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ತಾಯಿ ಸುಮಲತಾ ಅಂಬರೀಶ್ ಕೂಡ ಅಂಬರೀಶ್ ಅವರ ಹಾದಿಯಲ್ಲಿ ಅವರ ಮಗ ನಡೆಯಲಿ ಎಂಬ ಮಹಾದಾಸೆಯನ್ನು ಹೊಂದಿದ್ದಾರೆ.

ಇನ್ನೂ ಇವೆಲ್ಲ ವಿಚಾರ ನಡೆಯುತ್ತಿರುವ ನಡುವಲ್ಲಿಯೇ ಈಗ ಅಭಿಷೇಕ್ ಅಂಬರೀಶ್ ಅವರ ಮದುವೆ ವಿಚಾರ ದೊಡ್ಡದಾಗಿ ಸದ್ದು ಮಾಡುತ್ತಿದೆ. ಹೌದು ಮಿತ್ರರೇ, ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರ ಮದುವೆ ವಿಚಾರವನ್ನು ತೆರೆ ಮರೆಯಲ್ಲಿಯೇ ಅವರ ತಾಯಿ ಆಗಿರುವ ಸುಮಲತಾ ಅಂಬರೀಶ್ ಅವರು ಮಾಡುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಮದುವೆ ಡೇಟ್ ಇನ್ನೂ ಕೂಡ ಫಿಕ್ಸ್ ಆಗಿಲ್ಲ ಆದರೆ ಈಗಾಗಲೇ ಎಂಗೇಜ್ಮೆಂಟ್ ಯಾವಾಗ ಹಾಗೂ ಎಲ್ಲಿ ಎಂಬುದು ಫಿಕ್ಸ್ ಆಗಿದೆ ಎಂಬುದಾಗಿ ತಿಳಿದು ಬಂದಿದೆ.

Sumalata ambareesh spoke on her son abhishek ambareesh's engagement and marraige
Abhishek ambareesh engagement

ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರ ಎಂಗೇಜ್ಮೆಂಟ್ ಇದೆ ಡಿಸೆಂಬರ್ 11 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ ಎಂಬುದಾಗಿ ಒಳ ಮೂಲಗಳಿಂದ ತಿಳಿದು ಬಂದಿದ್ದು ಇದರ ಉಸ್ತುವಾರಿಯನ್ನು ಸ್ವತಹ ಅಭಿಷೇಕ್ ಅಂಬರೀಶ್ ಅವರ ತಾಯಿಯಾಗಿರುವ ಸುಮಲತಾ ಅವರೇ ನೋಡಿಕೊಳ್ಳುತ್ತಿದ್ದಾರೆ ಎಂಬುದಾಗಿ ಕೂಡ ಸುದ್ದಿ ಇದೆ. ಹುಡುಗಿ ಯಾರು ಮದುವೆ ಯಾವಾಗ ಎಂಬ ಅಧಿಕೃತ ಮಾಹಿತಿಗಳು ಇನ್ನೂ ಕೂಡ ಹೊರಬಂದಿಲ್ಲ ಸದ್ಯಕ್ಕೆ ಅಭಿಷೇಕ್ ಅಂಬರೀಶ್ ಅವರು ಬ್ಯಾಡ್ ಮ್ಯಾನರ್ಸ್ ಸಿನಿಮಾದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

Leave a Comment

error: Content is protected !!