ನಾವೆಲ್ಲಾ ನಮಗೆ ಸಹಾಯ ಮಾಡಿದವರಿಗೆ ಅಥವಾ ನಮ್ಮ ಆಪ್ತ ವರ್ಗದವರಿಗೆ ಉಡುಗೊರೆ ಮೂಲಕ ಹೊಸ ಬಟ್ಟೆಯನ್ನು ಅಥವಾ ನೂರಾರು₹ಬೆಲೆಬಾಳುವ ಯಾವುದಾದರೂ ಚಿಕ್ಕ ವಸ್ತುವನ್ನು ಕೊಡುತ್ತವೆ. ಆದರೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೊಡುವ ಉಡುಗೊರೆಗಳು ಅವರ ಹಾಗೆ ಲಕ್ಸುರಿ ಆಗಿರುತ್ತೆ. ನಾವು ಊಹೆ ಕೂಡ ಮಾಡಲಾಗದಂಥ ಬೆಲೆಯ ವಸ್ತುಗಳನ್ನು ಇವರು ಗಿಫ್ಟ್ ಕೊಡ್ತಾರೆ.

ಕನ್ನಡ ಚಿತ್ರರಂಗದ ಮಾಚಯ್ಯ ಕಿಚ್ಚ ಸುದೀಪ್ ಅವರು ಇದೀಗ ತಮ್ಮ ಸಿನಿಮಾದ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ ಕೊರಿಯೋಗ್ರಾಫರ್ ಗೆ ಉಡುಗೊರೆಯೊಂದನ್ನು ನೀಡಿದ್ದಾರೆ. ಸುದೀಪ್ ಅವರ ವಿಕ್ರಾಂತ್ ರೋಣ ಎಂಬ ಸಿನಿಮಾ ದಲ್ಲಿ ನಟನೆ ಹಾಗೂ ನಿರ್ಮಾಣ ಮಾಡುತ್ತಿದ್ದಾರೆ. ಇದು ಪ್ಯಾನ್ ಇಂಡಿಯನ್ ಸಿನಿಮಾ ಆಗಿದ್ದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದ್ದೂರಿ ಮೇಕಿಂಗ್ ನೊಂದಿಗೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದೆ.

ವಿಕ್ರಾಂತ್ ರೋಣ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಹಾಗೆ ಹಾಡುಗಳ ಶೂಟಿಂಗ್ ಕೂಡ ಮುಗಿದಿದೆ. ವಿಕ್ರಾಂತ್ ದ್ರೋಣ ಸಿನಿಮಾದಲ್ಲಿ ಗದಂಗ್ ರುಕ್ಕಮ್ಮ ಎಂಬ ಐದು ನಿಮಿಷದ ಐಟಂ ಸಾಂಗ್ ಚಿತ್ರೀಕರಿಸಲಾಗಿದೆ. ಈ ಹಾಡಿನಲ್ಲಿ ಬಾಲಿವುಡ್ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಸುದೀಪ್ ಅವರ ಜೊತೆ ಹೆಜ್ಜೆ ಹಾಕಿದ್ದಾರೆ. ಮತ್ತು ಈ ಹಾಡಿನ ನೃತ್ಯ ಸಂಯೋಜನೆಯನ್ನು ತೆಲುಗು ಚಿತ್ರರಂಗದ ಖ್ಯಾತ ಕೊರಿಯೋಗ್ರಫರ್ ಜಾನಿ ಮಾಸ್ಟರ್ ಅವರು ಸಂಯೋಜನೆ ಮಾಡಿದ್ದಾರೆ.

ಈ ಒಂದೇ ಒಂದು ಹಾಡನ್ನು ಚಿತ್ರೀಕರಿಸಲು ಐದು ಕೋಟಿಗೂ ಅಧಿಕ ಖರ್ಚು ಆಗಿದೆ ಕೇವಲ ಐದು ನಿಮಿಷ ಹೆಜ್ಜೆಹಾಕಲು ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಐದು ಕೋಟಿ ರೂಪಾಯಿಗಳ ಆದಾಯ ನೀಡಲಾಗಿದೆ. ಅದ್ದೂರಿಯಾಗಿ ಮೂಡಿ ಬಂದ ಈ ನೃತ್ಯ ಸಂಯೋಜಕ ಚಲನೆಯನ್ನು ನೋಡಿ ಸ್ವತಃ ಕಿಚ್ಚ ಸುದೀಪ್ ಅವರೇ ಫುಲ್ ಖುಷಿಯಾಗಿದ್ದಾರೆ. ಕಂಪ್ಲೀಟ್ ನೃತ್ಯದ ವಿಡಿಯೋವನ್ನು ನೋಡಿದ ಮೇಲೆ ಸುದೀಪ್ ಅವರಿಗೆ ಖುಷಿಯನ್ನು ತಡೆದುಕೊಳ್ಳಲಾಗದೆ ಕೊರಿಯೋಗ್ರಫರ್ ಜಾನಿ ಮಾಸ್ಟರ್ ಗೆ ದುಬಾರಿ ಉಡುಗೊರೆ ನೀಡಿದ್ದಾರೆ.

ಹೌದು ಗೆಳೆಯರೆ, ನಟ ಕಿಚ್ಚ ಸುದೀಪ್ ಅವರು ಜಾನಿ ಮಾಸ್ಟರ್ ಅವರಿಗೆ ಮಹಿಂದ್ರಾ ಥಾರ್ ಜೀಪ್ ವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಸುದೀಪ್ ಅವರು ಯಾವಾಗಲೂ ತಮ್ಮ ಸ್ನೇಹಿತರಿಗೆ ಗಿಫ್ಟ್ ಗಳನ್ನು ನೀಡುತ್ತಲೇ ಇರುತ್ತಾರೆ. ಹಾಗೆ ಸಿನಿಮಾಗಳಲ್ಲಿ ಅಭಿನಯಿಸುವ ಸಹಕಲಾವಿದರಿಗೆ ಕೂಡ ಕಿಚ್ಚ ಸುದೀಪ್ ಉಡುಗೊರೆ ಕೊಡುತ್ತಾ ಇರುತ್ತಾರೆ. ಆದರೆ ಜಾನಿ ಮಾಸ್ಟರ್ ಗೆ ಕೊಟ್ಟಿರುವ ಈ ದುಬಾರಿ ಉಡುಗೊರೆ ಬಹಳ ಸ್ಪೆಷಲ್ ಆಗಿದೆ. ಈ ಉಡುಗೊರೆಯ ಬೆಲೆ ಹದಿನೇಳು ಲಕ್ಷ ರೂಪಾಯಿಗಳು. ಸುದೀಪ್ ಅವರು ಹದಿನೇಳು ಲಕ್ಷ ಬೆಲೆಬಾಳುವ ಜೀಪ್ ಉಡುಗೊರೆಯಾಗಿ ನೀಡಿದ್ದಕ್ಕೆ ಜಾನಿ ಮಾಸ್ಟರ್ ಗೆ ಸಕತ್ ಖುಷಿಯಾಗಿದೆ. ಜೀಪ್ಗಿ ಮುಂದೆ ನಿಂತು ಕೊಂಡು ಸುದೀಪ್ ಜೊತೆ ಫೋಟೋ ತೆಗೆಸಿಕೊಂಡು ಈ ವಿಷಯವನ್ನು ಹಂಚಿಕೊಂಡಿದ್ದಾರೆ.

By admin

Leave a Reply

Your email address will not be published.