15 ವರ್ಷಗಳ ಹಿಂದೆ ಥಟ್ ಅಂತ ಹೇಳಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಸುದೀಪ್ ಸೋಮೇಶ್ವರ್ ಸರ್ ಮುಂದೆ ಕಾಲು ಮೇಲೆ ಕಾಲು ಹಾಕಿ ಕುಳಿತು ಕೊಂಡ ವಿಡಿಯೋ ಇದೀಗ ವೈರಲ್

ಥಟ್ ಅಂತ ಹೇಳಿ ಕಾರ್ಯಕ್ರಮ ಕರ್ನಾಟಕದ ಅತ್ಯಂತ ಜನಪ್ರಿಯ ಕಾರ್ಯಕ್ರಮ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಈ ಕಾರ್ಯಕ್ರಮವನ್ನು ತಪ್ಪದೇ ವೀಕ್ಷಿಸುತ್ತಾರೆ. 2002 ರಲ್ಲಿ ಥಟ್ ಅಂತ ಹೇಳಿ ಕಾರ್ಯಕ್ರಮ ಪ್ರಾರಂಭವಾಗಿತ್ತು. ಈ ಕಾರ್ಯಕ್ರಮ ಸುಮಾರು 3 ಸಾವಿರಕ್ಕೂ ಹೆಚ್ಚು ಎಪಿಸೋಡ್ ಗಳನ್ನು ಕಂಪ್ಲೀಟ್ ಮಾಡಿದೆ. ಹಾಗೆ ಯಾವುದೇ ಪ್ರಾಯೋಜಕರಿಲ್ಲದೆ 3 ಸಾವಿರಕ್ಕೂ ಹೆಚ್ಚು ಎಪಿಸೋಡ್ ಗಳನ್ನು ಕಂಪ್ಲೀಟ್ ಮಾಡಿದ್ದಕ್ಕೆ ವಿಶ್ವದ ಲಿಮ್ಕಾ ರೆಕಾರ್ಡ್ ಗೆ ಈ ಕಾರ್ಯಕ್ರಮ ಸೇರ್ಪಡೆಯಾಗಿದೆ.

ದೂರದರ್ಶನದಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮದಿಂದ ಅಗಾಧವಾದ ಜ್ಞಾನ ಭಂಡಾರವನ್ನು ಸಂಪಾದಿಸಬಹುದು. ಥಟ್ ಅಂತ ಹೇಳಿ ಕಾರ್ಯಕ್ರಮ ಹೆಸರನ್ನು ಕೇಳಿದ ತಕ್ಷಣವೇ ನಮಗೆಲ್ಲ ನೆನಪಾಗುವುದು ಸೋಮೇಶ್ವರ ರಾವ್. ಇವರು ಸಾಮಾನ್ಯ ವ್ಯಕ್ತಿಯಲ್ಲ. ಇವರನ್ನು ಕ್ವಿಜ್ ಮಾಸ್ಟರ್ ಎಂದೇ ಕರೆಯುತ್ತಾರೆ. ಮೂವತ್ತು ಸಾವಿರಕ್ಕೂ ಹೆಚ್ಚು ಪ್ರಶ್ನೆ ಮೂವತ್ತು ಸಾವಿರಕ್ಕೂ ಹೆಚ್ಚು ಪುಸ್ತಕಗಳು , ನಿಂತು ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಜೊತೆಗೆ ಮೂರು ಸಾವಿರಕ್ಕೂ ಹೆಚ್ಚು ಎಪಿಸೋಡ್ ಗಳನ್ನು ಕಂಪ್ಲೀಟ್ ಮಾಡಿದ ವಿಶ್ವದ ಏಕೈಕ ಕ್ವಿಜ್ ಕಾರ್ಯಕ್ರಮದ ಸಾರಥಿ ಇವರು.

ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಕನ್ನಡಿಗನ ಹೆಸರು ಸೇರ್ಪಡೆಯಾಗಿದೆ ಎಂದರೆ ಇದು ಸುಲಭದ ಕೆಲಸವಲ್ಲ ಇಂತಹ ಒಂದು ವಿಶಿಷ್ಟ ಹಾಗೂ ಸಾಮರ್ಥ್ಯವುಳ್ಳ ವ್ಯಕ್ತಿ ಸೋಮೇಶ್ವರ ಅವರು. ಇನ್ನೊಂದು ವಿಶೇಷತೆಯೇನೆಂದರೆ ತುಂಬಿದ ಕೊಡ ತುಳುಕುವುದಿಲ್ಲ ಎಂಬಂತೆ ಇವರು ಇಡೀ ವಿಶ್ವವೇ ತಿರುಗಿ ನೋಡುವಂಥ ಸಾಧನೆಯನ್ನು ಮಾಡಿದರೂ ಕೂಡ ಸರಳ ಮತ್ತು ಸಾಧಾರಣ ಜೀವನವನ್ನು ನಡೆಸುತ್ತಾರೆ. ಐಷಾರಾಮಿ ಮತ್ತು ಆಡಂಬರದ ಜೀವನ ಇವು ಇಷ್ಟವಿಲ್ಲ. ನಗುಮುಖದಿಂದಲೇ ನಿಷ್ಕಲ್ಮಶ ಮನಸ್ಸಿನಿಂದ ಪ್ರತಿಯೊಬ್ಬರನ್ನು ಸತ್ಕರಿಸುವ ಮನೋಭಾವ ಇವರದ್ದು.

2006 ನೇ ಇಸವಿಯಲ್ಲಿ ಡಾ.ಸೋಮೇಶ್ವರ್ ಅವರು ಕಿಚ್ಚ ಸುದೀಪ್ ಅವರನ್ನು ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಸಂದರ್ಶನ ಮಾಡಿದ ವೀಡಿಯೋವೊಂದು ಇದೀಗ ಯೂಟ್ಯೂಬ್ ನಲ್ಲಿ ಸಂಚಲನ ಸೃಷ್ಟಿ ಮಾಡಿದೆ.ಕಿಚ್ಚ ಸುದೀಪ್ ಅವರ ಮೈ ಆಟೋಗ್ರಾಫ್ ಚಿತ್ರ ಬಿಡುಗಡೆಯಾದ ನಂತರ ಈ ಸಂದರ್ಶನ ನಡೆದಿತ್ತು. ಹಳೆ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಸುದೀಪ್ ಅವರ ನಡವಳಿಕೆ ಅಭಿಮಾನಿಗಳಿಗೆ ಕೊಂಚ ಬೇಸರ ತಂದಿದೆ. ಈ ವಿಡಿಯೋ ಹದಿನೈದು ವರ್ಷದ ಹಳೆಯ ವಿಡಿಯೋ ಕೂಡ ಸುದೀಪ್ ಅವರು ಒಂದು ಸೋಮೇಶ್ವರ್ ಸರ್ ಮುಂದೆ ಕುಳಿತುಕೊಂಡ ರೀತಿ ಅಸಹಜ ಎಂಬುದು ಹಲವರ ಅಭಿಪ್ರಾಯ.

ಸುಮಾರು ಒoದು ಗಂಟೆಯ ಕಾಲ ನಡೆದ ಸಂದರ್ಶನದಲ್ಲಿ ಸುದೀಪ್ ಅವರು ಹಿರಿಯರಾದ ಸೋಮೇಶ್ವರ್ ಸರ್ ಮುಂದೆ ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಂಡಿದ್ದರು. ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುವುದು ತಪ್ಪಲ್ಲ ಆದರೆ ಸೋಮೇಶ್ವರ್ ಸರ್ ಅವರಂತಹ ಸಾಧಕರ ಮುಂದೆ ಈ ರೀತಿಯಾಗಿ ಕುಳಿತುಕೊಳ್ಳುವುದು ಸಮಂಜಸವಲ್ಲ ಎಂದು ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಕಿಚ್ಚ ಸುದೀಪ್ ಅವರು ಸೂಪರ್ ಸ್ಟಾರ್ ಆಗಿರಬಹುದು. ಆದರೆ ಸುದೀಪ್ ಅವರಿಗಿಂತ ಸೋಮೇಶ್ವರ್ ಅವರೇ ದೊಡ್ಡ ಹೀರೋ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

Leave a Comment

error: Content is protected !!